Unemployment in Pakistan: ಜವಾನನ ಹುದ್ದೆಗೆ ಅರ್ಜಿ ಸಲ್ಲಿಸಿದ 15 ಲಕ್ಷ ಜನ..!

ಪದವೀಧರರು ಸೇರಿದಂತೆ ಶೇ. 40 ರಷ್ಟು ವಿದ್ಯಾವಂತರು ದೇಶದಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ಯೋಜನೆ ಮತ್ತು ಅಭಿವೃದ್ಧಿಯ ಸೆನೆಟ್ ಸ್ಥಾಯಿ ಸಮಿತಿಗೆ ನೀಡಿದ ಮಾಹಿತಿಯಲ್ಲಿ ಪಾಕಿಸ್ತಾನ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಎಕನಾಮಿಕ್ಸ್ ಎತ್ತಿ ತೋರಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಕೊರೊನಾ ವೈರಸ್(Coronavirus)‌ ದೇಶದ ನಿರುದ್ಯೋಗದ ಮೇಲೆ ಭಾರಿ ಪ್ರಭಾವ ಬೀರಿದೆ ಎಂದು ಇತ್ತೀಚೆಗೆ ಮೋದಿ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿತ್ತು. ಇದು ಭಾರತದಲ್ಲಿ ಮಾತ್ರವಲ್ಲ, ಜಾಗತಿಕ ನಿರುದ್ಯೋಗ(Unemployment) ಪ್ರಮಾಣವೂ ಹೆಚ್ಚಾಗಿದೆ. ಕೋವಿಡ್ - 19(COVID-19) ಮಿಲಿಯನ್‌ ಗಟ್ಟಲೆ ಜನರ ಪ್ರಾಣವನ್ನು ಮಾತ್ರವಲ್ಲ ಅನೇಕರ ಜೀವನ, ಉದ್ಯೋಗವನ್ನೂ ಕಸಿದುಕೊಂಡಿದೆ. ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ(Pakistan)ದಲ್ಲೂ ಉದ್ಯೋಗವಿಲ್ಲದೆ ಸಾಕಷ್ಟು ಜನರು ಜೀವನ ನಡೆಸಲು ಪರದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ದೇಶದಲ್ಲಿ ನಿರುದ್ಯೋಗದ ಪ್ರಮಾಣವು ಶೇಕಡಾ 6.5ರಷ್ಟಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಆದರೆ, ಇತ್ತೀಚಿನ ಡೇಟಾವೊಂದು ಇದು ಸುಳ್ಳು ಎಂದು ತೋರಿಸುತ್ತದೆ. ಪಾಕಿಸ್ತಾನ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಎಕನಾಮಿಕ್ಸ್ (PIDE) ಪ್ರಕಾರ, ನಿರುದ್ಯೋಗ ದರವು ಶೇಕಡ 16ಕ್ಕಿಂತ ಹೆಚ್ಚಾಗಿದೆ. ಪಾಕ್‌ನಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ದರವನ್ನು ಎತ್ತಿ ತೋರಿಸಿದ PIDE, ದೇಶದಲ್ಲಿ ಕನಿಷ್ಠ 24 ಶೇಕಡಾ ವಿದ್ಯಾವಂತರು ಈ ಸಮಯದಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿರುವ ಬಗ್ಗೆ ಡಾನ್ ವರದಿ ಮಾಡಿದೆ.

ಜವಾನ ಹುದ್ದೆಗಾಗಿ ಇತ್ತೀಚೆಗೆ ಜಾಹೀರಾತು ನೀಡಿದ ಹೈಕೋರ್ಟ್‌ನಲ್ಲಿ 1.5 ಮಿಲಿಯನ್ ಜನರು ಅರ್ಜಿ ಸಲ್ಲಿಸಿದ್ದಾರೆ. ಇದು ಪಾಕ್‌ನ ನಿರುದ್ಯೋಗದ ವಾಸ್ತವ ಪರಿಸ್ಥಿತಿಯನ್ನು ಹೆಚ್ಚು ಪ್ರತಿಫಲಿಸುತ್ತದೆ ಎಂದು ಪಾಕಿಸ್ತಾನ ಮೂಲದ ಪತ್ರಿಕೆ ವರದಿ ಮಾಡಿದೆ. ಅಲ್ಲದೆ, ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಎಂಫಿಲ್‌ ಪದವಿ ಪಡೆದವರೂ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:Create a Perfect Resume: ಬೇಗನೇ ಕೆಲಸ ಸಿಗಬೇಕು ಅಂದ್ರೆ ನಿಮ್ಮ ರೆಸ್ಯೂಮ್​ ಹೀಗಿರಲಿ..!

ಪದವೀಧರರು ಸೇರಿದಂತೆ ಶೇ. 40 ರಷ್ಟು ವಿದ್ಯಾವಂತರು ದೇಶದಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ಯೋಜನೆ ಮತ್ತು ಅಭಿವೃದ್ಧಿಯ ಸೆನೆಟ್ ಸ್ಥಾಯಿ ಸಮಿತಿಗೆ ನೀಡಿದ ಮಾಹಿತಿಯಲ್ಲಿ ಪಾಕಿಸ್ತಾನ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಎಕನಾಮಿಕ್ಸ್ ಎತ್ತಿ ತೋರಿಸಿದೆ. ಅಲ್ಲದೆ, ಅನೇಕ ವಿದ್ಯಾವಂತರು ಉತ್ತಮ ಉದ್ಯೋಗ ಪಡೆಯಲು ಹೆಣಗಾಡುತ್ತಿದ್ದು, ಅವರು ಎಂಫಿಲ್ ಅಧ್ಯಯನಕ್ಕೆ ತಮ್ಮನ್ನು ಸೇರಿಸಿಕೊಂಡಿದ್ದಾರೆ ಎಂದು ಸೂಚಿಸಿದೆ. ಇವರನ್ನು ನಿರುದ್ಯೋಗದ ಪಟ್ಟಿಯಲ್ಲಿ ಸೇರಿಸಿಲ್ಲವಾದ್ದರಿಂದ, ಇವರನ್ನೂ ಸೇರಿಸಿದರೆ ದೇಶದ ನಿರುದ್ಯೋಗ ಪ್ರಮಾಣ ಇನ್ನೂ ಹೆಚ್ಚುತ್ತದೆ.

ಅಲ್ಲದೆ, ಸರ್ಕಾರದಿಂದ ಯಾವುದೇ ಸಂಶೋಧನೆ ನಡೆಸುತ್ತಿಲ್ಲ. ಅಂತಹ ಎಲ್ಲಾ ಅಧ್ಯಯನಗಳನ್ನು ವಿದೇಶದಿಂದ ಮಾಡಲಾಗಿದೆ ಎಂದೂ PIDE ಸೂಚಿಸಿದೆ. ದೇಶದಲ್ಲಿ ಹಲವಾರು ಸಂಶೋಧನಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದರೂ, ಸಂಶೋಧನಾ ಉದ್ದೇಶಗಳು ಪೂರೈಸಿಲ್ಲ.

ಇದನ್ನೂ ಓದಿ:Post Office Recruitment 2021: ಸ್ಪೋರ್ಟ್ಸ್​ ಕೋಟಾದಡಿ ಅಂಚೆ ಇಲಾಖೆಯ 46 ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇರ ನೇಮಕಾತಿ

ಈ ಮಧ್ಯೆ, ಪಾಕಿಸ್ತಾನದಲ್ಲಿ ನಿರುದ್ಯೋಗವು 2017-18ರಲ್ಲಿ ಶೇ. 5.8 ರಿಂದ 2018-19ರಲ್ಲಿ 6.9ಕ್ಕೆ ಏರಿದೆ ಎಂದು ಪಾಕಿಸ್ತಾನದ ಅಂಕಿಅಂಶಗಳ ಬ್ಯೂರೋ (ಪಿಬಿಎಸ್) ಪ್ರಕಟಿಸಿದ ಸಮೀಕ್ಷೆಯು ತೋರಿಸಿದೆ. ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಅಧಿಕಾರದಲ್ಲಿದ್ದ ಮೊದಲ ವರ್ಷದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ನಿರುದ್ಯೋಗ ಹೆಚ್ಚಾಗಿದೆ. ಪುರುಷ ನಿರುದ್ಯೋಗ ದರವು 5.1 ರಿಂದ 5.9ಕ್ಕೆ ಏರಿದ್ದರೆ, ಮಹಿಳಾ ನಿರುದ್ಯೋಗ ದರವು 8.3 ರಿಂದ ಶೇ.10 ಕ್ಕೆ ಹೆಚ್ಚಳವಾಗಿದೆ ಎಂದು ಡಾನ್ ವರದಿ ಮಾಡಿದೆ.
Published by:Latha CG
First published: