Job: ಕೇವಲ 14 ದಿನದಲ್ಲಿ 9 ಲಕ್ಷ ದುಡಿಯುವ ಅವಕಾಶ! ಇಂತಹ ಉದ್ಯೋಗ ಮತ್ತೆ ಸಿಗದು!

Job Alert: ತಿಂಗಳು ಪೂರ್ತಿ ಕೆಲಸ ಮಾಡಿದರೆ ಸಂಬಳ ಸಾಕಾಗದ ಭಾರತೀಯರಿಗೆ ಈ ಕೆಲಸದ ಬಗ್ಗೆ ತಿಳಿದರೆ ಅಚ್ಚರಿಯಾಗದೆ ಇರದು. ಏಕೆಂದರೆ ಕೇವಲ 14 ದಿನ ಕೆಲಸದ ಜೊತೆಗೆ 9 ಲಕ್ಷ ರೂ ದುಡಿಯುವ ಅವಕಾಶ ಸಿಕ್ಕರೆ ಯಾರಿಗೆ ಬೇಡ ಹೇಳಿ.

JOB / ಉದ್ಯೋಗ

JOB / ಉದ್ಯೋಗ

  • Share this:
    ವರ್ಷಪೂರ್ತಿ ಕೆಲಸವಿಲ್ಲದೆ (Job) ಖಾಲಿ ಕೂರುವವರು ಒಂದೆಡೆಯಾದರೆ ಇನ್ನು ಕೆಲವರು ವರ್ಷಪೂರ್ತಿ ದುಡಿಯುವವರು ಇದ್ದಾರೆ. ಆದರೆ ಖಾಲಿ ಕೂತವರು ಕೆಲಸಕ್ಕಾಗಿ ಅಲೆದಾಡುತ್ತಾ ಒಂದಾದರು ಕನಸಿನ ಕೆಲಸ ಸಿಗಬೇಕು ಎಂದು ಹುಡುಕಾಡುತ್ತಿತ್ತಾರೆ. ಅವರ ಶ್ರಮದ ಫಲವಾಗಿ ಕೆಲವರಿಗೆ ಉದ್ಯೋಗ ಸಿಕ್ಕರೆ ಇನ್ನು ಕೆಲವರಿಗೆ ಅದೃಷ್ಟ ಕೈಕೊಟ್ಟು ಕೆಲಸವೇ ಸಿಗದು. ಆದರೆ ಇಲ್ಲೊಂದು ಕೆಲಸವಿದೆ ಕಷ್ಟಪಟ್ಟು 5-6 ವರ್ಷ ದುಡಿದು ಸಂಪಾದಿಸುವ ಹಣವನ್ನು (Earn Money) ಕೇವಲ 14 ದಿನದಲ್ಲೇ ದುಡಿಯಬಹುದು. ಮಾತ್ರವಲ್ಲದೆ 14 ದಿನ ದುಡಿದರೆ ಸಾಕು 9 ಲಕ್ಷ ರೂಪಾಯಿ ಗಳಿಸಬಹುದು.

    ಹೌದು. ತಿಂಗಳು ಪೂರ್ತಿ ಕೆಲಸ ಮಾಡಿದರೆ ಸಂಬಳ ಸಾಕಾಗದ ಭಾರತೀಯರಿಗೆ ಈ ಕೆಲಸದ ಬಗ್ಗೆ ತಿಳಿದರೆ ಅಚ್ಚರಿಯಾಗದೆ ಇರದು. ಏಕೆಂದರೆ ಕೇವಲ 14 ದಿನ ಕೆಲಸದ ಜೊತೆಗೆ 9 ಲಕ್ಷ ರೂ ದುಡಿಯುವ ಅವಕಾಶ ಸಿಕ್ಕರೆ ಯಾರಿಗೆ ಬೇಡ ಹೇಳಿ. ಅಂದಹಾಗೆಯೇ ಭಾರತದಲ್ಲಿ, ವರ್ಷಕ್ಕೆ  9 ರಿಂದ 10 ಲಕ್ಷದಷ್ಟು ಸಂಪಾದಿಸಿದರೆ  ತನ್ನ ಜೀವನವನ್ನು ಆರಾಮವಾಗಿ ಕಳೆಯಬಹುದು. ಆದರೆ ಅದೇ 9 ಲಕ್ಷವನ್ನು ಕೇವಲ 14 ದಿನಗಳಲ್ಲಿ ಪಡೆದರೆ ಹೇಗೆ? ಇದು ಕೇವಲ ಕಲ್ಪನೆಯಲ್ಲ. ವಾಸ್ತವವಾಗಿ ನಿಜ, ಅಂತಹ ಒಂದು ಕೆಲಸ ಲಭ್ಯವಿದೆ ಮತ್ತು ಅದರ ನಿಯಮಿತ ಜಾಹೀರಾತನ್ನು ಸಹ ಪ್ರಕಟಿಸಲಾಗಿದೆ.

    ಏನು ಕೆಲಸ

    ಈ ಉದ್ಯೋಗವು ಯುಕೆಯ ಎಡಿನ್‌ಬರ್ಗ್‌ನಲ್ಲಿದೆ. ಕೆಲಸವು ಡಿಸೆಂಬರ್ 22 ರಿಂದ ಜನವರಿ 5 ರ ಅವಧಿಯವರೆ ಇದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ದಾದಿ ಹುದ್ದೆಯ ಕೆಲಸ. ಮಕ್ಕಳನ್ನು ನೋಡಿಕೊಳ್ಳಲು ದಾದಿ ಬೇಕು ಎಂದು ಕುಟುಂಬ ಘೋಷಿಸಿದೆ. ಆದರೆ ಕ್ರಿಸ್‌ಮಸ್ ಸಮಯವಾದ್ದರಿಂದ ದಾದಿ ಹುಡುಕುವುದೇ ಕಷ್ಟವಾಗಿದೆ. ಅದಕ್ಕಾಗಿಯೇ ಈ ದೊಡ್ಡ ಸಂಬಳವನ್ನು ನೀಡಲಾಗಿದೆ.



    ಮಕ್ಕಳನ್ನು ನೋಡಿಕೊಂಡರೆ ಸಾಕು!

    ಕುಟುಂಬವೊಂದಕ್ಕೆ ಅವಳಿ ಮಕ್ಕಳಿದ್ದು,  ಆ ಮಕ್ಕಳನ್ನು 14 ದಿನಗಳ ಕಾಲ ನೋಡಿಕೊಳ್ಳಬೇಕು. ಈ ಸಮಯದಲ್ಲಿ ಅವಳು ಮನೆಯಿಂದ ಹೊರ ಹೋಗಲು ಸಾಧ್ಯವಿಲ್ಲ. ಕ್ರಿಸ್‌ಮಸ್ ದಿನದಂದು ಸಹ, ಅವಳು ಕೆಲಸದಲ್ಲಿರುತ್ತಾರೆ ಮತ್ತು ಮಕ್ಕಳನ್ನು ನೋಡಿಕೊಳ್ಳಬೇಕು. ದಾದಿ ಮಕ್ಕಳಿಗೆ ಸ್ನಾನ ಮಾಡಿಸಬೇಕು, ತಿನ್ನಿಸಬೇಕು, ಆಟವಾಡಬೇಕು.



    ದೊಡ್ಡ ಮೊತ್ತದ ಸಂಬಳ ಸಿಗಲಿದೆ

    ಈ ಕೆಲಸಕ್ಕಾಗಿ ಕುಟುಂಬವು ದಿನಕ್ಕೆ 600 ಯುರೋಗಳನ್ನು (59,000 ರೂಪಾಯಿ) ಪಾವತಿಸಲು ಸಿದ್ಧವಾಗಿದೆ. ಅಂದರೆ 14 ದಿನಗಳ ಸೇವೆಯ ನಂತರ ವ್ಯಕ್ತಿಗೆ 9 ಲಕ್ಷ ರೂ. ಇದಲ್ಲದೇ ದಾದಿಯ ಪ್ರಯಾಣ ವೆಚ್ಚವನ್ನೂ ಕುಟುಂಬವೇ ಭರಿಸಲಿದೆ.
    Published by:Harshith AS
    First published: