Ziva Dhoni Prays for CSK's Win| ಸಿಎಸ್​ಕೆ ಗೆಲುವಿಗಾಗಿ ಜೀವಾ ಧೋನಿ ಪ್ರಾರ್ಥನೆ; ನೆಟ್ಟಿಗರಿಂದ ಪ್ರೀತಿಯ ಸುರಿಮಳೆ!

ಡೆಲ್ಲಿ ಕ್ಯಾಪಿಟಲ್ ಗೆಲುವಿಗೆ 3 ಓವರ್‌ಗಳಲ್ಲಿ 28 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಜೀವಾ ಧೋನಿ ತಂದೆಯ ಗೆಲುವಿಗಾಗಿ ದೇವರ ಮೊರೆ ಹೋಗಿದ್ದರು. ಸತತ ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದರು. ಈ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿಎಸ್​ಕೆ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಜೀವಾ ಧೋನಿ.

ಸಿಎಸ್​ಕೆ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಜೀವಾ ಧೋನಿ.

 • Share this:
  ಸೋಮವಾರ ಸಿಎಸ್​ಕೆ ಮತ್ತು ಡೆಲ್ಲಿ ಕ್ಯಾಪಿಟಲ್​ ನಡುವಿನ ರೋಚಕ ಪಂದ್ಯದಲ್ಲಿ ಡೆಲ್ಲಿ ಅಂತಿಮವಾಗಿ ಗೆಲುವು ಸಾಧಿಸಿತ್ತು. ಆದರೆ, ಸೋಲುವ ಹಂತದಲ್ಲಿದ್ದ ಸಿಎಸ್​ಕೆ ಮತ್ತು ತನ್ನ ತಂದೆಯ ತಂಡದ ಗೆಲುವಿಗಾಗಿ ಮಹೇಂದ್ರ ಸಿಂಗ್ ಧೋನಿ ಮಗಳು ಜೀವಾ ಧೋನಿ ಕ್ರೀಡಾಂಗಣದಲ್ಲಿ ಪ್ರಾರ್ಥಿಸಿದ್ದ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ತನ್ನ ತಾಯಿ ಸಾಕ್ಷಿ ಧೋನಿಯೊಂದಿಗೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಾಗ ಜೀವಾ, ಡೆಲ್ಲಿ ಕ್ಯಾಪಿಟಲ್ ಗೆಲುವಿಗೆ 3 ಓವರ್‌ಗಳಲ್ಲಿ 28 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಜೀವಾ ಧೋನಿ ತಂದೆಯ ಗೆಲುವಿಗಾಗಿ ದೇವರ ಮೊರೆ ಹೋಗಿದ್ದರು. ಸತತ ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದರು. ಈ ಪಂದ್ಯದಲ್ಲಿ ಡೆಲ್ಲಿ ಗೆಲುವು ಸಾಧಿಸಿದ್ದರೂ ಸಹ ಜೀವಾ ಧೋನಿ ಅವರ ಮುಗ್ಧತೆ ಕ್ರಿಕೆಟ್ ಅಭಿಮಾನಿಗಳನ್ನು ಗೆದ್ದಿದೆ. ಅವರ ಮುದ್ದಾದ ಪೋಟೋವನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರು ಇದೀಗ ಪ್ರೀತಿಯ ಮಳೆಗೆರೆದಿದ್ದಾರೆ.

  ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್ ಶಿಮ್ರಾನ್ ಹೆಟ್ಮಯರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಿಎಸ್​ಕೆ ವಿರುದ್ಧ ರೋಚಕ ಗೆಲುವು ಸಾಧಿಸಿ ಮತ್ತೆ ಟೇಬಲ್ ಟಾಪರ್ ಆಗಿದೆ. ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ಒಡ್ಡಿದ 137 ರನ್ ಸವಾಲನ್ನು ಡೆಲ್ಲಿ 3 ವಿಕೆಟ್ ಕೈಲಿರುವಂತೆಯೇ ಮೆಟ್ಟಿ ನಿಂತಿತು. ರೋಚಕ ತಿರುವುಗಳಿಂದ ಕೂಡಿದ್ದ ಡೆಲ್ಲಿ ಚೇಸಿಂಗ್​ನಲ್ಲಿ ಹೈಲೈಟ್ ಆಗಿದ್ದು ಶಿಮ್ರಾನ್ ಹೆಟ್ಮಯರ್. ಪತನದ ಹಾದಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಚೇಸಿಂಗ್​ಗೆ ಪುಷ್ಟಿ ನೀಡಿ ಗೆಲುವು ತಂದುಕೊಟ್ಟವರು ಹೆಟ್ಮೆಯರ್.

  ಇದನ್ನೂ ಓದಿ: CSK vs DC- ಹಿಟ್​ಮ್ಯಾನ್ ಆದ ಹೆಟ್ಮಯರ್; ಸಿಎಸ್​ಕೆ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಗೆಲುವು

  ಕನ್ನಡಿಗ ಗೌತಮ್ ಅವರು ಕ್ಯಾಚ್ ಡ್ರಾಪ್ ಮಾಡಿದ್ದು ಸೇರಿ ಒಂದೆರಡು ಜೀವದಾನ ಪಡೆದರೂ ಹೆಟ್ಮಯರ್ ಅವರ ಆಕರ್ಷಕ ಆಟ ಡೆಲ್ಲಿ ಗೆಲುವಿಗೆ ಕಾರಣವಾಯಿತು. ಹೆಟ್ಮಯರ್​ಗೆ ಮುನ್ನ ಶಿಖರ್ ಧವನ್, ಪೃಥ್ವಿ ಶಾ ಅವರು ಉತ್ತಮ ಬ್ಯಾಟಿಂಗ್ ಆಡಿದರು. ಐಪಿಎಲ್ ಪದಾರ್ಪಣೆ ಮಾಡಿದ ರಿಪಲ್ ಪಟೇಲ್ ಕೂಡ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.
  Published by:MAshok Kumar
  First published: