ಪತ್ನಿಗೆ ರೋಮ್ಯಾಂಟಿಕ್ ಮೆಸೇಜ್ ಹಾಕಿದ ಆರ್​ಸಿಬಿ ಆಟಗಾರ; ಇನ್ಸ್​ಟಾಗ್ರಾಮ್​ನಲ್ಲಿ 11 ಲಕ್ಷ ಲೈಕ್ಸ್

Instagram Post- ಆರ್​ಸಿಬಿಯ ಯುಜವೇಂದ್ರ ಚಹಲ್ ತಮ್ಮ ಪತ್ನಿ ಧನಶ್ರೀಯ ಜನ್ಮದಿನಕ್ಕೆ ಪ್ರೇಮದ ಕಾಣಿಕೆಯಾಗಿ ಇನ್ಸ್​​ಟಾಗ್ರಾಮ್​ನಲ್ಲಿ ರೋಮ್ಯಾಂಟಿಕ್ ಮೆಸೇಜ್ ಹಾಕಿದ್ದಾರೆ. ಈ ಪೋಸ್ಟ್​ಗೆ ಒಂದೇ ದಿನದಲ್ಲಿ 11 ಲಕ್ಷ ಲೈಕ್ಸ್ ಸಿಕ್ಕಿದೆ.

ಯುಜವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ

ಯುಜವೇಂದ್ರ ಚಹಲ್ ಮತ್ತು ಪತ್ನಿ ಧನಶ್ರೀ ವರ್ಮಾ

 • Cricketnext
 • Last Updated :
 • Share this:
  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಸ್ಪಿನ್ನರ್ ಯುಜವೇಂದ್ರ ಚಹಲ್ (Yuzvendra Chahal) ನಿನ್ನೆ ಇನ್ಸ್​ಟಾಗ್ರಾಮ್​ನಲ್ಲಿ (Instagram) ಹಾಕಿದ ಒಂದು ರೋಮ್ಯಾಂಟಿಕ್ ಪೋಸ್ಟ್​ಗೆ ಸಖರ್ ರೆಸ್ಪಾನ್ಸ್ ಸಿಕ್ಕಿದೆ. ತಮ್ಮ ಮುದ್ದಿನ ಪತ್ನಿ ಧನಶ್ರೀ ವರ್ಮಾ (Dhanashree Verma) ಅವರ ಜನ್ಮದಿನ ನಿನ್ನೆ ಇತ್ತು. ಆಕೆಗೆ ವಿಶ್ ಮಾಡಿ ಚಹಲ್ ಪೋಸ್ಟ್ ಮಾಡಿದ್ದರು. ಹ್ಯಾಪಿ ಬರ್ತ್​ಡೇ ಮೈ ಲವ್ ಎಂದು ವಿಶ್ ಮಾಡಿದ ಅವರು, ಧನಶ್ರೀಯನ್ನ ಏಂಜೆಲ್ ಎಂದು ಕರೆದು ತಮ್ಮ ಲವ್ ಅನ್ನು ತೋರ್ಪಡಿಸಿದ್ದರು. ನಿನ್ನೆ ಇನ್ಸ್​ಟಾಗ್ರಾಮ್​ನಲ್ಲಿ ಅವರು ಹಾಕಿದ ಈ ಪೋಸ್ಟ್​ಗೆ 11 ಲಕ್ಷ ಮಂದಿ ಲೈಕ್ಸ್ ಒತ್ತಿದ್ದಾರೆ. ಸಾವಿರಾರು ಮಂದಿ ಸ್ಪಂದಿಸಿ ಚಹಲ್ ಪತ್ನಿ ಧನಶ್ರೀ ವರ್ಮಾ ಅವರಿಗೆ ಬರ್ತ್​ಡೇಗೆ ಶುಭ ಹಾರೈಸಿದ್ದಾರೆ.

  ಯುಜವೇಂದ್ರ ಚಹಲ್ ಅವರು ಈ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದು ಹೀಗೆ: “ಹ್ಯಾಪಿ ಬರ್ತ್​ಡೇ ಮೈ ಲವ್. ನೀನು ನನ್ನ ಜೀವನದಲ್ಲಿ ಬಂದಿರುವುದು ನನ್ನ ಅತ್ಯುತ್ತಮ ಕ್ಷಣವೆನಿಸಿದೆ. ನನ್ನ ಜೀವನದ ದೀಪ ಹೊತ್ತಿಸಿದ ಏಂಜೆಲ್ ಜನ್ಮದಿನಕ್ಕೆ ಶುಭ ಹಾರೈಸುತ್ತೇನೆ. ನಿನ್ನನ್ನು ಪಡೆಯಲು ನನಗೆ ಸಾಧ್ಯವಾಗಿದ್ದಕ್ಕೆ ನಾನೇ ಧನ್ಯ. ನನ್ನ ಮುದ್ದಿನ ಹೆಂಡತಿಗೆ ಮತ್ತೊಮ್ಮೆ ಹ್ಯಾಪಿ ಬರ್ತ್​ಡೇ” ಎಂದು ತಮ್ಮ ಪತ್ನಿ ಧನಶ್ರೀ ವರ್ಮಾಗೆ ಸ್ಪಿನ್ ಬೌಲರ್ ಮೆಸೇಜ್ ಹಾಕಿದ್ದರು.  ಸದ್ಯ, ಯುಎಇಯಲ್ಲಿ ಯುಜವೇಂದ್ರ ಚಹಲ್ ಅವರು ಆರ್​ಸಿಬಿ ಬೌಲಿಂಗ್ ಪಡೆಯ ಬೆನ್ನೆಲುಬಾಗಿ ಮಿಂಚುತ್ತಿದ್ದಾರೆ. ಅವರ ಪತ್ನಿ ಧನಶ್ರೀ ವರ್ಮಾ ಕೂಡ ಯುಎಇಯಲ್ಲೇ ಇದ್ದು ತಮ್ಮ ಪತಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ. ಯುಜವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅವರು ಕಳೆದ ವರ್ಷ ಡಿಸೆಂಬರ್ 22ರಂದು ವಿವಾಹವಾಗಿದ್ದಾರೆ. ಅಂದರೆ, ಸುಮಾರು 10 ತಿಂಗಳ ನವಿರಾದ ದಾಂಪತ್ಯ ಅವರದ್ದು.

  ಆರ್​ಸಿಬಿಯ ಬೌಲಿಂಗ್ ಶಕ್ತಿ:

  ಹರಿಯಾಣ ರಾಜ್ಯದವರಾದ ಯುಜವೇಂದ್ರ ಚಹಲ್ ಅವರು ಹಲವು ವರ್ಷಗಳಿಂದ ಆರ್​ಸಿಬಿ ತಂಡದಲ್ಲಿ ಆಡುತ್ತಿದ್ದಾರೆ. ತಂಡದ ಪ್ರಮುಖ ಬೌಲಿಂಗ್ ಶಕ್ತಿ ಎನಿಸಿದ್ದಾರೆ. ಭಾರತದಲ್ಲಿ ನಡೆದ ಐಪಿಎಲ್ 2021ನ ಮೊದಲ ಲೆಗ್ ಪಂದ್ಯಗಳಲ್ಲಿ ಅಷ್ಟೇನೂ ಯಶಸ್ಸು ಕಾಣದ ಚಹಲ್ ಅವರು ಯುಎಇಯಲ್ಲಿ ಲಯಕ್ಕೆ ಮರಳಿದ್ಧಾರೆ. ಅದರಲ್ಲೂ ಮೊನ್ನೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು 4 ಓವರ್ ಬೌಲ್ ಮಾಡಿ ಕೇವಲ 11 ರನ್ನಿತ್ತು ಬರೋಬ್ಬರಿ 3 ವಿಕೆಟ್ ಪಡೆದರು. ಇವರು ಮತ್ತು ಹರ್ಷಲ್ ಪಟೇಲ್ (Harshal Patel) ಅವರ ಮಾರಕ ಬೌಲಿಂಗ್​ಗೆ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ಸ್ ತತ್ತರಿಸಿ ಸುಲಭವಾಗಿ ಸೋಲೊಪ್ಪಿದ್ದರು.

  ಇದನ್ನೂ ಓದಿ: AB de Villiers : ಗಂಡನ ಆ ಒಂದು ಸೀಕ್ರೆಟ್​ನ್ನು ಅಭಿಮಾನಿಗಳಿಗೆ ತಿಳಿಸಿದ ಎಬಿ ಡಿವಿಲಿಯರ್ಸ್ ಹೆಂಡತಿ

  ಆರ್​ಸಿಬಿ ತಂಡ 10 ಪಂದ್ಯಗಳಿಂದ 12 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿ ಭದ್ರವಾಗಿದೆ. ನಾಳೆ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ ಪಂದ್ಯ ಇದೆ. ಅದರಲ್ಲಿ ಗೆದ್ದರೆ ಆರ್​ಸಿಬಿಗೆ ಪ್ಲೇ ಆಫ್ ಪ್ರವೇಶದ ಅವಕಾಶ ಇನ್ನಷ್ಟು ದಟ್ಟವಾಗಲಿದೆ. ಆರ್​ಸಿಬಿಯಲ್ಲಿ ಸದ್ಯ ಹರ್ಷಲ್ ಪಟೇಲ್ ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ಧಾರೆ. 10 ಪಂದ್ಯಗಳಿಂದ ಅವರು 23 ವಿಕೆಟ್ ಸಂಪಾದಿಸಿದ್ದಾರೆ. ಕೈಲ್ ಜೇಮೀಸನ್ ಮತ್ತು ಯುಜವೇಂದ್ರ ಚಹಲ್ ತಲಾ 9 ವಿಕೆಟ್​ಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಹರ್ಷಲ್ ಪಟೇಲ್ ಅವರು ಆರ್​ಸಿಬಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆಯಷ್ಟೇ ಅಲ್ಲ ಈ ಸೀಸನ್​ನ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್​ನ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆವೇಶ್ ಖಾನ್ 18 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
  Published by:Vijayasarthy SN
  First published: