Yashasvi Jaiswal: ಧೋನಿಯ ಆಶೀರ್ವಾದದೊಂದಿಗೆ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್

ಈ ಬಾರಿಯ ಐಪಿಎಲ್​ನಲ್ಲಿ ಪದಾರ್ಪಣೆ ಮಾಡುತ್ತಿರುವ ಅಂಡರ್-19 ತಂಡದ ಮೂರನೇ ಆಟಗಾರ ಜೈಸ್ವಾಲ್. ಇದಕ್ಕೂ ಮುನ್ನ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ಪರ ಪ್ರಿಯಂ ಗರ್ಗ್ ಕಣಕ್ಕಿಳಿದಿದ್ದರು.

Yashasvi Jaiswal

Yashasvi Jaiswal

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಮತ್ತೊಬ್ಬ ಭಾರತೀಯ ಯುವ ಆಟಗಾರನ ಪರಿಚಯವಾಗಿದೆ. ಶಾರ್ಜಾದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ಅಂಡರ್​-19 ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್ ಪಾದಾರ್ಪಣೆ ಮಾಡಿದರು. ಇದಕ್ಕೂ ಮುನ್ನ ಜೈಸ್ವಾಲ್ ಸಿಎಸ್​ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆಶೀರ್ವಾದ ಪಡೆದು ಗಮನ ಸೆಳೆದರು. ಟಾಸ್​ಗೆ ತೆರಳುತ್ತಿದ್ದ ಧೋನಿಯನ್ನು ಮೈದಾನದಲ್ಲಿ ಭೇಟಿಯಾದ ಯುವ ಆಟಗಾರ, ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ಮೂಲಕ ಐಪಿಎಲ್​ನ ಚೊಚ್ಚಲ ಇನಿಂಗ್ಸ್ ಆರಂಭಿಸುವ ಮುನ್ನ ತಮ್ಮ ಅಭಿಲಾಷೆಯನ್ನು ಜೈಸ್ವಾಲ್ ಈಡೇರಿಸಿಕೊಂಡರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  2019ರ ಅಂಡರ್-19 ವಿಶ್ವಕಪ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಜೈಸ್ವಾಲ್, ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ಶತಕ ಸೇರಿದಂತೆ ಆರು ಇನ್ನಿಂಗ್ಸ್‌ಗಳಲ್ಲಿ 400 ರನ್ ಬಾರಿಸಿ ಮ್ಯಾನ್ ಆಫ್ ದಿ ಸಿರೀಸ್​ ಪ್ರಶಸ್ತಿಯನ್ನು ಪಡೆದಿದ್ದರು. ಈ ಭರ್ಜರಿ ಬ್ಯಾಟಿಂಗ್ ಫಲವಾಗಿ ರಾಜಸ್ಥಾನ್ ರಾಯಲ್ಸ್ ಜೈಸ್ವಾಲ್​ರನ್ನು 2.40 ಕೋಟಿ ನೀಡಿ ಖರೀದಿಸಿತ್ತು.

  ಮಂಗಳವಾರ ನಡೆದ ಐಪಿಎಲ್​ನ 4ನೇ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ಎಡಗೈ ದಾಂಡಿಗ ಜೈಸ್ವಾಲ್ 1 ಬೌಂಡರಿ ಒಳಗೊಂಡಂತೆ ಕೇವಲ 6 ರನ್​ ಮಾತ್ರ ಬಾರಿಸಿದರು. ದೀಪಕ್ ಚಹರ್ ಅವರ ಓವರ್​ನಲ್ಲಿ ಬಿರುಸಿನ ಹೊಡೆತಕ್ಕೆ ಕೈ ಹಾಕಿದ ಜೈಸ್ವಾಲ್ ಕ್ಯಾಚ್ ನೀಡಿ ಹೊರ ನಡೆದು ನಿರಾಸೆ ಮೂಡಿಸಿದರು.

  ಈ ಬಾರಿಯ ಐಪಿಎಲ್​ನಲ್ಲಿ ಪದಾರ್ಪಣೆ ಮಾಡುತ್ತಿರುವ ಅಂಡರ್-19 ತಂಡದ ಮೂರನೇ ಆಟಗಾರ ಜೈಸ್ವಾಲ್. ಇದಕ್ಕೂ ಮುನ್ನ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ಪರ ಪ್ರಿಯಂ ಗರ್ಗ್ ಕಣಕ್ಕಿಳಿದಿದ್ದರು.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  ಈ ಬಾರಿಯ ಐಪಿಎಲ್​ನಲ್ಲಿ ಪದಾರ್ಪಣೆ ಮಾಡುತ್ತಿರುವ ಅಂಡರ್-19 ತಂಡದ ಮೂರನೇ ಆಟಗಾರ ಜೈಸ್ವಾಲ್. ಇದಕ್ಕೂ ಮುನ್ನ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ಪರ ಪ್ರಿಯಂ ಗರ್ಗ್ ಕಣಕ್ಕಿಳಿದಿದ್ದರು.
  Published by:zahir
  First published: