IPL

  • associate partner
HOME » NEWS » Ipl » WOULD RCB HAVE WON THE TOURNAMENT IF ANYONE OTHER THAN VIRAT KOHLI WAS THEIR CAPTAIN AAKASH CHOPRA RMD

ಈ ತಂಡ ಇಟ್ಟುಕೊಂಡು ಆರ್​​ಸಿಬಿ ನಾಲ್ಕನೇ ಸ್ಥಾನಕ್ಕೇರಿದೆ ಎಂದರೆ ಅದು ವಿರಾಟ್​ ಕೊಹ್ಲಿ ಸಾಧನೆ!

ನಾಯಕತ್ವದ ಬದಲಾವಣೆಯ ಕೂಗು ಕೇಳಿ ಬಂದಿರುವ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಓಪನರ್​ ಆಕಾಶ್​ ಚೋಪ್ರಾ, ವಿರಾಟ್​ ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ. 

news18-kannada
Updated:November 16, 2020, 12:16 PM IST
ಈ ತಂಡ ಇಟ್ಟುಕೊಂಡು ಆರ್​​ಸಿಬಿ ನಾಲ್ಕನೇ ಸ್ಥಾನಕ್ಕೇರಿದೆ ಎಂದರೆ ಅದು ವಿರಾಟ್​ ಕೊಹ್ಲಿ ಸಾಧನೆ!
Virat Kohli
  • Share this:
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕನಾಗಿ 8 ವರ್ಷ ಕಳೆದರೂ ವಿರಾಟ್​ ಕೊಹ್ಲಿ ಒಂದೇ ಒಂದು ಕಪ್​ ಗೆದ್ದಿಲ್ಲ ಎನ್ನುವ ವಿಚಾರಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿದ್ದ ಗೌತಮ್​ ಗಂಭೀರ್, ನಾನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಲೀಕನಾಗಿದ್ದರೆ, ವಿರಾಟ್​ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಕಿತ್ತೆಯೆಸುತ್ತಿದ್ದೆ ಎಂದಿದ್ದರು. ನಾಯಕತ್ವದ ಬದಲಾವಣೆಯ ಕೂಗು ಕೇಳಿ ಬಂದಿರುವ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಓಪನರ್​ ಆಕಾಶ್​ ಚೋಪ್ರಾ, ವಿರಾಟ್​ ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ. 

ಫೇಸ್​ಬುಕ್​ನಲ್ಲಿ ವಿಡಿಯೋ ಒಂದನ್ನು ಮಾಡಿ ಹಾಕಿದ್ದು, ಅದರಲ್ಲಿ ಈ ಬಗ್ಗೆ ಹೇಳಿದ್ದಾರೆ. ಆರ್​ಸಿಬಿ ಈ ಬಾರಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಅವರ ತಂಡ ಅಲ್ಲಿಗೆ ತಲುಪುವಂತಿರಲಿಲ್ಲ. ಆದಾಗ್ಯೂ ಅವರು ಅಲ್ಲಿಗೆ ತಲುಪಿದ್ದಾರೆ ಎಂದರೆ ಖುಷಿಯ ವಿಚಾರ. ಕೊನೆಯ ಮ್ಯಾಚ್​ನಲ್ಲಿ ಹೈದರಾಬಾದ್​ ವಿರುದ್ಧ ಸೋತಿದ್ದರೂ ಆ ಪಂದ್ಯದಲ್ಲಿ ಆರ್​ಸಿಬಿ ಪ್ರದರ್ಶನ ಉತ್ತಮವಾಗಿತ್ತು ಎಂದಿದ್ದಾರೆ ಆಕಾಶ್​ ಚೋಪ್ರಾ.ನಾನು ವಿರಾಟ್​ ಕೊಹ್ಲಿಯ ಫ್ಯಾನ್​ ಅಲ್ಲ. ಆದರೂ ಅವರ ನಾಯಕತ್ವ ನನಗೆ ಇಷ್ಟವಾಗಿದೆ. ವಿರಾಟ್​ ಹೊರತುಪಡಿಸಿ ಬೇರೆ ಯಾರಾದರೂ ಆರ್​​ಸಿಬಿ ನಾಯಕತ್ವ ವಹಿಸಿಕೊಂಡಿದ್ದರೆ ತಂಡ ಕಪ್​ ಗೆಲ್ಲುತ್ತಿತ್ತ ಎನ್ನುವ ಪ್ರಶ್ನೆಗೆ ಟೀಕಾಕಾರರು ಉತ್ತರ ನೀಡಬೇಕಿದೆ ಎಂದಿದ್ದಾರೆ ಆಕಾಶ್​.
Published by: Rajesh Duggumane
First published: November 16, 2020, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories