Women's T20 Challenge 2020: ಸುಷ್ಮಾ-ಸೂನೆ ಮಿಂಚಿಂಗ್: ಸೂಪರ್​ ನೋವಾಸ್ ವಿರುದ್ಧ ಗೆದ್ದು ಬೀಗಿದ ವೆಲಾಸಿಟಿ

ಮತ್ತೊಂದೆಡೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಲಂಕಾದ ಚಮರಿ ಅಟ್ಟಾಪಟ್ಟು ವೆಲಾಸಿಟಿ ಬೌಲರುಗಳ ಬೆಂಡೆತ್ತಿದ್ದರು. ಪರಿಣಾಮ 2 ಸಿಕ್ಸರ್, 2 ಬೌಂಡರಿಗಳೊಂದಿಗೆ 39 ಎಸೆತಗಳಲ್ಲಿ 44 ರನ್ ಬಾರಿಸಿದರು.

Womens T20 Challenge 2020

Womens T20 Challenge 2020

  • Share this:
    ಶಾರ್ಜಾ ಕ್ರಿಕೆಟ್​ ಮೈದಾನದಲ್ಲಿ ನಡೆದ ಮಹಿಳಾ ಟಿ20 ಚಾಲೆಂಜ್ ಮೊದಲ ಪಂದ್ಯದಲ್ಲಿ ವೆಲಾಸಿಟಿ ತಂಡ 5 ವಿಕೆಟ್​ಗಳ ಜಯ ಸಾಧಿಸಿದೆ. ಸೂಪರ್ ನೋವಾಸ್ ನೀಡಿದ 127 ರನ್​ಗಳನ್ನು ಬೆನ್ನತ್ತಿದ ವೆಲಾಸಿಟಿ ಕೊನೆಯ ಓವರ್​ನ 5ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ರೋಚಕ ಜಯ ತನ್ನದಾಗಿಸಿತು. ಇದಕ್ಕೂ ಮುನ್ನ ಸಾಧಾರಣ ಮೊತ್ತ ಬೆನ್ನತ್ತಿದ್ದ ಮಿಥಾಲಿ ರಾಜ್ ಬಳಗ ಉತ್ತಮ ಆರಂಭ ಪಡೆದಿರಲಿಲ್ಲ. ಮೊದಲ ಓವರ್​ನ 5ನೇ ಎಸೆತಕ್ಕೆ ಶೂನ್ಯದೊಂದಿಗೆ ಡೇನಿಯಲ್ ವ್ಯಾಟ್ ಪೆವಿಲಿಯನ್ ಕಡೆ ಮುಖ ಮಾಡಿದರು. ಈ ವೇಳೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಫಾಲಿ ವರ್ಮಾ (17) ಬಿಗ್ ಹಿಟ್​ಗೆ ಮುಂದಾಗಿ ಕಾಕಾಗೆ ಕ್ಯಾಚ್​ ನೀಡಿದರು.

    ಈ ಹಂತದಲ್ಲಿ ಕ್ರೀಸ್​ಗಿಳಿದ ನಾಯಕಿ ಮಿಥಾಲಿ ಕೂಡ ರನ್​ಗಳಿಸಲು ಪರದಾಡಿದರು. ಪರಿಣಾಮ ಸೂಪರ್ ನೋವಾಸ್ ಬೌಲರುಗಳು ಮೇಲುಗೈ ಸಾಧಿಸಿದರು. 19 ಎಸೆತಗಳನ್ನು ಎದುರಿಸಿದ ಮಿಥಾಲಿ ರಾಜ್ ಕೇವಲ 7 ರನ್​ಗಳಿಸಿ ಸಿರಿವರ್ಧನೆ ಎಸೆತದಲ್ಲಿ ಕ್ಯಾಚ್ ನೀಡಿದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ವೇದಾಕೃಷ್ಣ ಮೂರ್ತಿ ಉತ್ತಮವಾಗಿ ಬ್ಯಾಟ್ ಬೀಸಿದರೂ (29) ದೊಡ್ಡ ಮೊತ್ತವಾಗಿಸುವಲ್ಲಿ ಎಡವಿದರು.

    6ನೇ ವಿಕೆಟ್ ಜೊತೆಯಾಟದ ಮೂಲಕ ಸೂಪರ್ ನೋವಾಸ್ ಕೈಯಲ್ಲಿದ್ದ ಪಂದ್ಯವನ್ನು ಮತ್ತೆ ತೆಕ್ಕೆಗೆ ತೆಗೆದುಕೊಂಡ ಸುಷ್ಮಾ ವರ್ಮಾ ಹಾಗೂ ದಕ್ಷಿಣ ಆಫ್ರಿಕಾ ಸೂನೆ ಲೂಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅರ್ಧಶತಕದ ಜೊತೆಯಾಟದೊಂದಿಗೆ ರನ್ ಗತಿ ಹೆಚ್ಚಿಸಿದ ಸುಷ್ಮಾ ವರ್ಮಾ (37) ಗೆಲ್ಲಲು 11 ರನ್​ ಬೇಕಿದ್ದ ವೇಳೆ ವಿಕೆಟ್ ಒಪ್ಪಿಸಿ ಆತಂಕ ಮೂಡಿಸಿದರು.

    ಕೊನೆಯ ಓವರ್​ನಲ್ಲಿ ಗೆಲ್ಲಲು 9 ರನ್ ಬೇಕಿತ್ತು. ಆದರೆ ಕ್ರೀಸ್​ನಲ್ಲಿದ್ದ ಸೂನೆ ಲೂಸ್ ಬೌಂಡರಿ ಬಾರಿಸುವ ಮೂಲಕ ರನ್​ ಅಂತರವನ್ನು ತಗ್ಗಿಸಿದರು. ಕೊನೆಯ ಎರಡು ಎಸೆತಗಳಲ್ಲಿ 2 ರನ್​ ಬೇಕಿದ್ದ ವೇಳೆ ಲೂಸ್ ಬ್ಯಾಟ್ ಎಡ್ಜ್​ ಆಗಿ ಕೀಪರ್​ ವಂಚಿಸಿ ಚೆಂಡು ಬೌಂಡರಿ ತಲುಪುದರೊಂದಿಗೆ ವೆಲಾಸಿಟಿ ತಂಡವು ಗೆಲುವಿನ ಖಾತೆ ತೆರೆಯಿತು. ಕೊನೆಯವರೆಗೂ ಅಜೇಯರಾಗಿ ಬ್ಯಾಟ್ ಬೀಸಿದ ಸೂನೆ ಲೂಸ್ 21 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್​ನೊಂದಿಗೆ 37 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

    ಇದಕ್ಕೂ ಮುನ್ನ ಟಾಸ್ ಗೆದ್ದ ವೆಲಾಸಿಟಿ ನಾಯಕಿ ಮಿಥಾಲಿ ರಾಜ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಸೂಪರ್ ನೋವಾಸ್ ರಕ್ಷಣಾತ್ಮಕ ಆರಂಭಕ್ಕೆ ಒತ್ತು ನೀಡಿತು. ಆದರೆ ಐದನೇ ಓವರ್​ನಲ್ಲಿ ಪ್ರಿಯಾ ಪುನಿಯಾ (11) ವಿಕೆಟ್ ಪಡೆಯುವ ಮೂಲಕ ನೂಜಿಲೆಂಡ್​ನ ಲೆಗ್ ಕಾಸ್ಪೆರೆಕ್ ವೆಲಾಸಿಟಿಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜೆಮಿಯಾ ರೋಡ್ರಿಗಸ್ (7) ಏಕ್ತಾ ಬಿಸ್ತ್ ಬೌಲಿಂಗ್​​ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

    ಆದರೆ ಮತ್ತೊಂದೆಡೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಲಂಕಾದ ಚಮರಿ ಅಟ್ಟಾಪಟ್ಟು ವೆಲಾಸಿಟಿ ಬೌಲರುಗಳ ಬೆಂಡೆತ್ತಿದ್ದರು. ಪರಿಣಾಮ 2 ಸಿಕ್ಸರ್, 2 ಬೌಂಡರಿಗಳೊಂದಿಗೆ 39 ಎಸೆತಗಳಲ್ಲಿ 44 ರನ್ ಬಾರಿಸಿದರು. ಅಲ್ಲದೆ ನಾಯಕಿ ಹರ್ಮನ್​ಪ್ರೀತ್ ಜೊತೆಗೂಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಆಲಂ ಎಸೆದ 13ನೇ ಓವರ್​ನಲ್ಲಿ ಬಿಗ್ ಹಿಟ್ಟರ್​ಗೆ ಮುಂದಾಗಿ ವೇದಾಕೃಷ್ಣ ಮೂರ್ತಿಗೆ ಕ್ಯಾಚ್ ನೀಡಿ ಹೊರನಡೆದರು.

    ಇದರ ಬೆನ್ನಲ್ಲೇ ಬಿರುಸಿನ ಆಟ ಪ್ರದರ್ಶಿಸಿದ ಹರ್ಮನ್​ಪ್ರೀತ್ ಕೌರ್ (31) ಕೂಡ ಹೊರ ನಡೆದರು. ಈ ವೇಳೆ ಮೇಲುಗೈ ಸಾಧಿಸಿದ ವೆಲಾಸಿಟಿ ಬೌಲರುಗಳು ಪಂದ್ಯದ ಗತಿಯನ್ನು ಬದಲಿಸಿದರು. ಸಂಪೂರ್ಣ ಹಿಡಿತ ಸಾಧಿಸಿದ ಬೌಲರುಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ರನ್ ಗತಿಯನ್ನು ಇಳಿಸಿದರು. ಪರಿಣಾಮ ನಿಗದಿತ 20 ಓವರ್​ನಲ್ಲಿ ಸೂಪರ್ ನೋವಾಸ್ 8 ವಿಕೆಟ್ ನಷ್ಟಕ್ಕೆ 126 ರನ್​ಗಳಷ್ಟೇ ಗಳಿಸುವಂತಾಯಿತು.

    ಇನ್ನು ವೆಲಾಸಿಟಿ ಪರ ಸ್ಪಿನ್ನರ್ ಏಕ್ತಾ ಬಿಶ್ತ್ 4 ಓವರ್​ನಲ್ಲಿ 22 ರನ್ ನೀಡಿ 3 ವಿಕೆಟ್ ಉರುಳಿಸಿದರೆ, ಆಲಂ ಹಾಗೂ ಕಾಸ್ಪೆರೆಕ್ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು.

    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
    Published by:zahir
    First published: