news18-kannada Updated:November 4, 2020, 9:28 PM IST
Women’s T20 challenge 2020
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಟಿ20 ಚಾಲೆಂಜ್ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೂಪರ್ ನೋವಾಸ್ ತಂಡದ ವೆಲಾಸಿಟಿಗೆ 127 ರನ್ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ವೆಲಾಸಿಟಿ ನಾಯಕಿ ಮಿಥಾಲಿ ರಾಜ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಸೂಪರ್ ನೋವಾಸ್ ರಕ್ಷಣಾತ್ಮಕ ಆರಂಭಕ್ಕೆ ಒತ್ತು ನೀಡಿತು. ಆದರೆ ಐದನೇ ಓವರ್ನಲ್ಲಿ ಪ್ರಿಯಾ ಪುನಿಯಾ (11) ವಿಕೆಟ್ ಪಡೆಯುವ ಮೂಲಕ ನೂಜಿಲೆಂಡ್ನ ಲೆಗ್ ಕಾಸ್ಪೆರೆಕ್ ವೆಲಾಸಿಟಿಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಜೆಮಿಯಾ ರೋಡ್ರಿಗಸ್ (7) ಏಕ್ತಾ ಬಿಸ್ತ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.
ಆದರೆ ಮತ್ತೊಂದೆಡೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಲಂಕಾದ ಚಮರಿ ಅಟ್ಟಾಪಟ್ಟು ವೆಲಾಸಿಟಿ ಬೌಲರುಗಳ ಬೆಂಡೆತ್ತಿದ್ದರು. ಪರಿಣಾಮ 2 ಸಿಕ್ಸರ್, 2 ಬೌಂಡರಿಗಳೊಂದಿಗೆ 39 ಎಸೆತಗಳಲ್ಲಿ 44 ರನ್ ಬಾರಿಸಿದರು. ಅಲ್ಲದೆ ನಾಯಕಿ ಹರ್ಮನ್ಪ್ರೀತ್ ಜೊತೆಗೂಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಆಲಂ ಎಸೆದ 13ನೇ ಓವರ್ನಲ್ಲಿ ಬಿಗ್ ಹಿಟ್ಟರ್ಗೆ ಮುಂದಾಗಿ ವೇದಾಕೃಷ್ಣ ಮೂರ್ತಿಗೆ ಕ್ಯಾಚ್ ನೀಡಿ ಹೊರನಡೆದರು.
ಇದರ ಬೆನ್ನಲ್ಲೇ ಬಿರುಸಿನ ಆಟ ಪ್ರದರ್ಶಿಸಿದ ಹರ್ಮನ್ಪ್ರೀತ್ ಕೌರ್ (31) ಕೂಡ ಹೊರ ನಡೆದರು. ಈ ವೇಳೆ ಮೇಲುಗೈ ಸಾಧಿಸಿದ ವೆಲಾಸಿಟಿ ಬೌಲರುಗಳು ಪಂದ್ಯದ ಗತಿಯನ್ನು ಬದಲಿಸಿದರು. ಸಂಪೂರ್ಣ ಹಿಡಿತ ಸಾಧಿಸಿದ ಬೌಲರುಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ರನ್ ಗತಿಯನ್ನು ಇಳಿಸಿದರು. ಪರಿಣಾಮ ನಿಗದಿತ 20 ಓವರ್ನಲ್ಲಿ ಸೂಪರ್ ನೋವಾಸ್ 8 ವಿಕೆಟ್ ನಷ್ಟಕ್ಕೆ 126 ರನ್ಗಳಷ್ಟೇ ಗಳಿಸುವಂತಾಯಿತು.
ಇನ್ನು ವೆಲಾಸಿಟಿ ಪರ ಸ್ಪಿನ್ನರ್ ಏಕ್ತಾ ಬಿಶ್ತ್ 4 ಓವರ್ನಲ್ಲಿ 22 ರನ್ ನೀಡಿ 3 ವಿಕೆಟ್ ಉರುಳಿಸಿದರೆ, ಆಲಂ ಹಾಗೂ ಕಾಸ್ಪೆರೆಕ್ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
Published by:
zahir
First published:
November 4, 2020, 9:27 PM IST