MS Dhoni: ಧೋನಿ ನಿಂಗ್ ವಯಸ್ಸಾಯ್ತೋ ಅಂದೋರಿಗೆ ಉತ್ತರ ನೀಡಿದ MSD

ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಬ್ಯಾಟಿಂಗ್ ವೇಳೆ ಮಹೇಂದ್ರ ಸಿಂಗ್ ಧೋನಿ ಬಳಲಿದಂತೆ ಕಂಡು ಬಂದಿದ್ದರು. ಇದೇ ವೇಳೆ ಕೆಲ ಕಾಲ ವಿಶ್ರಾಂತಿ ಕೂಡ ಪಡೆದಿದ್ದರು. ಇದರ ಬೆನ್ನಲ್ಲೇ ಧೋನಿಯ ಸಾಮರ್ಥ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳೆದ್ದಿದ್ದವು.

MS Dhoni

MS Dhoni

 • Share this:
  ನಾಲ್ಕು ಕ್ಯಾಚ್...1 ರನೌಟ್...ಐಪಿಎಲ್​ನಲ್ಲಿ ವಿಕೆಟ್ ಹಿಂದೆ ಹೀಗೆ ಕಮಾಲ್ ಮಾಡಿದ ಆಟಗಾರನ ವಯಸ್ಸು 39. ಆದರೆ ವಯಸ್ಸು ಎಂಬುದು ಜಸ್ಟ್ ನಂಬರ್ ಎಂಬುದನ್ನು ಮತ್ತೊಮ್ಮೆ ಮಹೇಂದ್ರ ಸಿಂಗ್ ಧೋನಿ ನಿರೂಪಿಸಿದರು. ಕೆಕೆಆರ್ ವಿರುದ್ಧ ನಡೆದ ಐಪಿಎಲ್​​ನ 21ನೇ ಪಂದ್ಯದಲ್ಲಿ ಸಿಎಸ್​ಕೆ ನಾಯಕ ವಿಕೆಟ್ ಹಿಂದೆ ಮಿಂಚಿನ ಸಂಚಲನ ಸೃಷ್ಟಿಸಿದ್ದರು.

  ಅದರಲ್ಲೂ ಡ್ವೇನ್ ಬ್ರಾವೊ ಎಸೆದ ಅಂತಿಮ ಓವರ್​ನಲ್ಲಿ ಗ್ಲೌಸ್ ಇಲ್ಲದೆ ಡೈವಿಂಗ್ ಕ್ಯಾಚ್ ಹಿಡಿದು ಎಲ್ಲರ ಹುಬ್ಬೇರಿಸಿದರು. 19ನೇ ಓವರ್​ನ ಐದನೇ ಎಸೆತ ಮಾವಿ ಬ್ಯಾಟ್ ಸವರಿ ವಿಕೆಟ್ ಹಿಂದೆ ಹಾರಿತ್ತು. ಆದರೆ ರನೌಟ್ ಮಾಡಲೆಂದೇ ಧೋನಿ ಗ್ಲೌಸ್ ಬಿಚ್ಚಿಟ್ಟು ಕೀಪಿಂಗ್ ಮಾಡುತ್ತಿದ್ದರು. ಆದರೆ ಅನೀಕ್ಷಿತವಾಗಿ ಬಂದ ಕ್ಯಾಚ್​ನ್ನು ಹಿಡಿಯಲು ಮೊದಲ ಪ್ರಯತ್ನದಲ್ಲಿ ಎಂಎಸ್​ಡಿ ಎಡವಿದರೂ, ಮತ್ತೆ ಡೈವಿಂಗ್ ಮೂಲಕ ಹಿಡಿದು ಮಿಂಚಿದರು.

  ಈ ಪಂದ್ಯದಲ್ಲಿ 4 ಕ್ಯಾಚ್ ಹಾಗೂ 1 ರನೌಟ್ ಮೂಲಕ ವಿಕೆಟ್ ಹಿಂದೆ ಧೋನಿ ಪರಾಕ್ರಮ ಮೆರೆದರು. ಅಲ್ಲದೆ ಕಳೆದ ಕೆಲ ದಿನಗಳಿಂದ ಸಿಎಸ್​ಕೆ ನಾಯಕ ವಯಸ್ಸಿನ ಕುರಿತು ಎದ್ದಿದ್ದ ಚರ್ಚೆಗಳಿಗೆ ಅದ್ಭುತ ಪ್ರದರ್ಶನದ ಮೂಲಕ ಮಹೇಂದ್ರ ಸಿಂಗ್ ಧೋನಿ ಉತ್ತರ ನೀಡಿದ್ದಾರೆ.  ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಬ್ಯಾಟಿಂಗ್ ವೇಳೆ ಮಹೇಂದ್ರ ಸಿಂಗ್ ಧೋನಿ ಬಳಲಿದಂತೆ ಕಂಡು ಬಂದಿದ್ದರು. ಇದೇ ವೇಳೆ ಕೆಲ ಕಾಲ ವಿಶ್ರಾಂತಿ ಕೂಡ ಪಡೆದಿದ್ದರು. ಇದರ ಬೆನ್ನಲ್ಲೇ ಧೋನಿಯ ಸಾಮರ್ಥ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳೆದ್ದಿದ್ದವು. ಅದರಲ್ಲೂ ಟೀಮ್ ಇಂಡಿಯಾ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್, ಕೆಲವರಿಗೆ ವಯಸ್ಸು ಸಂಖ್ಯೆಯಷ್ಟೇ, ಮತ್ತೆ ಕೆಲವರಿಗೆ ನಿವೃತ್ತಿಗೆ ಅದುವೇ ಕಾರಣ ಎಂದು ಪರೋಕ್ಷ ಟಾಂಗ್ ನೀಡಿದ್ದರು. ಇದಕ್ಕೆ ಹರ್ಭಜನ್ ಸಿಂಗ್ ಕೂಡ ಸಹಮತಿ ವ್ಯಕ್ತಪಡಿಸಿ ಪರೋಕ್ಷವಾಗಿ ಧೋನಿಯ ಕಟುಕಿದ್ದರು.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
  Published by:zahir
  First published: