ದುಬೈ: ಮಹೇಂದ್ರ ಸಿಂಗ್ ಧೋನಿ ಮುಂದಿನ ಐಪಿಎಲ್ ಆಡುತ್ತಾರ ಅಥವಾ ಇದೇ ಅವರ ಕಡೆಯ ಐಪಿಎಲ್ ಪಂದ್ಯಾವಳಿಯಾ? ಈ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. ಧೋನಿ ಬ್ಯಾಟ್ ಇತ್ತೀಚೆಗೆ ಸದ್ದು ಮಾಡುವುದನ್ನು ನಿಲ್ಲಿಸಿದೆಯಾದರೂ ಅವರ ನಾಯಕತ್ವದ ಸ್ಕಿಲ್ ಇನ್ನೂ ಹರಿತವಾಗಿಯೇ ಇದೆ. ಈ ಕಾರಣಕ್ಕೇ Chennai Super Kings ಈಗಾಗಲೇ IPL 2021 Playoff ಪ್ರವೇಶಿಸಿದೆ. ದೈತ್ಯ ತಂಡಗಳಾದ ಮುಂಬೈ (Mumbai Indians), ಪಂಜಾಬ್ (Punjab Kings), ರಾಜಸ್ಥಾನ (Rajasthan Royals), ಆರ್ಸಿಬಿ (Royal Challengers Bangalore) ಸೇರಿದಂತೆ ಎಲ್ಲಾ ತಂಡಗಳ ಮೇಲೂ ಸಿಎಸ್ಕೆ ಈ ಬಾರಿಯ ಐಪಿಎಲ್ನಲ್ಲಿ ಸವಾರಿ ಮಾಡಿದೆ. ಅದಕ್ಕೆ ಒಂದರ್ಥದಲ್ಲಿ ಕ್ಯಾಪ್ಟನ್ ಕೂಲ್ ಅವರ ನಾಯಕತ್ವವೇ ಕಾರಣ. ಐಪಿಎಲ್ ಇನ್ನೂ ಮುಗಿಯದಿದ್ದರೂ, ಧೋನಿ ನಿವೃತ್ತಿ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಊಹಾಪೋಹಗಳಿಗೆ ತೆರೆ ಎಳೆದ ಧೋನಿ, ಇಂದಿನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಟಾಸ್ ವೇಳೆ ಮಾಹಿತಿ ನೀಡಿದ್ದಾರೆ.
ಮುಂದಿನ ಬಾರಿಯೂ ಹಳದಿ ಜರ್ಸಿಯಲ್ಲಿ ಧೋನಿ - Dhoni to be seen in Yellow jersey again:
ಮುಂದಿನ ಐಪಿಎಲ್ ಅಂದರೆ ಐಪಿಎಲ್ 2022ರಲ್ಲಿ ಮಹೇಂದ್ರ ಸಿಂಗ್ ಧೋನಿ ಆಡಲಿದ್ದಾರೆ. ಹೌದು, ಈ ಬಗ್ಗೆ ಧೋನಿಯವರೇ ಇಂದಿನ ಟಾಸ್ನಲ್ಲಿ ಹೇಳಿದ್ದಾರೆ. Commentator Danny Morrison ಮುಂದಿನ ಐಪಿಎಲ್ನಲ್ಲಿ ನೀವು ಆಡುತ್ತೀರಾ ಎಂದು ಪ್ರಶ್ನೆ ಕೇಳಿದಾಗ ಉತ್ತರಿಸಿದ ಧೋನಿ, ಮುಂದಿನ ವರ್ಷವೂ ಹಳದಿ ಜರ್ಸಿಯಲ್ಲಿ ನನ್ನನ್ನು ಕಾಣುತ್ತೀರಿ ಎಂದು ಹೇಳಿದ್ದಾರೆ. ಮುಂದುವರೆದ ಅವರು, ಈಗಲೇ ಸರಿಯಾಗಿ ಹೇಳಲು ಸಾಧ್ಯವಿಲ್ಲ. ಎಲ್ಲವೂ ಐಪಿಎಲ್ ಹೊಸ ನಿಯಮಾವಳಿಗಳ ಮೇಲೆ ನಿರ್ಧರಿತವಾಗಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷ ಐಪಿಎಲ್ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಲಿವೆ ಮತ್ತು ಎಷ್ಟು ಭಾರತೀಯ ಮತ್ತು ವಿದೇಶಿ ಆಟಗಾರರನ್ನು ತಂಡಗಳು ರೀಟೇನ್ ಮಾಡಬಹುದು ಎಂಬ ನಿಯಮಾವಳಿ ಬದಲಾಗಲಿದೆ. ಈ ಕಾರಣಕ್ಕಾಗಿ, ನಿಯಮಾವಳಿಯ ಮೇಲೆ ಆಡುವ ಅಥವಾ ನಿವೃತ್ತಿ ಘೋಷಿಸುವ ನಿರ್ಧಾರ ಮಾಡಲಿದ್ದೇನೆ ಎಂದು ಧೋನಿ ಹೇಳಿದ್ದಾರೆ.
ಇದನ್ನೂ ಓದಿ: IPL 2021 Playoffs- ಐಪಿಎಲ್ ಪ್ಲೇ ಆಫ್: ಯಾವ್ಯಾವ ತಂಡಗಳಿಗೆ ಎಷ್ಟು ಚಾನ್ಸ್? ಇಲ್ಲಿದೆ ಲೆಕ್ಕಾಚಾರ
ಮಹೇಂದ್ರ ಸಿಂಗ್ ಧೋನಿ 2008ರಲ್ಲಿ
ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬೆಟ್ಟಿಂಗ್ ಆರೋಪಕ್ಕೆ ತಂಡವನ್ನು ಎರಡು ವರ್ಷ ಸಸ್ಪೆಂಡ್ ಮಾಡಿದಾಗ ಮಾತ್ರ ಪುಣೆ ತಂಡದ ಪರ ಆಡಿದ್ದರು. ಆದರೆ ಆಗ ತಂಡದ ನಾಯಕತ್ವ ಅವರ ಬಳಿಯಿರಲಿಲ್ಲ. ಮಿಸ್ಟರ್ ಟಿ-20 ಎಂದೇ ಕರೆಸಿಕೊಳ್ಳುವ ಸುರೇಶ್ ರೈನಾ ಮತ್ತು ಧೋನಿ ಚೆನ್ನೈ ಫ್ರಾಂಚೈಸಿಯ ಆಧಾರ ಸ್ಥಂಭವಾಗಿದ್ದಾರೆ. ಇಬ್ಬರೂ ಇದೇ ತಂಡಕ್ಕೆ ಅತಿ ಹೆಚ್ಚು ಪಂದ್ಯಗಳಲ್ಲಿ ಆಡಿದ್ದಾರೆ. ಸದ್ಯ ಧೋನಿ 40 ವರ್ಷವಾಗಿದ್ದು ಮುಂದಿನ ವರ್ಷವೂ ಫಿಟ್ನೆಸ್ ಉಳಿಸಿಕೊಂಡಿರುತ್ತಾರ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.
ಚೆನ್ನೈ - ಪಂಜಾಬ್ ಪಂದ್ಯ:
ಇಂದು ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಚೆನ್ನೈಗೆ ಆರಂಭಿಕ ಆಘಾತವಾಗಿದೆ. ಉತ್ತಮ ಲಯದಲ್ಲಿದ್ದ ಋತುರಾಜ್ ಗಾಯಕ್ವಾಡ್ ಬೇಗ ವಿಕೆಟ್ ಸಲ್ಲಿಸಿದರೆ, ನಂತರ ಬಂದ ಮೋಯಿನ್ ಅಲಿ, ರಾಬಿನ್ ಉತ್ತಪ್ಪ, ಅಂಬಾಟಿ ರಾಯುಡು ಮತ್ತು ಧೋನಿ ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಕೆಎಲ್ ರಾಹುಲ್, ಪಂದ್ಯವನ್ನು ಗೆದ್ದರೂ ಪ್ಲೇ ಆಫ್ ಕನಸು ಅಸಾಧ್ಯ. ಒಂದು ವೇಳೆ ಪಂಜಾಬ್ ಪ್ಲೇ ಆಫ್ಗೆ ಹೋಗಬೇಕು ಎಂದರೆ ಪವಾಡವೇ ಆಗಬೇಕು.
ಇದನ್ನೂ ಓದಿ: KKR - MI Playoff Chances: ಐಪಿಎಲ್ ಪ್ಲೇಆಫ್ಗೆ ಆಯ್ಕೆಯಾಗಲು ಕೆಕೆಆರ್ - ಮುಂಬೈ ಇಂಡಿಯನ್ಸ್ಗೆ ಕಡೆಯ ಅವಕಾಶ
ಚೆನ್ನೈ ಇಂದಿನ ಪಂದ್ಯದಲ್ಲಿ ಗೆದ್ದರೆ
ಪಾಯಿಂಟ್ಸ್ ಪಟ್ಟಿಯಲ್ಲಿ 20 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಲಿದೆ. ಆದರೆ ಸದ್ಯ ಮೊದಲ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ಗೆ ಇನ್ನೂ ಒಂದು ಪಂದ್ಯವಿದ್ದು ಅದರಲ್ಲಿ ಗೆದ್ದರೆ 22 ಅಂಕಗಳೊಂದಿಗೆ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನವಾಗಲಿದೆ. ಡೆಲ್ಲಿ, ಚೆನ್ನೈ ಮತ್ತು ಆರ್ಸಿಬಿ ತಂಡ ಈಗಾಗಲೇ ಪ್ಲೇ ಆಫ್ಗೆ ಆಯ್ಕೆಯಾಗಿದ್ದು, ನಾಲ್ಕನೇ ಸ್ಥಾನಕ್ಕೆ ಮುಂಬೈ ಮತ್ತು ಕೋಲ್ಕತ್ತಾ ಪೈಪೋಟಿಯಲ್ಲಿದೆ. ಮುಂಬೈ ಮತ್ತು ಕೆಕೆಆರ್ ಎರಡೂ ತಂಡಗಳಿಗೆ ಒಂದು ಪಂದ್ಯ ಬಾಕಿಯಿದ್ದು ಇಬ್ಬರೂ ಗೆದ್ದಲ್ಲಿ, ಅಂಕ ಮತ್ತೆ ಸಮವಾಗಲಿದೆ. ಆದರೆ ಕೋಲ್ಕತ್ತಾ ಮುಂಬೈಗಿಂತ ಉತ್ತಮ ರನ್ ರೇಟ್ ಹೊಂದಿದೆ. ಇಬ್ಬರೂ ಪಂದ್ಯದಲ್ಲಿ ಗೆದ್ದರೆ, ರನ್ ರೇಟ್ ಮೇಲೆ ಕೆಕೆಆರ್ ಪ್ಲೇ ಆಫ್ಗೆ ಹೋಗಲಿದೆ. ಕೆಕೆಆರ್ ಸೋತು, ಮುಂಬೈ ಗೆದ್ದರೆ ಮುಂಬೈ ಪ್ಲೇ ಆಫ್ ಪ್ರವೇಶಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ