T-20 World Cup: ಯಾರ್ಕರ್​ ಸ್ಪೆಷಲಿಸ್ಟ್​ ನಟರಾಜನ್​, ಗೂಗ್ಲಿ ಕಿಂಗ್​ ಚಾಹಲ್​ಗೆ ಏಕಿಲ್ಲ ಟಿ-20 ವಲ್ಡ್​ಕಪ್​ನಲ್ಲಿ ಸ್ಥಾನ?

T 20 World Cup Team Analysis: ಐಪಿಎಲ್​ನಿಂದ ಬಹುಬೇಗ ಹೆಸರು ಗಳಿಸಿದ ಟಿ ನಟರಾಜನ್​ ಬುಮ್ರಾ ಅವರಿಗಿಂತ ಅಕ್ಯುರೇಟ್​ ಆದ ಯಾರ್ಕರ್​ಗಳನ್ನು ಹಾಕಿ ಯಾರ್ಕರ್​ಗೆ ತಾನೇ ಸಾಟಿ ಎಂದೆನಿಸಿಕೊಂಡರು. ಹೈದರಾಬಾದ್​ ಸನ್​ ರೈಸರ್ಸ್​ ತಂಡದ ಪ್ರಮುಖ ಬೌಲಿಂಗ್​ ಅಸ್ತ್ರವಾಗಿ ಅವರು ಕಳೆದ ಸೀಸನ್​ನಿಂದ ಬಳಕೆಯಾಗುತ್ತಿದ್ದಾರೆ

Natarajan

Natarajan

  • Share this:
T-20 World Cup Team India: ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಮಹತ್ವಾಕಾಂಕ್ಷೆಯ ಟಿ20 ವಿಶ್ವಕಪ್​ಗೆ ಕೊನೆಗೂ ಭಾರತ ತಂಡವನ್ನು ಬಿಸಿಸಿಐ ಘೋಷಿಸಿದೆ. ಆದರೆ, 15 ಆಟಗಾರರ ಸ್ಕ್ವಾಡ್​ನಲ್ಲಿ ಐಪಿಎಲ್​ ಯಶಸ್ವಿ ಬ್ಯಾಟ್ಸ್​ಮನ್ ಶಿಖರ್ ಧವನ್ (Shikhar could not make the cut to T 20 World Cup) ಮತ್ತು ಲೆಗ್​ ಸ್ಪಿನ್ನರ್​ ಯಜುವೇಂದ್ರ ಚಾಹಲ್​ರನ್ನು (Yuzuvendra Chahal) ಹೊರಗಿಟ್ಟು ಅಚ್ಚರಿ ಮೂಡಿಸಿರುವ ಬಿಸಿಸಿಐ, 4 ವರ್ಷಗಳ ನಂತರ ಟಿ20 ತಂಡಕ್ಕೆ ಮತ್ತೆ ಆಫ್​ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್​ರನ್ನು (Ravichandran Ashwin) ಆಯ್ಕೆ ಮಾಡುವ ಮೂಲಕ ಮತ್ತೊಂದು ಅಚ್ಚರಿ ನೀಡಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ವಿಶ್ವಕಪ್ ತಂಡದಲ್ಲಿ ಮತ್ತೋರ್ವ ಆಫ್ ಸ್ಪಿನ್ನರ್ ತಮಿಳುನಾಡು ಮೂಲದ ವರುಣ್ ಚಕ್ರವರ್ತಿ (Varun Chakravarthy) ಮತ್ತು ಮುಂಬೈ ಮೂಲದ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್​ಗೆ (Rahul Chahar) ಅವಕಾಶ ನೀಡಲಾಗಿದೆ. ಆದರೆ ಈಗ ಎಲ್ಲೆಡೆ ಈ ಆಯ್ಕೆಯ ಬಗ್ಗೆ ಚರ್ಚೆಯಾಗುತ್ತಿದೆ. ಧವನ್​, ಚಾಹಲ್​ ಜೊತೆಗೆ ಯಾರ್ಕರ್​ ಸ್ಪೆಷಲಿಸ್ಟ್​ ಟಿ ನಟರಾಜನ್​ (T Natarajan) ಅವರಿಗೆ ಯಾಕೆ ಅವಕಾಶ ಸಿಗಲಿಲ್ಲ ಎಂದೂ ಪ್ರಶ್ನಿಸಲಾಗುತ್ತಿದೆ. 

ಇದಲ್ಲದೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಮತ್ತು ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರರನ್ನಾಗಿ ಹೆಸರಿಸಲಾಗಿದೆ. 2017 ರಲ್ಲಿ ಕೊನೆಯದಾಗಿ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ರವಿಚಂದ್ರನ್ ಅಶ್ವಿನ್ ಮತ್ತೆ ಭಾರತ ತಂಡಕ್ಕಾಗಿ ಚುಟುಕು ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಈ ಆಯ್ಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಶ್ರೀಲಂಕಾದಲ್ಲಿ ನಡೆದ ಟಿ 20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಯಜುವೇಂದ್ರ ಚಾಹಲ್ ಅವರನ್ನು ಹೊರಗಿಟ್ಟಿರುವುದು ಸಹ ಅಚ್ಚರಿಗೆ ಕಾರಣವಾಗಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಅದ್ಭುತ ಪ್ರದರ್ಶನ ನೀಡದ ಕಾರಣಕ್ಕೆ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದಲ್ಲದೆ, ಇಂದು ಪ್ರಕಟಿಸಿರುವ 15 ಜನರ ತಂಡದಲ್ಲಿ 5 ಜನ ಸ್ಪಿನ್ನರ್​ಗಳಿಗೆ ಆದ್ಯತೆ ನೀಡಿರುವುದು ಮತ್ತೊಂದು ವಿಶೇಷ.

ಒಂದೆಡೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕೆಲ ತಿಂಗಳುಗಳ ಹಿಂದೆಯಷ್ಟೇ ವಿದಾಯ ಹೇಳಿದ್ದ ಮಹೇಂದ್ರ ಸಿಂಗ್​ ಧೋನಿ ಅವರನ್ನು ಕೇವಲ ಟಿ-20 ವಿಶ್ವಕಪ್​ಗೆ ತಂಡದ ಕೋಚ್​ ಆಗಿ ಆಯ್ಕೆ ಮಾಡಲಾಗಿದೆ. ಬಿಸಿಸಿಐನ ಈ ನಡೆ ನೋಡಿದರೆ ಇನ್ಮುಂದೆ ಭಾರತ ಏಕದಿನ ತಂಡಕ್ಕೆ ಒಬ್ಬ ಕೋಚ್​, ಟೆಸ್ಟ್​ಗೆ ಒಂದು ಕೋಚ್​ ಮತ್ತು ಟಿ-20ಗೆ ಇನ್ನೊಬ್ಬ ಕೋಚ್​ ನೇಮಕ ಮಾಡಲಾಗುತ್ತದೆಯೇ? ಇಷ್ಟು ವರ್ಷಗಳು ನಡೆದುಕೊಂಡು ಬಂದ ಹೆಡ್​ ಕೋಚ್​ ಪದವಿ ವಿಕೇಂದ್ರಗೊಳ್ಳಲಿದೆಯೇ ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತಿವೆ.

ನಟರಾಜನ್​ಗಿಲ್ಲ ಸ್ಥಾನ:

ಐಪಿಎಲ್​ನಿಂದ ಬಹುಬೇಗ ಹೆಸರು ಗಳಿಸಿದ ಟಿ ನಟರಾಜನ್​ ಬುಮ್ರಾ ಅವರಿಗಿಂತ ಅಕ್ಯುರೇಟ್​ ಆದ ಯಾರ್ಕರ್​ಗಳನ್ನು ಹಾಕಿ ಯಾರ್ಕರ್​ಗೆ ತಾನೇ ಸಾಟಿ ಎಂದೆನಿಸಿಕೊಂಡರು. ಹೈದರಾಬಾದ್​ ಸನ್​ ರೈಸರ್ಸ್​ ತಂಡದ ಪ್ರಮುಖ ಬೌಲಿಂಗ್​ ಅಸ್ತ್ರವಾಗಿ ಅವರು ಕಳೆದ ಸೀಸನ್​ನಿಂದ ಬಳಕೆಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೂ ಪಾದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ನೀಡಿದ್ದರು. ಚುಟುಕು ಕ್ರಿಕೆಟ್​ನಲ್ಲಿ ಭಾರತ ತಂಡದಲ್ಲಿ ನಟರಾಜನ್​ ಸ್ಥಾನ ಭದ್ರ ಎಂದೇ ವಿಶ್ಲೇಶಿಸಲಾಗಿತ್ತು. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ, ಮೀಸಲು ಆಟಗಾರರ ಪಟ್ಟಿಯಲ್ಲೂ ಅವರ ಹೆಸರು ಕಾಣೆಯಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಗಬ್ಬರ್​ಗೆ ಎರಡೆರಡು ಪೆಟ್ಟು: ವಿಚ್ಛೇದನದ ನಂತರ ಟಿ-20 ವಲ್ಡ್​ಕಪ್​ನಿಂದಲೂ ಡಿವೋರ್ಸ್​

ನಟರಾಜನ್​ ದಾಖಲೆ:

ಒಟ್ಟೂ 7 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ನಟರಾಜನ್​ ಇದುವರೆಗೂ 13 ವಿಕೆಟ್​ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ ಒಂದು ಟೆಸ್ಟ್​, 2 ಏಕದಿನ ಪಂದ್ಯ ಮತ್ತು 4 ಟಿ-20 ಪಂದ್ಯಗಳಿವೆ. ನೆಟ್ಸ್​ನಲ್ಲಿ ಬೌಲರ್​ ಆಗಿದ್ದ ನಟರಾಜನ್​, ಐಪಿಎಲ್​ ಪ್ರದರ್ಶನದ ಮೂಲಕ ಅವಕಾಶ ಗಿಟ್ಟಿಸಿಕೊಂಡರು. ಸಿಕ್ಕ ಅಲ್ಪ ಅವಕಾಶವನ್ನು ತಮಿಳುನಾಡು ಆಟಗಾರ ಉತ್ತಮವಾಗೇ ಬಳಸಿಕೊಂಡಿದ್ದಾರೆ. ಜತೆಗೆ ಟಿ-20 ಕ್ರಿಕೆಟ್​ಗೆ ಅವರ ಆಟ ಹೇಳಿ ಮಾಡಿಸಿದಂತಿದೆ ಎಂದು ತಜ್ಞರು ಕೂಡ ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ: India's T20 World Cup Squad| ಟಿ20 ವಿಶ್ವಕಪ್ ತಂಡ ಘೋಷಣೆ; ಧವನ್, ಚಹಲ್​ಗಿಲ್ಲ ಸ್ಥಾನ, ಅಶ್ವಿನ್, ವರುಣ್​ಗೆ ಜಾಕ್​ಪಾಟ್

ಐಸಿಸಿ ಟಿ 20 ವಿಶ್ವಕಪ್ 2021 ಕ್ಕೆ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹ್ಮದ್ ಶಮಿ.
Published by:Sharath Sharma Kalagaru
First published: