IPL ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರು ಬ್ಯಾನ್ ಆಗಿರುವುದೇಕೆ?

ಐಪಿಎಲ್ 2008 ಪಾಕಿಸ್ತಾನದ ಆಟಗಾರರು ಪಂದ್ಯಾವಳಿಯ ಭಾಗವಾಗಿದ್ದ ಏಕೈಕ ಆವೃತ್ತಿಯಾಗಿತ್ತು. ಆ ವರ್ಷ IPL ನಲ್ಲಿ 11 ಪಾಕಿಸ್ತಾನಿ ಆಟಗಾರರು ಭಾಗವಹಿಸಿದ್ದರು. IPL 2008 ರಲ್ಲಿ ಭಾಗವಹಿಸಿದ 11 ಪಾಕಿಸ್ತಾನಿ ಆಟಗಾರರ ಪಟ್ಟಿ ಇಲ್ಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಸ್ಸಂದೇಹವಾಗಿ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಅತ್ಯಂತ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಐಪಿಎಲ್‌ನಲ್ಲಿ ವಿವಿಧ ದೇಶಗಳ ಆಟಗಾರರು ಭಾಗವಹಿಸಲು ಹಾತೊರೆಯುತ್ತಾರೆ. ನಾ ಮುಂದು ತಾ ಮುಂದು ಎಂದು ಬಿಡ್ಡಿಂಗ್​ನಲ್ಲಿ (IPL Mega Auction 2022) ಭಾಗವಹಿಸುತ್ತಾರೆ. ಹಣದ ಹೊಳೆಯೇ ಹರಿಯುವ ಐಪಿಎಲ್​ನಲ್ಲಿ ಒಮ್ಮೆ ಭಾಗವಹಿಸಿ ಜೀವನ ಸೆಟಲ್ ಮಾಡಿಕೊಳ್ಳಬೇಕು ಎನ್ನುವ ಆಟಗಾರರ ಸಂಖ್ಯೆಗೇನೂ ಕಡಿಮೆಯಲ್ಲ. ಆದರೆ ಐಪಿಎಲ್‌ನಲ್ಲಿ ಪಾಕಿಸ್ತಾನಿ ಆಟಗಾರರು (Pak Cricketers Ban in IPL) ಮಾತ್ರ ಆಡಲು ಸಾಧ್ಯವೇ ಇಲ್ಲ.  ಐಪಿಎಲ್‌ನಲ್ಲಿ (Indian Premier League) ಪಾಕಿಸ್ತಾನಿ ಆಟಗಾರರನ್ನು ಏಕೆ ನಿಷೇಧಿಸಲಾಗಿದೆ ಎಂದು ನೀವಿಂದು ತಿಳಿದುಕೊಳ್ಳಿ.

2008ರಲ್ಲಿ IPL ನ ಮೊದಲ ಆವೃತ್ತಿ ನಡೆದಾಗ ಎಲ್ಲ ದೇಶಗಳಿಗೂ ನೀಡಿದ್ದ ಅವಕಾಶದಂತೆ ಪಾಕಿಸ್ತಾನಿ ಕ್ರಿಕೆಟಿಗರಿಗೂ ಆಡಲು ಅವಕಾಶ ನೀಡಲಾಗಿತ್ತು. ಆದರೆ 2008 ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ, ಉಭಯ ದೇಶಗಳ ನಡುವಿನ ರಾಜಕೀಯ ಸಂಬಂಧಗಳು ಹದಗೆಟ್ಟಿತು.

ಪಾಕ್ ಪ್ರಚೋದಿತ ಮುಂಬೈ ಉಗ್ರ ದಾಳಿಯಲ್ಲಿ ಭಾರತದ ನಾಗರಿಕರು, ಸೈನಿಕರು ಮರಣವಪ್ಪಿದರು. ಹಲವು ವಿದೇಶಿಯರೂ ಜೀವ ತೊರೆದರು. ಈ ದುಷ್ಕೃತ್ಯದಿಂದ ಪಾಕಿಸ್ತಾನದ ಮೇಲಿನ ಆಕ್ರೋಶ ದುಪ್ಪಟ್ಟಾಯಿತು.  ಮುಂಬೈ ಉಗ್ರ ದಾಳಿಯ ನಂತರ ಪಾಕಿಸ್ತಾನದ ಆಟಗಾರರು IPL ನಲ್ಲಿ ಭಾಗವಹಿಸಲು ನಿರ್ಬಂಧ ವಿಧಿಸಲಾಯಿತು.

ಮುಂಬೈ ಉಗ್ರರ ದಾಳಿ
2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹತ್ತು ಭಯೋತ್ಪಾದಕರು ಮುಂಬೈಯನ್ನು ಮುತ್ತಿಗೆ ಹಾಕಿದ್ದರು. ಭಯೋತ್ಪಾದಕರಲ್ಲಿ ಒರ್ವ ಅಜ್ಮಲ್ ಕಸಬ್ ಭಾರತೀಯ ರಕ್ಷಣಾ ಪಡೆಗೆ ಸಿಕ್ಕಿಬಿದ್ದು, ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳು ಈ ದಾಳಿಯನ್ನು ಹೇಗೆ ಆಯೋಜಿಸಿವೆ ಎಂಬ ಮಾಹಿತಿಯನ್ನು ನೀಡಿದ್ದ. ಉಗ್ರ ಸಂಘಟನೆ ಲಶ್ಕರ್-ಎ-ತೊಯ್ಬಾ ನಡೆಸಿದ ಉಗ್ರ ದಾಳಿ ಎಂದು ಸಾಬೀತಾಗಿತ್ತು.

ಎಲ್ಲ ಸಾಕ್ಷ್ಯಾಧಾರಗಳಿದ್ದರೂ ಪಾಕಿಸ್ತಾನವು ದುಷ್ಕರ್ಮಿಗಳನ್ನು ವಿಚಾರಣೆಗೆ ಒಳಪಡಿಸುವಲ್ಲಿ ಹಿಂದೆಮುಂದೆ ನೋಡಿತು. ಇದರಿಂದ ಕುಪಿತಗೊಂಡ ಕೇಂದ್ರ ಸರ್ಕಾರ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಳ್ಳಲು ನಿರ್ಧರಿಸಿತು. ಹೀಗಾಗಿ BCCI ಪಾಕಿಸ್ತಾನಿ ಆಟಗಾರರನ್ನು IPL ನಲ್ಲಿ ಭಾಗವಹಿಸದಂತೆ ನಿಷೇಧಿಸಿತು.

ಇದನ್ನೂ ಓದಿ: BCCI ಗೆ ಹಣ ಎಲ್ಲಿಂದೆಲ್ಲಾ ಬರುತ್ತೆ? ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ರೋಚಕ ಕಥೆ

ಅಂದಿನಿಂದ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಡವಳಿಕೆ ಮತ್ತು ಭಾರತ ಪಾಕಿಸ್ತಾನಗಳ ನಡುವಿನ ರಾಜತಾಂತ್ರಿಕ ಸಂಬಂಧಗಳಿಂದಾಗಿ ಐಪಿಎಲ್ ಆಡಳಿತ ಮಂಡಳಿಯು ಪಾಕಿಸ್ತಾನಿ ಆಟಗಾರರನ್ನು ಲೀಗ್‌ಗೆ ಸೇರಿಸಲು ಹಿಂದೇಟು ಹಾಕುತ್ತಿದೆ.

IPL 2008 ರಲ್ಲಿ ಭಾಗವಹಿಸಿದ್ದ ಪಾಕಿಸ್ತಾನಿ ಆಟಗಾರರ ಇವರೇ!
ಐಪಿಎಲ್ 2008 ಪಾಕಿಸ್ತಾನದ ಆಟಗಾರರು ಪಂದ್ಯಾವಳಿಯ ಭಾಗವಾಗಿದ್ದ ಏಕೈಕ ಆವೃತ್ತಿಯಾಗಿತ್ತು. ಆ ವರ್ಷ IPL ನಲ್ಲಿ 11 ಪಾಕಿಸ್ತಾನಿ ಆಟಗಾರರು ಭಾಗವಹಿಸಿದ್ದರು. IPL 2008 ರಲ್ಲಿ ಭಾಗವಹಿಸಿದ 11 ಪಾಕಿಸ್ತಾನಿ ಆಟಗಾರರ ಪಟ್ಟಿ ಇಲ್ಲಿದೆ.

ಸೊಹೈಲ್ ತನ್ವೀರ್ (ರಾಜಸ್ಥಾನ್ ರಾಯಲ್ಸ್)

ಶಾಹಿದ್ ಅಫ್ರಿದಿ (ಡೆಕ್ಕನ್ ಚಾರ್ಜರ್ಸ್)

ಶೋಯೆಬ್ ಮಲಿಕ್ (ದೆಲ್ಲಿ ಡೇರ್ ಡೆವಿಲ್ಸ್)

ಶೋಯೆಬ್ ಅಖ್ತರ್ (ಕೋಲ್ಕತ್ತಾ ನೈಟ್ ರೈಡರ್ಸ್)

ಮಿಸ್ಬಾ-ಉಲ್-ಹಕ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಮೊಹಮ್ಮದ್ ಆಸಿಫ್ (ದೆಹಲಿ ಡೇರ್ ಡೆವಿಲ್ಸ್)

ಕಮ್ರಾನ್ ಅಕ್ಮಲ್ (ರಾಜಸ್ಥಾನ್ ರಾಯಲ್ಸ್)

ಸಲ್ಮಾನ್ ಬಟ್ (ಕೋಲ್ಕತ್ತಾ ನೈಟ್ ರೈಡರ್ಸ್)

ಉಮರ್ ಗುಲ್ (ಕೋಲ್ಕತ್ತಾ ನೈಟ್ ರೈಡರ್ಸ್)

ಯೂನಿಸ್ ಖಾನ್ (ರಾಜಸ್ಥಾನ್ ರಾಯಲ್ಸ್)

ಮೊಹಮ್ಮದ್ ಹಫೀಜ್ (ಕೋಲ್ಕತ್ತಾ ನೈಟ್ ರೈಡರ್ಸ್)

ಅವಕಾಶ ಇಲ್ಲದ್ದಕ್ಕೆ ಶಾಹಿದ್ ಅಫ್ರಿದಿ ಬೇಸರ!
ಇಂಡಿಯನ್ ಪ್ರೀಮಿಯರ್ ಲೀಗ್‌ನಂತಹ ದೊಡ್ಡ ವೇದಿಕೆಯಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ತಮ್ಮ ದೇಶದ ಕ್ರಿಕೆಟಿಗರು ಭಾಗವಹಿಸಲು ಸಾಧ್ಯವಿಲ್ಲ ಎಂದು ಹಳಹಳಿಸಿದ್ದರು. ಐಪಿಎಲ್ ಯಾವುದೇ ಆಟಗಾರನಿಗೆ ಮಾನ್ಯತೆ ಪಡೆಯಲು, ಅನುಭವವನ್ನು ಪಡೆಯಲು ಮತ್ತು ಸುಧಾರಿಸಲು ದೊಡ್ಡ ವೇದಿಕೆಯಾಗಿದೆ ಎಂದು ಅಫ್ರಿದಿ ಹೇಳಿದ್ದರು.

ಇದನ್ನೂ ಓದಿ: RCB ಪರ ಘರ್ಜಿಸೋ ಕ್ರಿಕೆಟಿಗರ ಪತ್ನಿಯರ ಅಂದ ಚಂದ ನೀವೇ ನೋಡಿ!

ಐಪಿಎಲ್ ದೊಡ್ಡ ಬ್ರ್ಯಾಂಡ್ ಮತ್ತು ನಮ್ಮ ಆಟಗಾರರಾದ ಬಾಬರ್ ಅಜಮ್ ಮತ್ತು ಇತರರಿಗೆ ಅದರಲ್ಲಿ ಆಡಲು ಅವಕಾಶ ಸಿಕ್ಕರೆ ಅವರು ಒತ್ತಡದ ಸಂದರ್ಭಗಳಲ್ಲಿ ಆಡಲು ಕಲಿಯುತ್ತಾರೆ ಎಂದು ನನಗೆ ತಿಳಿದಿದೆ. ದುರದೃಷ್ಟವಶಾತ್, ಪಾಕಿಸ್ತಾನದ ಆಟಗಾರರಿಗೆ ಐಪಿಎಲ್​ನಲ್ಲಿ ಆಡಲು ಆಗುತ್ತಿಲ್ಲ ಎಂದು ಶಾಹಿದ್ ಅಫ್ರಿದಿ ಹೇಳಿದ್ದರು ಎಂದು ಇಲ್ಲಿ ಸ್ಮರಿಸಬಹುದು.
Published by:guruganesh bhat
First published: