IPL

  • associate partner

ಐಪಿಎಲ್​ ಪಂದ್ಯ ನಡೆಯೋ ವೇಳೆ ಆಟಗಾರರು ಎರಡೆರಡು ಕ್ಯಾಪ್​ ಧರಿಸೋದೆಕೆ?; ಇಲ್ಲಿದೆ ಉತ್ತರ

ಕೊರೋನಾ ಹಾವಳಿ ಹೆಚ್ಚುತ್ತಿರುವ ಮಧ್ಯೆಯೇ ಐಪಿಎಲ್​ ನಡೆಯುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದೆ. 

news18-kannada
Updated:October 23, 2020, 8:54 AM IST
ಐಪಿಎಲ್​ ಪಂದ್ಯ ನಡೆಯೋ ವೇಳೆ ಆಟಗಾರರು ಎರಡೆರಡು ಕ್ಯಾಪ್​ ಧರಿಸೋದೆಕೆ?; ಇಲ್ಲಿದೆ ಉತ್ತರ
IPL 2020
  • Share this:
ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಕ್ರಿಕೆಟ್​ ಆಡುವ ವೇಳೆ ಇದ್ದ ಸಾಕಷ್ಟು ನಿಯಮಗಳು ಬದಲಾಗಿವೆ. ಕೊರೋನಾ ವೇಳೆ ಯಾರಿಗೂ ತೊಂದರೆ ಎದುರಾಗಬಾರದು ಎನ್ನುವ ಕಾರಣಕ್ಕೆ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ಮಧ್ಯೆ ಪಂದ್ಯ ನಡೆಯುತ್ತಿರುವ ವೇಳೆ ತಂಡದ ನಾಯಕ ಎರಡು ಕ್ಯಾಪ್​ ಧರಿಸಿರುವುದನ್ನು ನೀವು ನೋಡಿರಬಹುದು. ಹೀಗೆಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ಅದಕ್ಕೆ ಇಲ್ಲಿದೆ ಉತ್ತರ.

ಕೊರೋನಾ ಹಾವಳಿ ಹೆಚ್ಚುತ್ತಿರುವ ಮಧ್ಯೆಯೇ ಐಪಿಎಲ್​ ನಡೆಯುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದೆ.  ಪಂದ್ಯ ಆಡುವ ವೇಳೆ ಆಟಗಾರರು ಟವೆಲ್​, ಸನ್​ಗ್ಲಾಸ್​, ಕ್ಯಾಪ್​ ಇಟ್ಟುಕೊಂಡಿರುತ್ತಾರೆ. ಇವುಗಳನ್ನು ಅಂಪೈರ್​ ಬಳಿ ಕೊಟ್ಟು ಹೋಗುವಂತಿಲ್ಲ. ಹೀಗಾಗಿ, ಅವರು ತಂದಿರುವ ಎಲ್ಲ ವಸ್ತುಗಳನ್ನು ಅವರೇ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಬೌಲರ್​ಗಳು, ಸನ್​ಗ್ಲಾಸ್​, ಟವೆಲ್​ಗಳನ್ನು ಹೇಗಾದರೂ ಇಟ್ಟುಕೊಳ್ಳಬಹುದು. ಆದರೆ, ಕ್ಯಾಪ್​ ಇಟ್ಟುಕೊಳ್ಳೋದು ತುಂಬಾನೇ ಕಷ್ಟ. ಈ ಅನಿವಾರ್ಯ ಕಾರಣಕ್ಕೆ ಕ್ಯಾಪ್​ಅನ್ನು ಅವರು ನಾಯಕನ ಬಳಿ ಕೊಟ್ಟು ಹೋಗುತ್ತಾರೆ. ಇದಕ್ಕಾಗಿ ಕೆಲವರ ತಲೆಯ ಮೇಲೆ ಎರಡೆರಡು ಕ್ಯಾಪ್​ ಕಾಣಿಸುತ್ತಿದೆ. ಇನ್ನು, ಪಂದ್ಯ ನಡೆಯುವ ವೇಳೆ ಯಾರೂ ಶೇಕ್ ಹ್ಯಾಂಡ್​ ಮಾಡುವಂತಿಲ್ಲ. ಸ್ಟೇಡಿಯಂಗೆ ಪ್ರೇಕ್ಷಕರು ಬರುವಂತಿಲ್ಲ. ಅಲ್ಲದೆ ವಿಕೆಟ್​ ಬಿದ್ದ ನಂತರ ಹಗ್​ ಮಾಡುವಂತಿಲ್ಲ ಎನ್ನುವ ನಿಯಮವನ್ನು ಜಾರಿಗೆ ತರಲಾಗಿದೆ.
Published by: Rajesh Duggumane
First published: October 23, 2020, 8:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading