HOME » NEWS » Ipl » WHO WILL WIN SRH VS KKR MATCH 3 OF IPL 2021 ZP

IPL 2021: ಇಂದು KKR ತಂಡಕ್ಕೆ SRH ಸವಾಲು..!

ಕೆಕೆಆರ್ ತಂಡದ ಆರಂಭಿಕರಾಗಿ ಶುಭ್​ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಕಣಕ್ಕಿಳಿಯುವ ಸಾಧ್ಯತೆಯಿದ್ದು, ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ, ದಿನೇಶ್ ಕಾರ್ತಿಕ್ ಹಾಗೂ ಇಯಾನ್ ಮೋರ್ಗನ್ ಆಡಲಿದ್ದಾರೆ.

news18-kannada
Updated:April 11, 2021, 2:41 PM IST
IPL 2021: ಇಂದು KKR ತಂಡಕ್ಕೆ SRH ಸವಾಲು..!
KKR vs SRH
  • Share this:
ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ ಮೂರನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡವು ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ. ಕೆಕೆಆರ್​ ತಂಡವನ್ನು ಇಂಗ್ಲೆಂಡ್ ಆಟಗಾರ ಇಯಾನ್ ಮೋರ್ಗನ್ ಮುನ್ನಡೆಸುತ್ತಿದ್ದರೆ, ಹೈದರಾಬಾದ್​ ತಂಡದ ಸಾರಥಿಯಾಗಿ ಡೇವಿಡ್ ವಾರ್ನರ್ ಕಣಕ್ಕಿಳಿಯಲಿದ್ದಾರೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಎರಡೂ ತಂಡಗಳಲ್ಲೂ ವಿದೇಶಿ ಸ್ಟಾರ್ ಆಟಗಾರರ ದಂಡೇ ಇರುವುದು ವಿಶೇಷ.

ಕೆಕೆಆರ್ ತಂಡಕ್ಕೆ ಆ್ಯಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಸುನೀಲ್ ನರೈನ್, ಮೋರ್ಗನ್ ಅವರ ಬಲವಿದ್ದರೆ, ಇತ್ತ ವಾರ್ನರ್, ರಶೀದ್ ಖಾನ್, ಕೇನ್ ವಿಲಿಯಮ್ಸನ್, ಜಾನಿ ಬೈರ್​ಸ್ಟೋವ್ ಸನ್​ರೈಸರ್ಸ್​ಗೆ ತಂಡದ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಹಾಗೆಯೇ ಈ ಹಿಂದೆ ಕೆಕೆಆರ್ ಪರ ಆಡಿದ್ದ ಶಕೀಬ್ ಅಲ್ ಹಸನ್ ಈ ಸಲ ಮತ್ತೆ ಕೊಲ್ಕತ್ತಾ ತಂಡವನ್ನು ಕೂಡಿಕೊಂಡಿದ್ದಾರೆ.

ಇನ್ನು ಕಳೆದ ಸೀಸನ್​ನಲ್ಲಿ ಗಾಯಗೊಂಡಿದ್ದ ಸನ್​ರೈಸರ್ಸ್ ತಂಡದ ಪ್ರಮುಖ​ ವೇಗಿ ಭುವನೇಶ್ವರ್ ಕುಮಾರ್ ಈ ಸಲ ಎಸ್‌ಆರ್‌ಎಚ್ ತಂಡದ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ. ಇವರೊಂದಿಗೆ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಕೂಡ ಇರುವುದು ವಿಶೇಷ. ಅತ್ತ ಕೆಕೆಆರ್​ ತಂಡದಲ್ಲೂ ಉತ್ತಮ ಬೌಲರುಗಳ ಪಡೆಯಿದ್ದು, ಸುನೀಲ್ ನರೈನ್ ಸ್ಪಿನ್ ವಿಭಾಗವನ್ನು ಮುನ್ನಡೆಸಿದರೆ, ಕಮಿನ್ಸ್​ ವೇಗದ ಉಸ್ತುವಾರಿವಹಿಸಿಕೊಳ್ಳಲಿದ್ದಾರೆ.

ಅದೇ ರೀತಿ ಎಸ್​ಆರ್​ಹೆಚ್ ತಂಡದ ಬ್ಯಾಟಿಂಗ್ ವಿಭಾಗವು ಬಲಿಷ್ಠವಾಗಿದೆ ಎಂದೇ ಹೇಳಬಹುದು. ಡೇವಿಡ್ ವಾರ್ನರ್ ಮತ್ತು ಇನ್-ಫಾರ್ಮ್​ನಲ್ಲಿರುವ ಜಾನಿ ಬೈರ್‌ಸ್ಟೋವ್ ಇನಿಂಗ್ಸ್ ಆರಂಭಿಸಿದರೆ, ಕೇನ್ ವಿಲಿಯಮ್ಸನ್ ಮತ್ತು ಮನೀಶ್ ಪಾಂಡೆ ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಲಿದ್ದಾರೆ. ಹಾಗೆಯೇ ವೃದ್ಧಿಮಾನ್ ಸಾಹ, ಪ್ರಿಯಂ ಗರ್ಗ್, ಅಬ್ದುಲ್ ಸಮದ್ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ನಿರೀಕ್ಷೆಯಿದೆ.

ಕೆಕೆಆರ್ ತಂಡದ ಆರಂಭಿಕರಾಗಿ ಶುಭ್​ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಕಣಕ್ಕಿಳಿಯುವ ಸಾಧ್ಯತೆಯಿದ್ದು, ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ, ದಿನೇಶ್ ಕಾರ್ತಿಕ್ ಹಾಗೂ ಇಯಾನ್ ಮೋರ್ಗನ್ ಆಡಲಿದ್ದಾರೆ. ಹಾಗೆಯೇ ಕೆಳ ಕ್ರಮಾಂಕದಲ್ಲಿ ರಸೆಲ್ ಎಂಬ ಸ್ಪೋಟಕ ಬ್ಯಾಟ್ಸ್​ಮನ್ ಕಣಕ್ಕಿಳಿಯುವ ನಿರೀಕ್ಷೆಯಿದೆ.

ಉಭಯ ತಂಡಗಳ ಬ್ಯಾಟಿಂಗ್ ವಿಭಾಗವು ಬಲಿಷ್ಠವಾಗಿರುವುದರಿಂದ ಇಂದಿನ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದು. ಹಾಗೆಯೇ ಸಮತೋಲನದಿಂದ ಕೂಡಿರುವ ಎಸ್​ಆರ್​ಹೆಚ್​​ ತಂಡಕ್ಕೆ ಕೆಕೆಆರ್​ ಹೇಗೆ ಸವಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕೆಕೆಆರ್ ಸಂಪೂರ್ಣ ಬಳಗ : ಇಯಾನ್ ಮೊರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶುಭ್‌ಮನ್ ಗಿಲ್, ನಿತೀಶ್ ರಾಣಾ, ಟಿಮ್ ಸೀಫರ್ಟ್, ರಿಂಕು ಸಿಂಗ್, ಆಯಂಡ್ರೆ ರಸ್ಸೆಲ್, ಸುನೀಲ್ ನರೈನ್, ಕುಲದೀಪ್ ಯಾದವ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಶೆಲ್ಡಾನ್ ಜಾಕ್ಸನ್, ವೈಭವ್ ಅರೋರಾ, ಹರ್ಭಜನ್ ಸಿಂಗ್, ಕರುಣ್ ನಾಯರ್, ಬೆನ್ ಕಟ್ಟಿಂಗ್, ವೆಂಕಟೇಶ್ ಅಯ್ಯರ್, ಪವನ್ ನೇಗಿ. ಲ್ಯುಕಿ ಫರ್ಗುಸನ್, ಪ್ಯಾಟ್ ಕಮಿನ್ಸ್, ಕಮಲೇಶ್ ನಾಗರಕೋಟಿ, ಸಂದೀಪ್ ವಾರಿಯರ್, ಪ್ರಸಿದ್ಧ ಕೃಷ್ಣ, ರಾಹುಲ್ ತ್ರಿಪಾಠಿ.

ಎಸ್‌ಆರ್‌ಎಚ್ ಸಂಪೂರ್ಣ ಬಳಗ : ಡೇವಿಡ್ ವಾರ್ನರ್ (ನಾಯಕ), ಕೇನ್ ವಿಲಿಯಮ್ಸನ್, ವಿರಾಟ್ ಸಿಂಗ್, ಮನೀಶ್ ಪಾಂಡೆ, ಪ್ರಿಯಮ್ ಗರ್ಗ್, ವೃದ್ಧಿಮಾನ್ ಸಾಹ, ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೆ .ಸುಚಿತ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ಮುಜೀಬ್ ಉರ್ ರಹ್ಮಾನ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಟಿ.ನಟರಾಜನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್, ಬಾಸಿಲ್ ಥಾಂಪಿ, ಶಹಬಾಝ್ ನದೀಮ್, ಶ್ರೀವತ್ಸ ಗೋಸ್ವಾಮಿ, ವಿಜಯ್ ಶಂಕರ್, ಮುಹಮ್ಮದ್ ನಬಿ, ಕೇದರ್ ಜಾಧವ್.

ಪಂದ್ಯ ಆರಂಭದ ಸಮಯ ರಾತ್ರಿ 7:30

ಸ್ಥಳ: ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂ
Published by: zahir
First published: April 11, 2021, 2:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories