KL Rahul- ಕೆಎಲ್ ರಾಹುಲ್​​ರ ಈ 3 ದಾಖಲೆ ಮುರಿಯಲು ಆಗುತ್ತಾ? ಉಳಿದಿರುವುದು ಎರಡೇ ಪಂದ್ಯ

Batting Records by KL Rahul- ಈ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಪ್ಲೇ ಆಫ್​ಗೆ ಕೊಂಡೊಯ್ಯಲು ವಿಫಲರಾದರೂ ಕೆಎಲ್ ರಾಹುಲ್ ಕೆಲ ಬ್ಯಾಟಿಂಗ್ ದಾಖಲೆಗಳನ್ನ ಸ್ಥಾಪಿಸಿದ್ದಾರೆ. ಇನ್ನೂ ಎರಡು ಪಂದ್ಯ ಬಾಕಿ ಇರುವಾಗ ಅವರ ಈ ದಾಖಲೆಗಳನ್ನ ಯಾರಾದರೂ ಮುರಿಯಬಲ್ಲರಾ ಎಂದು ಒಂದು ಅವಲೋಕನ.

ಕೆಎಲ್ ರಾಹುಲ್

ಕೆಎಲ್ ರಾಹುಲ್

 • Share this:
  ಶಾರ್ಜಾ, ಅ. 11: ಪಂಜಾಬ್ ಕಿಂಗ್ಸ್ ತಂಡದ ನಾಯಕ ಕರ್ನಾಟಕದ ಕೆಎಲ್ ರಾಹುಲ್ ಅವರು ಈ ಐಪಿಎಲ್​ನಲ್ಲಿ ಮಿಶ್ರ ಫಲ ಅನುಭವಿಸಿದ್ದಾರೆ. ಬ್ಯಾಟ್ಸ್​ಮನ್ ಆಗಿ ಭರ್ಜರಿ ಆಟ ಆಡಿದ್ದಾರೆ. ಕ್ಯಾಪ್ಟನ್ ಆಗಿ ಗೌರವ ಮತ್ತು ಟೀಕೆ ಎರಡೂ ಪಡೆದಿದ್ದಾರೆ. ಲೀಗ್ ಹಂತದಲ್ಲೇ ಪಂಜಾಬ್ ತಂಡ ನಿರ್ಗಮಿಸಿದರೂ ಕೆಎಲ್ ರಾಹುಲ್ ಅವರು ಬ್ಯಾಟಿಂಗ್​ನಲ್ಲಿ ಎರಡು ದಾಖಲೆ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಅವರ ಓಟ ನಿಂತಿದ್ದರೂ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಈಗಲೂ ಅಗ್ರಸ್ಥಾನದಲ್ಲಿದ್ಧಾರೆ. ಎರಡನೇ ದಾಖಲೆ ಅವರದ್ದು ಸಿಕ್ಸರ್​ಗಳದ್ದು. ಈ ಸೀಸನ್​ನಲ್ಲಿ ಅವರು 30 ಸಿಕ್ಸರ್​ಗಳನ್ನ ಸಿಡಿಸಿದ್ದಾರೆ. ಈ ಎರಡು ದಾಖಲೆಗಳನ್ನ ಮುರಿಯಲು ಸಾಧ್ಯವೇ? ಮುರಿದರೆ ಯಾರು ಮುರಿಯಬಲ್ಲರು?

  1) ಆರೆಂಜ್ ಕ್ಯಾಪ್ ರೇಸ್: ಕೆಎಲ್ ರಾಹುಲ್ ಈ ಐಪಿಎಲ್​ನಲ್ಲಿ 13 ಪಂದ್ಯಗಳಿಂದ 626 ರನ್ ಗಳಿಸಿದ್ದಾರೆ. ಒಂದು ಶತಕವೂ ಬರದಿದ್ದರೂ ಆರು ಅರ್ಧಶತಕಗಳನ್ನ ಗಳಿಸಿದ್ದಾರೆ. ಅವರ ರನ್ ಸರಾಸಿರ ಬರೋಬ್ಬರಿ 62.60 ಇದೆ. ಕೊನೆಕೊನೆಯಲ್ಲಿ ಅವರ ಬ್ಯಾಟಿಂಗ್ ಆರ್ಭಟ ಭರ್ಜರಿಯಾಗಿತ್ತು. ಅದೇ ತೀವ್ರತೆ ಆರಂಭಕ ಪಂದ್ಯಗಳಲ್ಲಿ ಬಂದಿದ್ದರೆ ಪಂಜಾಬ್ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶಿಸುತ್ತಿತ್ತು ಎಂಬ ಅಭಿಪ್ರಾಯಗಳೂ ಇವೆ. ಅದೇನೇ ಇರಲಿ, ಅವರು ಗಳಿಸಿರುವ 626 ರನ್​ಗಳು ಈಗಲೂ ಗರಿಷ್ಠ ಸ್ಕೋರ್ ಆಗಿ ಉಳಿದುಕೊಂಡಿದೆ.

  ಚೆನ್ನೈ ಸೂಪರ್ ಕಿಂಗ್ಸ್ ತಂಡದ ಋತುರಾಜ್ ಗಾಯಕ್ವಡ್ ಮತ್ತು ಫ್ಯಾಫ್ ಡುಪ್ಲೆಸಿ ಹಾಗು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಅವರು ಅತಿ ಸಮೀಪ ಇದ್ದಾರೆ. ಆದರೆ, ಚೆನ್ನೈ ತಂಡ ಫೈನಲ್ ತಲುಪಿರುವುದರಿಂದ ಅದಕ್ಕೆ ಉಳಿದಿರುವುದು ಒಂದೇ ಪಂದ್ಯ. ಹೀಗಾಗಿ, ಋತುರಾಜ್ ಗಾಯಕ್ವಡ್ ಮತ್ತು ಡುಪ್ಲೆಸಿ ಅವರಿಗೆ ಆರೆಂಜ್ ಕ್ಯಾಪ್ ರೇಸ್​ನಲ್ಲಿ ಸೀಮಿತ ಅವಕಾಶ ಮಾತ್ರ ಇದೆ. 603 ರನ್ ಹೊಂದಿರುವ ಋತುರಾಜ್ ಅವರು 24 ರನ್ ಗಳಿಸಿದರೆ ರಾಹುಲ್ ಅವರ ದಾಖಲೆ ಹಿಂದಿಕ್ಕಬಹುದು. ಡುಪ್ಲೆಸಿ ಅವರು 547 ರನ್ ಹೊಂದಿದ್ದಾರೆ. ಅವರು ಫೈನಲ್​ನಲ್ಲಿ 80 ರನ್ ಭಾರಿಸಿದರೆ ರಾಹುಲ್ ದಾಖಲೆ ಹಿಂದಿಕ್ಕಬಹುದು. ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ 551 ರನ್ ಹೊಂದಿದ್ದಾರೆ. ಒಂದು ವೇಳೆ ಡೆಲ್ಲಿ ಫೈನಲ್​ಗೆ ತಲುಪಿದರೆ ಧವನ್ ಅವರಿಗೆ ರಾಹುಲ್ ದಾಖಲೆ ಮುರಿಯುವ ಅವಕಾಶ ದಟ್ಟವಾಗಿರುತ್ತದೆ.

  ಇದನ್ನೂ ಓದಿ: IPL 2021- ಈತ ಭಾರತದ ಕ್ರಿಸ್ ಗೇಲ್; ಅಜ್ಜಿಯಿಂದ ಕ್ರಿಕೆಟಿಗನಾಗಿ ಬೆಳೆದ ಫ್ಯೂಚರ್ ಸ್ಟಾರ್

  ಆರೆಂಜ್ ಕ್ಯಾಪ್ ರೇಸ್​ನಲ್ಲಿರುವವರು:
  ಕೆಎಲ್ ರಾಹುಲ್: 626 ರನ್
  ಋತುರಾಜ್ ಗಾಯಕ್ವಾಡ್: 603 ರನ್
  ಶಿಖರ್ ಧವನ್: 551 ರನ್
  ಫ್ಯಾಫ್ ಡುಪ್ಲೆಸಿ: 547 ರನ್
  ಗ್ಲೆನ್ ಮ್ಯಾಕ್ಸ್​ವೆಲ್: 513 ರನ್
  ಪೃಥ್ವಿ ಶಾ: 461 ರನ್
  ರಿಷಭ್ ಪಂತ್: 413 ರನ್

  2) ಅತಿ ಹೆಚ್ಚು ಸಿಕ್ಸರ್ ಹೊಡೆದ ದಾಖಲೆ:

  ಕೆಎಲ್ ರಾಹುಲ್ ಅವರು ಈ ಸೀಸನ್​ನಲ್ಲಿ ಒಟ್ಟಾರೆ 30 ಸಿಕ್ಸರ್​ಗಳನ್ನ ಭಾರಿಸಿದ್ಧಾರೆ. ಇದು ಗರಿಷ್ಠವಾಗಿದೆ. ಎರಡನೇ ಸ್ಥಾನದಲ್ಲಿರುವ ಋತುರಾಜ್ ಗಾಯಕ್ವಡ್ ಹೊಡೆದಿರುವುದು 22 ಸಿಕ್ಸರ್ ಮಾತ್ರ. ಹೀಗಾಗಿ, ಕೆಎಲ್ ರಾಹುಲ್ ಅವರ ಈ ಸಿಕ್ಸರ್ ದಾಖಲೆಯನ್ನ ಹಿಂದಿಕ್ಕುವುದು ಕಷ್ಟಕರ.

  3) ಯುಎಇ ಪಿಚ್​ಗಳಲ್ಲಿ ಒಂದೇ ಇನ್ನಿಂಗ್ಸಲ್ಲಿ ಅತಿ ಹೆಚ್ಚು ಸಿಕ್ಸರ್:

  ಇದಷ್ಟೇ ಅಲ್ಲ, ಒಂದೇ ಇನ್ನಿಂಗ್ಸಲ್ಲಿ ಅತಿ ಹೆಚ್ಚು ಸಿಕ್ಸರ್ ಭಾರಿಸಿದ ಆಟಗಾರರ ಪೈಕಿ ಕೆಎಲ್ ರಾಹುಲ್ ಕೂಡ ಒಬ್ಬರು. ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಅಜೇಯ 98 ರನ್​ಗಳ ಇನಿಂಗ್ಸಲ್ಲಿ 8 ಸಿಕ್ಸರ್ ಚಚ್ಚಿದ್ದರು. ಅದು ದುಬೈನಲ್ಲಿ ನಡೆದ ಪಂದ್ಯವಾಗಿತ್ತು. ಕೀರಾನ್ ಪೊಲಾರ್ಡ್ ಮತ್ತು ಜೋಸ್ ಬಟ್ಲರ್ ಅವರಿಬ್ಬರೂ ಕೂಡ ಎಂಟು ಸಿಕ್ಸರ್ ಭಾರಿಸಿದ್ದಾರೆ. ಆದರೆ, ಆ ಪಂದ್ಯಗಳು ಭಾರತದ ಪಿಚ್​ಗಳಲ್ಲಿ ನಡೆದವಾಗಿದ್ದವು. ಯುಎಇಯ ಕಷ್ಟಕರ ಪಿಚ್​ನಲ್ಲಿ ರಾಹುಲ್ ಈ ಸ್ಫೋಟಕ ಆಟವಾಡಿದ್ದು ಗಮನಾರ್ಹವಾದುದು. ಯುಎಇಯ ಪಿಚ್​ಗಳಲ್ಲಿ ರಾಹುಲ್ ಅವರ 8 ಸಿಕ್ಸರ್ ಬಳಿಕ ಒಂದೇ ಇನ್ನಿಂಗ್ಸಲ್ಲಿ ಅತಿ ಹೆಚ್ಚು ಸಿಕ್ಸರ್ ಎಂದರೆ ಜೇಸನ್ ಹೋಲ್ಡರ್ ಭಾರಿಸಿದ 5 ಸಿಕ್ಸರ್. ಅದು ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಬಂದಿದ್ದು.

  ಇದನ್ನೂ ಓದಿ: IPL 2021- ಈತ ಭಾರತದ ಕ್ರಿಸ್ ಗೇಲ್; ಅಜ್ಜಿಯಿಂದ ಕ್ರಿಕೆಟಿಗನಾಗಿ ಬೆಳೆದ ಫ್ಯೂಚರ್ ಸ್ಟಾರ್

  ಯುಎಇಯಲ್ಲಿ ಒಂದೇ ಇನ್ನಿಂಗ್ಸಲ್ಲಿ 8 ಸಿಕ್ಸರ್ ಭಾರಿಸಿದ ರಾಹುಲ್ ಅವರ ಈ ದಾಖಲೆಯನ್ನ ಯಾರಾದರೂ ಮುರಿಯಬಲ್ಲರಾ ಕಾದುನೋಡಬೇಕು. ಇನ್ನು, ಆರೆಂಜ್ ಕ್ಯಾಪ್ ರೇಸ್​ನಲ್ಲಿ ರಾಹುಲ್ ಅವರನ್ನ ಹಿಂದಿಕ್ಕುವ ಸಾಧ್ಯತೆ ಇದೆಯಾದರೂ ಸಿಕ್ಸರ್ ವಿಚಾರದಲ್ಲಿ ರಾಹುಲ್ ದಾಖಲೆ ಅಬಾಧಿತವಾಗಿರುವ ಸಾಧ್ಯತೆಯೇ ಹೆಚ್ಚು.

  ಇದರ ಜೊತೆಗೆ, ಐಪಿಎಲ್​ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 3 ಸಾವಿರ ರನ್ ಗಳಿಸಿದ ದಾಖಲೆಯೂ ಅವರ ಹೆಸರಿಗೆ ಜಮೆ ಆಗಿದೆ. ಇಂಥ ಕೆಲವಾರು ದಾಖಲೆಗಳು ಕೆಎಲ್ ರಾಹುಲ್ ಅವರಿಗಿದೆ.
  Published by:Vijayasarthy SN
  First published: