Orange-Purple Cap- ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಪಡೆಯುವ ಸಂಭವ ಹೆಚ್ಚಿರುವ ಆಟಗಾರರು ಇವರು

ಕೆಎಲ್ ರಾಹುಲ್ ಅವರು ಆರೆಂಜ್ ಕ್ಯಾಪ್ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಪಂಜಾಬ್ ಪ್ಲೇ ಆಫ್ ಕ್ವಾಲಿಫೈ ಆಗಿಲ್ಲದ್ದರಿಂದ ಆರೆಂಜ್ ಕ್ಯಾಪ್ ಬೇರೆಯವರಿಗೆ ಒಲಿಯುವ ಸಾಧ್ಯತೆ ಇದೆ. ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಹರ್ಷಲ್ ಪಟೇಲ್​ಗೆ ಮೂರ್ನಾಲ್ಕು ಬೌಲರ್​ಗಳಿಂದ ಪೈಪೋಟಿ ಇದೆ.

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

 • Share this:
  ದುಬೈ, ಅ. 08: ಐಪಿಎಲ್​ನ ಈ ಸೀಸನ್​ನ ಲೀಗ್ ಪಂದ್ಯಗಳು ಇವತ್ತಿಗೆ ಮುಗಿಯುತ್ತವೆ. ಮೂರು ಪ್ಲೇ ಆಫ್ ಪಂದ್ಯಗಳು ಹಾಗೂ ಒಂದು ಫೈನಲ್ ಪಂದ್ಯ ಮಾತ್ರ ಬಾಕಿ ಇವೆ. ಈಗ ಅತೀ ಹೆಚ್ಚು ರನ್ ಗಳಿಸಿದ ಹಾಗೂ ಅತೀ ಹೆಚ್ಚು ವಿಕೆಟ್ ಗಳಿಸಿದ್ದಕ್ಕೆ ನೀಡಲಾಗುವ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ರೇಸ್ ಕುತೂಹಲಕಾರಿ ಹಂತಕ್ಕೆ ಬಂದಿದೆ. ಈ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಭಾರಿಸಿರುವುದು ಕೆಎಲ್ ರಾಹುಲ್. ಪಂಜಾಬ್ ಕಿಂಗ್ಸ್ ತಂಡದ ಅವರು 14 ಪಂದ್ಯಗಳಿಂದ 626 ರನ್ ಗಳಿಸಿದ್ದಾರೆ. ಅವರ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್​ನ ಆರಂಭಿಕ ಬ್ಯಾಟರ್ಸ್ ಆಗಿರುವ ಫ್ಯಾಫ್ ಡುಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ ಅವರಿದ್ದಾರೆ. ಚೆನ್ನೈ ತಂಡದ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಮುಂದೆ ಚೆನ್ನೈ 2-3 ಪಂದ್ಯಗಳನ್ನ ಆಡುವ ಅವಕಾಶ ಹೊಂದಿದೆ. ಡುಪ್ಲೆಸಿ ಮತ್ತು ಋತುರಾಜ್ ಇಬ್ಬರಿಗೂ ಆರೆಂಜ್ ಕ್ಯಾಪ್ ಪಡೆಯುವ ಗಟ್ಟಿಯಾದ ಅವಕಾಶ ಹೊಂದಿದ್ದಾರೆ.

  ನಾಲ್ಕನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶಿಖರ್ ಧವನ್ ಇದ್ದಾರೆ. ಇವರು 501 ರನ್ ಗಳಿಸಿದ್ದಾರೆ. ಇವತ್ತಿನ ಪಂದ್ಯವೂ ಸೇರಿ ಶಿಖರ್ ಧವನ್ 2-4 ಪಂದ್ಯಗಳನ್ನ ಆಡುವ ಅವಕಾಶ ಹೊಂದಿದ್ದಾರೆ. ಅವರೂ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.
  ORANGE CAP:
  ಐದನೇ ಸ್ಥಾನದಲ್ಲಿರುವ ಸಂಜು ಸ್ಯಾಮ್ಸನ್ ಅವರಿಗೆ ಮುಂದೆ ಯಾವ ಪಂದ್ಯವೂ ಇಲ್ಲ. ಅವರು ಆರೆಂಜ್ ಕ್ಯಾಪ್ ರೇಸ್​ನಿಂದ ಹೊರಬಿದ್ದಿದ್ದಾರೆ. ಆರನೇ ಸ್ಥಾನದಲ್ಲಿರುವ ಆರ್​ಸಿಬಿಯ ಗ್ಲೆನ್ ಮ್ಯಾಕ್ಸ್​ವೆಲ್ ಅವರು 447 ರನ್ ಗಳಿಸಿದ್ಧಾರೆ. ಅವರಿಗೂ 2-4 ಪಂದ್ಯಗಳು ಅವಕಾಶ ಇದೆ. ಕನಿಷ್ಠ 200 ರನ್​ಗಳನ್ನಾದರೂ ಅವರು ಗಳಿಸಬೇಕಾಗುತ್ತದೆ. ಆರ್​ಸಿಬಿಯ ಮತ್ತೊಬ್ಬ ಆಟಗಾರ ದೇವದತ್ ಪಡಿಕ್ಕಲ್ 8ನೇ ಸ್ಥಾನದಲ್ಲಿದ್ದು 390 ರನ್ ಹೊಂದಿದ್ದಾರೆ. ಅವರೂ 250ಕ್ಕೂ ಹೆಚ್ಚು ರನ್ ಗಳಿಸಬೇಕಾಗುತ್ತದೆ. ಹೀಗಾಗಿ, ಆರೆಂಜ್ ಕ್ಯಾಪ್ ಪಡೆಯುವ ರೇಸ್​ನಲ್ಲಿ ಚೆನ್ನೈನ ಫ್ಯಾಫ್ ಡುಪ್ಲೆಸಿ ಮತ್ತು ಋತುರಾಜ್ ಗಾಯಕ್ವಡ್ ಹಾಗೂ ಡೆಲ್ಲಿಯ ಶಿಖರ್ ಧವನ್ ಅವರಿಗೆ ಹೆಚ್ಚು ಅವಕಾಶ ಇದೆ.
  PURPLE CAP:
  ಆರ್​ಸಿಬಿಯ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಆರ್​ಸಿಬಿ ಫೈನಲ್​ವರೆಗೂ ಹೋದರೆ ಅವರಿಗೂ ಆರೆಂಜ್ ಕ್ಯಾಪ್ ಗೆಲ್ಲುವ ಸಾಧ್ಯತೆ ದಟ್ಟವಾಗಿರಲಿದೆ.

  ಇದನ್ನೂ ಓದಿ: Calculating NRR- ಒಂದು ತಂಡದ ನೆಟ್ ರನ್ ರೇಟ್ ಲೆಕ್ಕ ಹಾಕುವ ಸರಳ ವಿಧಾನ ಇದು

  ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಹರ್ಷಲ್ ಮೊದಲಿಗರು:

  ಅತೀ ಹೆಚ್ಚು ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಆರ್​ಸಿಬಿಯ ಹರ್ಷಲ್ ಪಟೇಲ್ ಮುಂಚೂಣಿಯಲ್ಲಿದ್ದಾರೆ. ಇವರು 14 ಪಂದ್ಯಗಳಿಂದ 29 ವಿಕೆಟ್ ಗಳಿಸಿದ್ಧಾರೆ. ಡೆಲ್ಲಿಯ ಅವೇಶ್ ಖಾನ್ ಕೂಡ ಹಿಂದಿಲ್ಲ. ಇವರು 22 ವಿಕೆಟ್ ಪಡೆದಿದ್ದಾರೆ. ಈ ರೇಸ್​ನಲ್ಲಿ ಪೈಪೋಟಿ ನೀಡುವ ಹೆಚ್ಚಿನ ಸಾಧ್ಯತೆ ಇರುವುದು ಮುಂಬೈ ಇಂಡಿಯನ್ಸ್ ತಂಡದ ಜಸ್​ಪ್ರೀತ್ ಬುಮ್ರಾ (19), ಶಾರ್ದೂಲ್ ಠಾಕೂರ್ (18), ವರುಣ್ ಚಕ್ರವರ್ತಿ (16) ಅವರಿಗೆ. ಮುಂಬೈ ತಂಡ ಪ್ಲೇ ಆಫ್​ಗೆ ಕ್ವಾಲಿಫೈ ಆದರೆ ಬುಮ್ರಾ ಅವರು ಪರ್ಪಲ್ ಕ್ಯಾಪ್ ರೇಸ್​ಗೆ ಸೇರಬಹುದು. ಡೆಲ್ಲಿಯ ಅವೇಶ್ ಖಾನ್ ಎಲ್ಲಾ ಸಂದರ್ಭದಲ್ಲೂ ವಿಕೆಟ್ ಕೀಳುವ ಛಾತಿ ತೋರಿಸಿದ್ದಾರೆ. ಪರ್ಪಲ್ ಕ್ಯಾಪ್ ರೇಸ್​ನಲ್ಲಿ ಹರ್ಷಲ್ ಪಟೇಲ್ ಜೊತೆಗೆ ಅವೇಶ್ ಖಾನ್ ಮತ್ತು ಶಾರ್ದೂಲ್ ಅವರ ಪೈಪೋಟಿ ಇರಲಿದೆ. ಅಂತಿಮವಾಗಿ ಆ ಕ್ಯಾಪ್ ಯಾರಿಗೆ ಒಲಿಯುತ್ತದೆ ಕಾದುನೋಡಬೇಕು.
  Published by:Vijayasarthy SN
  First published: