IPL 2020: ಚೆಂಡು ನೀಡುವ ಮುನ್ನ ಸಿರಾಜ್​ಗೆ ಕೊಹ್ಲಿ ಹೇಳಿದ್ದೇನು?

ಕೆಕೆಆರ್‌ ನೀಡಿದ್ದ 85 ರನ್‌ಗಳ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ಇನ್ನೂ 39 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ ಆರ್‌ಸಿಬಿ 14 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ.

virat kohli - Siraj

virat kohli - Siraj

  • Share this:
    ಐಪಿಎಲ್​ನ ಹಲವು ಪಂದ್ಯಗಳ ವೈಫಲ್ಯ ಮರೆಸಿ ಒಂದೇ ಒಂದು ಪಂದ್ಯದ ಮೂಲಕ ಹೊಸ ಸೆನ್ಸೇಶನ್ ಸೃಷ್ಟಿಸಿದ್ದಾರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಮೊಹಮ್ಮದ್ ಸಿರಾಜ್. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಐಪಿಎಲ್​ನ 39ನೇ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಸಿರಾಜ್ ಹೊಸ ಇತಿಹಾಸ ಬರೆದರು.

    ಸತತ ಎರಡು ಮೇಡಿನ್ ಓವರ್​ಗಳನ್ನು ಎಸೆದು 2 ವಿಕೆಟ್ ಉರುಳಿಸಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದರು. ಅಲ್ಲದೆ 4 ಓವರ್​ನಲ್ಲಿ ಕೇವಲ 8 ರನ್ ನೀಡಿ 3 ಪಡೆದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 84 ರನ್​ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಭರ್ಜರಿ ಬೌಲಿಂಗ್ ಹಿನ್ನೆಲೆಯಲ್ಲಿ ಸಿರಾಜ್ ಮ್ಯಾನ್ ಆಫ್ ದಿ ಮ್ಯಾಚ್ ತಮ್ಮದಾಗಿಸಿಕೊಂಡರು.

    ಪಂದ್ಯದ ಬಳಿಕ ಮಾತನಾಡಿದ ಸಿರಾಜ್‌, ತನಗೆ ಬೆಂಬಲ ನೀಡಿದ ಆರ್​ಸಿಬಿ ಫ್ರಾಂಚೈಸಿ, ಅಭಿಮಾನಿಗಳಿಗೆ ಹಾಗೂ ನಾಯಕ ವಿರಾಟ್ ಕೊಹ್ಲಿಗೆ ಧನ್ಯವಾದ ತಿಳಿಸಿದರು. ಅಲ್ಲದೆ ಇವರೆಲ್ಲರ ಬೆಂಬಲದಿಂದಾಗಿ ಕೆಕೆಆರ್ ವಿರುದ್ಧ ಮ್ಯಾಜಿಕಲ್ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದರು.
    ನನ್ನ ಪ್ರದರ್ಶನದ ಬಗ್ಗೆ ನಾನು ಮೊದಲು ಅಲ್ಲಾಹನಿಗೆ ಧನ್ಯವಾದ ಅರ್ಪಿಸುತ್ತೇನೆ. ಹಾಗೆಯೇ ಹೊಸ ಚೆಂಡು ನೀಡಿದ ವಿರಾಟ್ ಕೊಹ್ಲಿಗೆ ಥ್ಯಾಂಕ್ಸ್ ಹೇಳುತ್ತೇನೆ. ಏಕೆಂದರೆ ನಾನು ಹೊಸ ಬಾಲ್​ನಲ್ಲಿ ತುಂಬಾ ಅಭ್ಯಾಸ ಮಾಡಿದ್ದೆ. ಆದರೂ ನಾಯಕ ಹೊಸ ಚೆಂಡಿನಲ್ಲಿ ಆರಂಭಿಕನಾಗಿ ಬೌಲಿಂಗ್ ನೀಡುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ವಿರಾಟ್ ಭಾಯ್, ಮಿಯ್ಯ ರೆಡಿಯಾಗಿರು ಎಂದಿದ್ದರು. ಇದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಸಿರಾಜ್ ತಿಳಿಸಿದರು.

    ಇನ್ನು ಪಡೆದಿರುವ 3 ವಿಕೆಟ್​ಗಳಲ್ಲಿ ಯಾವುದು ತುಂಬಾ ಖುಷಿ ಕೊಡ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಸಿರಾಜ್, ನನಗೆ ನಿತೀಶ್ ರಾಣಾ ಅವರ ಬೌಲ್ಡ್ ತುಂಬಾ ಖುಷಿ ನೀಡಿತು. ಏಕೆಂದರೆ ನಾನು ಪ್ಲ್ಯಾನ್ ಮಾಡಿದಂತೆ ಆ ವಿಕೆಟ್ ಲಭಿಸಿತ್ತು. ಹೀಗಾಗಿ ಅದು ತುಂಬಾ ಖುಷಿ ನೀಡಿತು ಎಂದು ಸಿರಾಜ್ ಹೇಳಿದರು.

    ಕೆಕೆಆರ್‌ ನೀಡಿದ್ದ 85 ರನ್‌ಗಳ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ಇನ್ನೂ 39 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ ಆರ್‌ಸಿಬಿ 14 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೇರಿದೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
    Published by:zahir
    First published: