ಜಗದೀಸನ್​ಗೆ ಗೆಲ್ಲಿಸುವ ಸಾಮರ್ಥ್ಯ ಇಲ್ಲ, ಜಾಧವ್​ಗೆ ಇದೆಯಾ? ಧೋನಿ ಹಚ್ಚಿದ ಕಿಚ್ಚಿಗೆ ಕ್ರಿಸ್ ಕಿಡಿ

IPL 2020: ಸಿಎಸ್​ಕೆ ತಂಡದ ಮುಂದಿನ ಪಂದ್ಯವು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದ್ದು, ಅದರ ನಂತರ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ.

Dhoni

Dhoni

 • Share this:
  ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿದ ಹೇಳಿಕೆ ಇದೀಗ ಚರ್ಚಾ ವಿಷಯವಾಗುತ್ತಿದೆ. ಸಿಎಸ್​ಕೆ ನಾಯಕನ ಈ ಹೇಳಿಕೆಯನ್ನು ಟೀಕಿಸಿರುವ ಟೀಮ್ ಇಂಡಿಯಾ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ (ಕ್ರಿಸ್), ಚೆನ್ನೈ ತಂಡದ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. 

  ಧೋನಿ ನೀಡಿರುವ ಹೇಳಿಕೆಯನ್ನು ನಾನೆಂದೂ ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಅವರು ಮಾತನಾಡಿರುವುದೇ ಅರ್ಥಹೀನವಾಗಿತ್ತು. ಏಕೆಂದರೆ ಟೂರ್ನಿಯಲ್ಲಿ ಕೇವಲ 1 ಪಂದ್ಯದಲ್ಲಿ ಅವಕಾಶ ಪಡೆದ ನಾರಾಯಣ ಜಗದೀಸನ್ ಆರ್​ಸಿಬಿ ವಿರುದ್ಧ 33 ರನ್​ಗಳನ್ನು ಬಾರಿಸಿದ್ದರು. ರುತುರಾಜ್ ಗಾಯಕ್ವಾಡ್ ಎರಡು ಪಂದ್ಯಗಳಲ್ಲಿ ಅವಕಾಶ ಪಡೆದರೂ ಐದು ರನ್ ಮಾತ್ರ ಕಲೆಹಾಕಿದ್ದರು. ಆದರೆ 8 ಪಂದ್ಯಗಳಿಂದ 62 ರನ್​ಗಳಿಸಿದ ಕೇದರ್ ಜಾಧವ್​ಗೆ ಚಾನ್ಸ್ ನೀಡಲಾಗಿತ್ತು ಎಂದು ಶ್ರೀಕಾಂತ್ ಟೀಕಿಸಿದರು.
  ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್​ಗಳ ಸೋಲಿನ ಬಳಿಕ ಮಾತನಾಡಿದ ಧೋನಿ, ಸಿಎಸ್​ಕೆಯಲ್ಲಿರುವ ಯುವ ಆಟಗಾರರಲ್ಲಿ ಪಂದ್ಯ ಗೆಲ್ಲಿಸಿಕೊಡುವಂತಹ ತುಡಿತ ಕಾಣಿಸಿರಲಿಲ್ಲ. ಅವರಲ್ಲಿ ಆಟದ ಬಗ್ಗೆ ಯಾವುದೇ ಕಿಚ್ಚು ಇರಲಿಲ್ಲ. ಹೀಗಾಗಿ ಅನುಭವಿ ಆಟಗಾರರನ್ನೇ ನಾವು ಕಣಕ್ಕಿಳಿಸಿದೆವು ಎಂದಿದ್ದರು.

  ಇದನ್ನು ಪ್ರಶ್ನಿಸಿರುವ ಶ್ರೀಕಾಂತ್, ಕೇದರ್ ಜಾಧವ್‌ ಆಡಿದ ಎಂಟು ಪಂದ್ಯಗಳಿಂದ ಗಳಿಸಿರುವುದು ಕೇವಲ 62 ರನ್‌ಗಳು ಮಾತ್ರ. ಪಿಯೂಷ್ ಚಾವ್ಲಾ 3 ಓವರ್‌ಗಳಲ್ಲಿ 32 ರನ್‌ಗಳನ್ನು ನೀಡಿದ್ದರು. ಜಗದೀಸನ್‌ಗೆ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಇಲ್ಲ ಎನ್ನುತ್ತಾರೆ. ಆಗಿದ್ರೆ ಜಾಧವ್‌ಗೆ ಆ ಸಾಮರ್ಥ್ಯ ಇದೆಯೇ?.

  ಸಿಎಸ್​ಕೆ ನಾಯಕ, ಜಾಧವ್‌ ಹಾಗೂ ಚಾವ್ಲಾ ಅವರಲ್ಲಿ ಧೋನಿ ಯಾವ ಸಾಮರ್ಥ್ಯ ಕಂಡಿದ್ದಾರೆ? ಕರ್ಣ್‌ ಶರ್ಮಾ ಕನಿಷ್ಠ ವಿಕೆಟ್‌ಗಳನ್ನಾದರೂ ಪಡೆದಿದ್ದಾರೆ. ಆದರೆ, ಚಾವ್ಲಾ ಬೌಲಿಂಗ್ ಮಾಡಿ ಹೋಗುತ್ತಾರೆ. ಧೋನಿ ಶ್ರೇಷ್ಠ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅವರು ಹೇಳಿರುವುದೆಲ್ಲವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಶ್ರೀಕಾಂತ್ ತಿಳಿಸಿದರು.

  ಒಟ್ಟಿನಲ್ಲಿ ಸತತ ಸೋಲುಗಳ ಬಳಿಕ ತಂಡದಲ್ಲಿದ್ದ ಯುವ ಕ್ರಿಕೆಟಿಗರ ಬಗ್ಗೆ ಮಹೇಂದ್ರ ಸಿಂಗ್ ಧೋನಿ ನೀಡಿರುವ ಹೇಳಿಕೆಯು ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಅವಕಾಶಗಳನ್ನು ನೀಡದೇ ಆಟಗಾರರ ಸಾಮರ್ಥ್ಯವನ್ನು ನಿರ್ಧರಿಸಿರುವುದು ಹಾಸ್ಯಾಸ್ಪದ. ಹಾಗೆಯೇ ಸತತ ವೈಫಲ್ಯ ಹೊಂದಿರುವ ಆಟಗಾರರಿಗೆ ಮಣೆ ಹಾಕಿ ಈಗ ಚಾನ್ಸ್ ಸಿಗದ ಕ್ರಿಕೆಟಿಗರತ್ತ ಧೋನಿ ಬೊಟ್ಟು ಮಾಡಿದ್ದಾರೆ ಎಂದು ಸಿಎಸ್​ಕೆ ನಾಯಕ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹಲವರು ವಾಗ್ದಾಳಿ ನಡೆಸಿದ್ದಾರೆ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
  Published by:zahir
  First published: