Shah Rukh Khan| ಕೋಲ್ಕತ್ತಾ ನೈಟ್ ರೈಡರ್ಸ್ ಟೀಸರ್ನಲ್ಲಿ ಕಾಣಿಸಿಕೊಂಡ ಶಾರುಖ್ ಖಾನ್
ಈ ವರ್ಷದ ಟೂರ್ನಿಯಲ್ಲಿ ಕೆಕೆಆರ್ ಸ್ಟಾರ್ ಬೌಲರ್ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಇಲ್ಲದೆ ತಂಡ ಸಜ್ಜಾಗಬೇಕಿದೆ, ಅವರ ಬದಲಿಗೆ ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ ಅವರನ್ನು ನೇಮಿಸಲಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸೋಮವಾರ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಅಭಿಯಾನವನ್ನು ಪುನರಾರಂಭಿಸಲಿದ್ದು, ಬೆಂಗಳೂರು ರಾಯಲ್ ಚಾಲೆಂಜರ್ಸ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಇಯಾನ್ ಮಾರ್ಗನ್ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೆಕೆಆರ್ ಫ್ರಾಂಚೈಸಿ ತಮ್ಮ ಅಭಿಮಾನಿಗಳಿಗಾಗಿ ಮನರಂಜನೆಯ ಟೀಸರ್ ಒಂದನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ಈ ಟೀಸರ್ ವೀಡಿಯೋದಲ್ಲಿ ತಂಡದ ಸಹ ಮಾಲೀಕ ಶಾರುಖ್ ಖಾನ್ ಮತ್ತು ಕೆಕೆಆರ್ ಕ್ರಿಕೆಟಿಗರಾದ ಶುಭಮನ್ ಗಿಲ್ ಮತ್ತು ಆಂಡ್ರೆ ರಸೆಲ್ ಕಾಣಿಸಿಕೊಂಡಿದ್ದಾರೆ. ತುಂಬಾ ದಿನಗಳ ನಂತರ ಕೆಕೆಆರ್ ಟೀಸರ್ವಿಡಿಯೋದಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಟೀಸರ್ ವಿಡಿಯೋದಲ್ಲಿ ಶಾರುಖ್ ಖಾನ್ ಅಭಿಮಾನಿಗಳು ಮತ್ತು ತಂಡದ ಪ್ರಮುಖ ಆಟಗಾರರಾದ ಆಂಡ್ರೆ ರಸೆಲ್, ಶುಭಮನ್ ಗಿಲ್ ಮತ್ತು ದಿನೇಶ್ ಕಾರ್ತಿಕ್ ಅವರ ಫೀಲ್ಡಿಂಗ್ ಕೌಶಲ್ಯಗಳನ್ನು ಪ್ರದರ್ಶಿಸುವುದನ್ನು ಕಾಣಬಹುದು. ಅಲ್ಲದೆ, ಈ ವಿಡಿಯೋ ತುಣುಕಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂ.ಎಸ್. ಧೋನಿಯನ್ನು ಕೆಕೆಆರ್ಬೌಲರ್ ಬೌಲ್ಡ್ ಮಾಡಿರುವ ದೃಶ್ಯವನ್ನೂ ಸಹ ಕಾಣಬಹುದಾಗಿದೆ.
ಕೆಕೆಆರ್ ಪ್ರಸ್ತುತ ಐಪಿಎಲ್ 2021 ಪಾಯಿಂಟ್ಸ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿದೆ. ಏಳು ಪಂದ್ಯಗಳಿಂದ ನಾಲ್ಕು ಪಾಯಿಂಟ್ಗಳನ್ನು ಹೊಂದಿದೆ. ಈ ವರ್ಷದ ಮೇ ತಿಂಗಳಲ್ಲಿ ಸೀಸನ್ ಅನ್ನು ಮುಂದೂಡುವುದಕ್ಕೆ ಮುಂಚಿತವಾಗಿ ಅವರು ಕೇವಲ ಎರಡು ಗೆಲುವುಗಳನ್ನು ಮಾತ್ರ ಕಂಡಿದ್ದರು. ಸತತ ಸೋಲಿಗೆ ಹೊಣೆ ಹೊತ್ತಿದ್ದ ದಿನೇಶ್ ಕಾರ್ತಿಕ್ ತಮ್ಮ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಂತರ ಇಯಾನ್ ಮಾರ್ಗನ್ ಅವರಿಗೆ ನಾಯಕ ಸ್ಥಾನ ನೀಡಲಾಗಿತ್ತು.
ಭಾರತದಲ್ಲಿ ಸಾಂಕ್ರಾಮಿಕದ ಎರಡನೇ ಕೊರೋನಾ ಅಲೆ ಕಾರಣದಿಂದಾಗಿ ಐಪಿಎಲ್ 2021 ಟೂರ್ನಿಯನ್ನು ಮುಂದೂಡಲಾಗಿತ್ತು. ಅಲ್ಲದೆ, ಯುಎಇಗೆ ಸ್ಥಳಾಂತರಿಸಲಾಗಿತ್ತು. ಈ ನಡುವೆ ಈ ವರ್ಷದ ಟೂರ್ನಿಯಲ್ಲಿ ಕೆಕೆಆರ್ ಸ್ಟಾರ್ ಬೌಲರ್ ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್ ಇಲ್ಲದೆ ತಂಡ ಸಜ್ಜಾಗಬೇಕಿದೆ, ಅವರ ಬದಲಿಗೆ ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ ಅವರನ್ನು ನೇಮಿಸಲಾಗಿದೆ.
ಕಮಿನ್ಸ್ ಕೆಕೆಆರ್ನ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸಿದ್ದು, ಈ ಋತುವಿನಲ್ಲಿ ಹೆಚ್ಚಿನ ವಿಕೆಟ್ ಪಡೆದ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರು. 7 ಪಂದ್ಯಗಳಲ್ಲಿ ಅವರು 9 ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ 40 ಐಪಿಎಲ್ ಪಂದ್ಯಗಳಲ್ಲಿ 28 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಸೌಥಿ ಕಮಿನ್ಸ್ ಜಾಗ ತುಂಬಲಿದ್ದಾರೆ ಎನ್ನಲಾಗಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ