Kohli Workout- ವಿರಾಟ್ ಕೊಹ್ಲಿ ಫಿಟ್ನೆಸ್ ವರ್ಕೌಟ್​ನ ವಿಡಿಯೋಗೆ ನೆಟ್ಟಿಗರು ಫಿದಾ

Video- ಬಹಳ ಕ್ಲಿಷ್ಟಕರವಾದ ಫಿಟ್ನೆಸ್ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫಲಿತಾಂಶ ನಮ್ಮ ಕೈಯಲ್ಲಿಲ್ಲ, ಪ್ರಯತ್ನ ನಮ್ಮ ಕೈಯಲ್ಲಿದೆ ಎಂಬ ಸಂದೇಶವನ್ನೂ ಅವರು ಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ ವರ್ಕೌಟ್ ಮಾಡುತ್ತಿರುವುದು

ವಿರಾಟ್ ಕೊಹ್ಲಿ ವರ್ಕೌಟ್ ಮಾಡುತ್ತಿರುವುದು

  • Share this:
    ದುಬೈ: ಭಾರತ ಕಂಡ ಅತ್ಯಂತ ಉತ್ಸಾಹೀ ಮತ್ತು ಆಕ್ರಮಣಕಾರಿ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿಯೂ ಒಬ್ಬರು. ಇವರು ಅದ್ಭುತ ಬ್ಯಾಟರ್, ಕ್ಯಾಪ್ಟನ್ ಅಷ್ಟೇ ಅಲ್ಲ ಒಳ್ಳೆಯ ಫೀಲ್ಡರ್ ಕೂಡ ಹೌದು. ಬೌಂಡರಿ ಭಾರಿಸುವುದಕ್ಕೂ ಸೈ, ರನ್ ಓಡುವುದಕ್ಕೂ ಸೈ. ಇಡೀ ಪಂದ್ಯದಲ್ಲಿ ಇವರ ಉತ್ಸಾಹ ಎಂದೂ ತಗ್ಗದು. ಇವರಿಗೆ ಎಲ್ಲಿಂದ ಇಷ್ಟು ಎನರ್ಜಿ ಬರುತ್ತೆ ಅನಿಸಬಹುದು. ಇವರ ಫಿಟ್ನೆಸ್ ಮಟ್ಟವೇ ಅತ್ಯುಚ್ಚವಾದುದು. ಇದಕ್ಕೆ ನಿದರ್ಶನವಾಗಿ ಅವರ ವರ್ಕೌಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ವೇಳೆ ಅಲ್ಲಿ ವಿರಾಟ್ ಕೊಹ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನ ಅವರೇ ಸ್ವತಃ ಹಂಚಿಕೊಂಡಿದ್ದಾರೆ. “ಫಲಿತಾಂಶ ನಿಮ್ಮ ಕೈಯಲ್ಲಿರುವುದಿಲ್ಲ, ಆದರೆ, ಪ್ರಯತ್ನ ನಿಮ್ಮ ಕೈಯಲ್ಲೇ ಇರುತ್ತದೆ” ಎಂದು ಬರೆದಿರುವ ತಲೆಬರಹ ಕೂಡ ಅರ್ಥಗರ್ಭಿತವಾಗಿದೆ.

    ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಬಹಳ ಕ್ಷಿಷ್ಕರವಾದ ವರ್ಕೌಟ್​ನಲ್ಲಿ ನಿರತರಾಗಿದ್ದಾರೆ. ಪಾದದಿಂದ ಮಂಡಿಯವರೆಗಿನ ಭಾಗವನ್ನ ಲಾಕ್ ಮಾಡಿಕೊಂಡು ಮಂಡಿ ಮೇಲಿನ ಇಡೀ ದೇಹವನ್ನು ಮೇಲೆತ್ತಿ ಕೆಳಗೆ ತಾಗಿಸುವ ಕಸರತ್ತು ಇದು. ಫಿಟ್ನೆಸ್​ನ ಅತ್ಯುಚ್ಚ ಮಟ್ಟದ ಅಭ್ಯಾಸಗಳಲ್ಲಿ ಇದೂ ಒಂದಾಗಿದೆ. ಕೊಹ್ಲಿ ಅವರ ಈ ಪರಿ ಫಿಟ್ನೆಸ್​ಗೆ ಶಕ್ತಿ ಎಲ್ಲಿಂದ ಬರುತ್ತದೆ ಎಂದು ಅಚ್ಚರಿ ಪಡುವವರಿಗೆ ಈ ವರ್ಕೌಟ್ ವಿಡಿಯೋ ಉತ್ತರ ಕೊಡಬಹುದು.


    ವಿರಾಟ್ ಕೊಹ್ಲಿ ಅವರು ಇನ್ನೊಂದು ತಿಂಗಳ ಬಳಿಕ ಟಿ20 ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಲಿದ್ಧಾರೆ. ಐಪಿಎಲ್​ನಲ್ಲಿ ಅವರ ನಾಯಕತ್ವದಲ್ಲಿ ಆರ್​ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಿದೆ. ನಾಳೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್​ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಆಡಲಿದೆ. ಅದರಲ್ಲಿ ಗೆದ್ದರೆ ಎರಡನೇ ಕ್ವಾಲಿಫೈಯರ್ ಮೂಲಕ ಫೈನಲ್ ಪ್ರವೇಶಿಸುವ ಪ್ರಯತ್ನ ಮಾಡಲಿದೆ. ಅ. 14ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ.

    ಇದನ್ನೂ ಓದಿ: K L Rahul: ಮತ್ತೆ RCBಗೆ ಬರ್ತಾರಾ ಕನ್ನಡಿಗ ರಾಹುಲ್​? ಅನುಮಾನ ಹುಟ್ಟುಹಾಕಿದ ಆ ಒಂದು ಪೋಸ್ಟ್

    ಐಪಿಎಲ್ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ ಇದೇ ಯುಎಇ ಮತ್ತು ಓಮನ್ ದೇಶದಲ್ಲಿ ಆರಂಭಗೊಳ್ಳಲಿದೆ. ಎರಡನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಪ್ರಯತ್ನ ಭಾರತದ್ದಾಗಿದೆ. ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿ ಒಂದಾದರೂ ವಿಶ್ವಕಪ್​ಗೆ ಮುತ್ತಿಕ್ಕುವ ಆಸೆಯಲ್ಲಿದ್ದಾರೆ.
    Published by:Vijayasarthy SN
    First published: