• ಹೋಂ
  • »
  • ನ್ಯೂಸ್
  • »
  • IPL
  • »
  • Watch Video| ಬೌಂಡರಿ ಲೈನಲ್ಲಿ ಹಕ್ಕಿಯಂತೆ ಹಾರಿ ಕ್ಯಾಚ್ ಹಿಡಿದು ಬೆರಗುಗೊಳಿಸಿದ ಫ್ಯಾಬಿಯನ್ ಅಲೆನ್; ಇಲ್ಲಿದೆ ನೋಡಿ ವಿಡಿಯೋ!

Watch Video| ಬೌಂಡರಿ ಲೈನಲ್ಲಿ ಹಕ್ಕಿಯಂತೆ ಹಾರಿ ಕ್ಯಾಚ್ ಹಿಡಿದು ಬೆರಗುಗೊಳಿಸಿದ ಫ್ಯಾಬಿಯನ್ ಅಲೆನ್; ಇಲ್ಲಿದೆ ನೋಡಿ ವಿಡಿಯೋ!

ಫ್ಯಾಬಿಯನ್ ಅಲೆನ್.

ಫ್ಯಾಬಿಯನ್ ಅಲೆನ್.

ಅರ್ಶ್‌ದೀಪ್ ಸಿಂಗ್ ಬ್ಯಾಕ್ ಲೆಂಗ್ತ್​​ ಎಸೆತವನ್ನು ಲಿವಿಂಗ್‌ಸ್ಟೋನ್‌ ಸಿಕ್ಸರ್​ಗೆ ಅಟ್ಟಿದ್ದರು. ಆದರೆ, ಡೀಪ್ ಮಿಡ್‌ ವಿಕೆಟ್‌ನಲ್ಲಿ ಬೌಂಡರಿ ಗೆರೆಯ ಸನಿಹದಲ್ಲಿದ್ದ ಫ್ಯಾಬಿಯನ್ ಅಲೆನ್ ಹಕ್ಕಿಯಂತೆ ಹಾರಿ ಚೆಂಡನ್ನು ಹಿಡಿಯುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

  • Share this:

    ದುಬೈ: ಮಂಗಳವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್-2021ರ (IPL 2021) ಪಂದ್ಯದ 32 ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ರಾಜಸ್ಥಾನ ರಾಯಲ್ಸ್ (Rajastan Royals) ತಂಡ ಕೊನೆಯ ಓವರ್​ನಲ್ಲಿ ರೋಚಕ ಗೆಲುವು ಸಾಧಿಸಿದೆ. ಸೋಲಿನ ಹೊರತಾಗಿಯೂ, ಪಂಜಾಬ್ (Punjab Kings) ಕೆ.ಎಲ್. ರಾಹುಲ್ (KL Rahul) ಮತ್ತು ಮಯಾಂಕ್ ಅಗರ್ವಾಲ್ (Mayank Agarwal) ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ಪಾಸಿಟಿವಿಟಿಗೆ ಕಾರಣವಾಗಿದ್ದಾರೆ. ಆದರೆ, ಇದಕ್ಕಿಂತ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದದ್ದು ಫ್ಯಾಬಿಯನ್ ಅಲೆನ್ (Fabian Allen) ಹಿಡಿದ ಕ್ಯಾಚ್​. ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟಿನಿಂದ ಸಿಡಿದ ಚೆಂಡನ್ನು ಬೌಂಡರಿ ಲೈನಲ್ಲಿ ಹಕ್ಕಿಯಂತೆ ಹಾರಿ ಹಿಡಿದ ಕ್ಯಾಚ್​ ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.



    ಪಂಜಾಬ್ ಆರಂಭದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ರಾಜಸ್ತಾನ ರಾಯಲ್ಸ್​ ಸ್ಪೋಟಕ ಆರಂಭ ಪಡೆದಿತ್ತು. ಇವಾನ್ ಲೂಯಿಸ್ ಮತ್ತು ಯಶಸ್ವಿ ಜೈಸ್ವಾಲ್ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಗೈದಿದ್ದರು. ಆದರೆ, ರಾಜಸ್ತಾನ್ ರಾಯಲ್ಸ್​ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಬ್ಯಾಕ್ ಲೆಂಗ್ತ್​​ ಎಸೆತವನ್ನು  ಲಿವಿಂಗ್‌ಸ್ಟೋನ್‌ ಸಿಕ್ಸರ್​ಗೆ ಅಟ್ಟಿದ್ದರು. ಆದರೆ, ಡೀಪ್ ಮಿಡ್‌ ವಿಕೆಟ್‌ನಲ್ಲಿ ಬೌಂಡರಿ ಗೆರೆಯ ಸನಿಹದಲ್ಲಿದ್ದ ಫ್ಯಾಬಿಯನ್ ಅಲೆನ್ ಹಕ್ಕಿಯಂತೆ ಹಾರಿ ಚೆಂಡನ್ನು ಹಿಡಿಯುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.


    ಪಿಬಿಕೆಎಸ್ ಆರಂಭದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು. ರಾಜಸ್ಥಾನದ ಆರಂಭಿಕರಾದ ಎವಿನ್ ಲೂಯಿಸ್ ಮತ್ತು ಯಶಸ್ವಿ ಜೈಸ್ವಾಲ್ ತಮ್ಮ ತಂಡಕ್ಕೆ ಕ್ರಮವಾಗಿ 36 ಮತ್ತು 49 ರನ್ ಸಿಡಿಸುವ ಮೂಲಕ ಅದ್ಭುತ ಆರಂಭ ನೀಡಿದರು. ಮಹಿಪಾಲ್ ಲೊಮರ್ ಕೇವಲ 19 ಎಸೆತಕ್ಕೆ 43 ರನ್ ಗಳಿಸಿದರು. ಪರಿಣಾಮ ರಾಜಸ್ಥಾನ್ ರಾಯಲ್ಸ್​ ತಂಡ ನಿಗದಿತ 20 ಓವರ್‌ಗಳಲ್ಲಿ 185 ರನ್ ಗಳಿಸಿತ್ತು.


    ಇದನ್ನೂ ಓದಿ: PBKS vs RR| ರಾಹುಲ್-ಮಯಾಂಕ್ ಹೋರಾಟ ವ್ಯರ್ಥ; ರಾಜಸ್ತಾನ್​ಗೆ ರೋಚಕ ಗೆಲುವು, ಬೌಲಿಂಗ್​ನಲ್ಲಿ ಹೊಸ ಇತಿಹಾಸ ಬರೆದ ತ್ಯಾಗಿ!


    186 ರನ್ ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್​ಗೆ ಸಹ ಆರಂಭಿಕ ಮಯಾಂಕ್ ಅಗರ್ವಾಲ್ (67) ಅರ್ಧಶತಕ ದಾಖಲಿಸುವ ಮೂಲಕ ಸ್ಪೋಟಕ ಆರಂಭ ನೀಡಿದ್ದರು. ಕೆ.ಎಲ್. ರಾಹುಲ್ (49) ಸಹ ಸತತ ಸಿಕ್ಸರ್​ ಬಾರಿಸುವ ಮೂಲಕ ರಾಯಲ್ಸ್​ ಬೌಲರ್​ಗಳ ಬೆವರಿಳಿಸಿದ್ದರು. ಆದರೆ, ರೋಚಕ ಅಂತಿಮ ಓವರ್‌ನಲ್ಲಿ ಆರ್​ಆರ್​ ಬೌಲರ್​ ಕಾರ್ತಿಕ್ ತ್ಯಾಗಿ ಮಾರಕ ಬೌಲಿಂಗ್ ಮೂಲಕ ನಿಕೋಲಸ್ ಪೂರನ್ ಮತ್ತು ದೀಪಕ್ ಹೂಡ ವಿಕೆಟ್ ಕಬಳಿಸಿ ರಾಜಸ್ತಾನ್ ತಂಡಕ್ಕೆ ಅಂತಿಮವಾಗಿ 2 ರನ್​ಗಳ ಗೆಲುವು ತಂದುಕೊಟ್ಟಿದ್ದಾರೆ.

    Published by:MAshok Kumar
    First published: