IPL 2021- ಎಬಿಡಿ ಔಟ್ ಆಗೋದನ್ನ ನೋಡಿ ಕೈಪೆಟ್ಟು ಮಾಡಿಕೊಂಡ ಮಗ; ಇಲ್ಲಿದೆ ವಿಡಿಯೋ

AB Devilliers’s son reaction- ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಒಂದೆರಡು ಅದ್ಭುತ ಶಾಟ್​ಗಳನ್ನ ಹೊಡೆದ ಬಳಿಕ ಆರ್​ಸಿಬಿಯ ಎಬಿ ಡೀವಿಲಿಯರ್ಸ್ ಔಟಾಗುತ್ತಾರೆ. ಇದನ್ನ ಕಂಡ ಅವರ ಮಗ ಹತಾಶೆಯಲ್ಲಿ ತಮ್ಮ ಕೈಗೆ ಪೆಟ್ಟು ಮಾಡಿಕೊಳ್ಳುತ್ತಾರೆ.

ಎಬಿ ಡೀವಿಲಿಯರ್ಸ್ ಮಗ ಮತ್ತು ಹೆಂಡತಿ

ಎಬಿ ಡೀವಿಲಿಯರ್ಸ್ ಮಗ ಮತ್ತು ಹೆಂಡತಿ

 • Cricketnext
 • Last Updated :
 • Share this:
  ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಸೂಪರ್ ಸಂಡೇಯ ಸೂಪರ್ ಮ್ಯಾಚ್ ಆಗಿತ್ತು. ಹಲವು ಭಾವೋದ್ವೇಗ ಕ್ಷಣಗಳಿಗೆ ಪಂದ್ಯ ಸಾಕ್ಷಿಯಾಯಿತು. ಅಂಥ ಕೆಲ ಎಮೋಷನಲ್ ಮೊಮೆಂಟ್​ಗಳಲ್ಲಿ ಎಬಿ ಡೀವಿಲಿಯರ್ಸ್ (AB de Villiers) ಅವರು ಔಟಾದ ಕ್ಷಣವೂ ಒಂದು. ದಕ್ಷಿಣ ಆಫ್ರಿಕಾದ ಕ್ರಿಕೆಟ್ ಜೀನಿಯಸ್ ಎಬಿ ಡೀವಿಲಿಯರ್ಸ್ ಆರ್​ಸಿಬಿಯ ಸೂಪರ್ ಸ್ಟಾರ್ ಬ್ಯಾಟರ್. ಅನೇಕ ಪಂದ್ಯಗಳಲ್ಲಿ ಏಕಾಂಗಿಯಾಗಿ ಗೆಲುವು ದಕ್ಕಿಸಿಕೊಟ್ಟಿರುವುದುಂಟು. ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರಿಂದ ಬಹಳ ನಿರೀಕ್ಷೆ ಇತ್ತು. ಹಿಂದಿನ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಅವರು ಈ ಪಂದ್ಯದಲ್ಲಿ ಆರ್​ಸಿಬಿಯ ಸ್ಕೋರ್ ಕಾರ್ಡನ್ನು ದೊಡ್ಡದಾಗಿ ಉಬ್ಬಿಸಬಹುದೆಂದು ಎಣಿಸಲಾಗಿತ್ತು. ಅದರಂತೆ ಎಬಿಡಿ ಅವರು ಬುಮ್ರಾ (Jasprith Bumrah) ಬೌಲಿಂಗ್​ನಲ್ಲಿ ಒಂದೆರಡು ಬಿಗ್ ಶಾಟ್​ಗಳನ್ನ ಹೊಡೆದು ಸಂಚಲನ ಕೂಡ ಮೂಡಿಸಿದ್ದರು. ಆದರೆ, ಬುಮ್ರಾದ ಅದೇ ಓವರ್​ನಲ್ಲಿ ಎಬಿಡಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ಔಟಾದರು. ಈ ವೇಳೆ ಅವರ ಮಗನೊಬ್ಬನ ರಿಯಾಕ್ಷನ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ನಿನ್ನೆ ಎಬಿಡಿಯ ಆಟವನ್ನ ವೀಕ್ಷಿಸಲು ಅವರ ಕುಟುಂಬವು ಸ್ಟೇಡಿಯಂನಲ್ಲಿ ಇತ್ತು. ಪತ್ನಿ ಮತ್ತು ಮಕ್ಕಳು ಉತ್ಸಾಹದಿಂದ ಮತ್ತು ಕುತೂಹಲದಿಂದ ನೋಡುತ್ತಾ ಕೂತಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟಿಂಗ್ ಮಾಡಿ ಭರ್ಜರಿ ಪ್ರದರ್ಶನ ತೋರಿತು. ವಿರಾಟ್ ಕೊಹ್ಲಿ, ಕೆಎಸ್ ಭರತ್, ಗ್ಲೆನ್ ಮ್ಯಾಕ್ಸ್​ವೆಲ್ ಅವರು ಅಮೋಘ ಆಟ ಆಡಿದರು. ಆರ್​ಸಿಬಿ ಕನಿಷ್ಠ 180 ರನ್​ಗಳನ್ನಾದರೂ ದಾಖಲಿಸಬಹುದು ಎಂಬ ನಿರೀಕ್ಷೆ 17ನೇ ಓವರ್​ವರೆಗೂ ಇತ್ತು. 17ನೇ ಓವರ್​ನಲ್ಲಿ ಜಸ್​ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಎಬಿಡಿ ಸತತ ಎರಡು ಎಸೆಗಳನ್ನ ಸಿಕ್ಸ್ ಮತ್ತು ಬೌಂಡರಿ ಭಾರಿಸಿದರು. ಎಬಿಡಿ ಹೀಗೇ ಆಡಿದ್ದರೆ ಆರ್​ಸಿಬಿ 200 ರನ್ ಗಡಿ ಮುಟ್ಟಿದ್ದರೂ ಅಚ್ಚರಿ ಇರುತ್ತಿರಲಿಲ್ಲ. ಆದರೆ, ಅದೇ ಓವರ್​ನಲ್ಲಿ ಬುಮ್ರಾ ಹಾಕಿದ ಶಾರ್ಟ್ ಬಾಲ್ ಹೊಡೆಯಲು ಹೋಗಿ ಎಡ್ಜ್ ಆಗಿ ವಿಕೆಟ್ ಕೀಪರ್​ಗೆ ಕ್ಯಾಚಿತ್ತರು. ಎಬಿಡಿ ಔಟಾಗುತ್ತಿದ್ದಂತೆಯೇ ಪಂದ್ಯ ವೀಕ್ಷಿಸುತ್ತಿದ್ದ ಅವರ ಕುಟುಂಬ ಸದಸ್ಯರು ನಿರಾಸೆ ಅನುಭವಿಸಿದರು.


  ಎಬಿ ಡೀವಿಲಿಯರ್ಸ್ ಅವರ ಒಬ್ಬ ಮಗ ಎಷ್ಟು ನಿರಾಸೆಗೊಂಡನೆಂದರೆ ಆತ ತನ್ನ ಮುಂದಿದ್ದ ಚೇರ್​ಗೆ ಹತಾಶೆಯಿಂದ ಕೈ ಗುದ್ದಿದ್ದಾನೆ. ಈ ವೇಳೆ, ಕೈಗೆ ಪೆಟ್ಟು ಬಿದ್ದು ನೋವಿನಿಂದ ಚೀರಿದ್ದಾನೆ. ಇದು ಎಬಿಡಿ ಅವರ ಮಗನ ರಿಯಾಕ್ಷನ್ ಮಾತ್ರವಲ್ಲ, ಬಹುಶಃ ಬಹುತೇಕ ಆರ್​ಸಿಬಿ ಅಭಿಮಾನಿಗಳ ರಿಯಾಕ್ಷನ್ ಕೂಡ ಹೌದು ಎನ್ನಲು ಅಡ್ಡಿ ಇಲ್ಲ. ಯಾಕೆಂದರೆ ಎಬಿಡಿ ಆರು ಎಸೆತದಲ್ಲಿ ಗಳಿಸಿದ್ದು ಕೇವಲ 11 ರನ್ ಮಾತ್ರ. ಒಳ್ಳೆಯ ಲಯದಲ್ಲಿದ್ದ ಅವರು ಮುಂದುವರಿದಿದ್ದರೆ ಬೆಂಗಳೂರು ತಂಡ 15-20 ರನ್​ಗಳನ್ನಾದರೂ ಹೆಚ್ಚುವರಿಯಾಗಿ ಪಡೆಯುತ್ತಿತ್ತು. ಎಬಿಡಿ ಔಟಾದ ಬಳಿಕ ಆರ್​ಸಿಬಿಯ ರನ್ ಗಳಿಕೆಯ ವೇಗ ಬಹುತೇಕ ತಗ್ಗಿ ಹೋಗಿ ಅಂತಿಮವಾಗಿ 165 ರನ್​ಗೆ ನಿಂತಿತು.

  ಇದನ್ನೂ ಓದಿ: Moeen Ali: ಟೆಸ್ಟ್ ಕ್ರಿಕೆಟ್​ನಿಂದ ಮೊಯೀನ್ ನಿವೃತ್ತಿ; ಭಾರತ ವಿರುದ್ಧದ ಪಂದ್ಯವೇ ಕಾರಣವಾಯಿತಾ?

  ಅದೃಷ್ಟವಶಾತ್, ಈ ಪಿಚ್​ನಲ್ಲಿ ಇದು ಉತ್ತಮ ಸ್ಕೋರ್ ಎಂಬುದು ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ಆರಂಭವಾದಾಗ ವೇದ್ಯವಾಯಿತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕ್ವಿಂಟಾನ್ ಡೀಕಾಕ್ ಬಿಟ್ಟರೆ ಮುಂಬೈ ಇಂಡಿಯನ್ಸ್​ನ ಬೇರಾವ ಬ್ಯಾಟರ್ ಕೂಡ 10ಕ್ಕಿಂತ ಹೆಚ್ಚು ರನ್ ಗಳಿಸಲಿಲ್ಲ. ಬೆಂಗಳೂರಿನ ಹರ್ಷಲ್ ಪಟೇಲ್ ಹ್ಯಾಟ್ರಿಕ್ ಸೇರಿ 4 ವಿಕೆಟ್ ಪಡೆದರು. ಯುಜವೇಂದ್ರ ಚಹಲ್ 3 ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ 2 ವಿಕೆಟ್ ಪಡೆದು ಆರ್​ಸಿಬಿ ಗೆಲುವಿನ ರೂವಾರಿಯಾದರು. ಬ್ಯಾಟಿಂಗ್​ನಲ್ಲೂ ಮಿಂಚಿದ್ದ ಮ್ಯಾಕ್ಸ್​ವೆಲ್​ಗೆ ಪಂದ್ಯಶ್ರೇಷ್ಠ ಗೌರವ ಸಿಕ್ಕಿತು.
  Published by:Vijayasarthy SN
  First published: