IPL

  • associate partner
HOME » NEWS » Ipl » VIVO IPL 2020 IPL 2020 TITLE SPONSORS VIVO SET TO EXIT CONTRACT VB

IPL 2020: ವಿವೋ ಸ್ಪಾನ್ಸರ್ ಬಹಿಷ್ಕಾರದ ಅಭಿಯಾನಕ್ಕೆ ಭಾರೀ ಜಯ: ಐಪಿಎಲ್ ಪ್ರಾಯೋಜಕತ್ವದಿಂದ ವಿವೋ ಔಟ್!

ಇತ್ತೀಚೆಗಷ್ಟೆ ಚೀನಾದ ಪ್ರಮುಖ ಮೊಬೈಲ್ ಸಂಸ್ಥೆಯಾದ ವಿವೋ ಈ ಬಾರಿಯ ಐಪಿಎಲ್​ನ ಶೀರ್ಷಿಕೆ ಪ್ರಾಯೋಜಕರಾಗಿಯೇ ಮುಂದುವರಿಯುವು ಖಚಿಪಡಿಸಿತ್ತು. ಬಿಸಿಸಿಐನ ಈ ನಿರ್ಧಾರ ಈಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

news18-kannada
Updated:August 4, 2020, 5:26 PM IST
IPL 2020: ವಿವೋ ಸ್ಪಾನ್ಸರ್ ಬಹಿಷ್ಕಾರದ ಅಭಿಯಾನಕ್ಕೆ ಭಾರೀ ಜಯ: ಐಪಿಎಲ್ ಪ್ರಾಯೋಜಕತ್ವದಿಂದ ವಿವೋ ಔಟ್!
ಐಪಿಎಲ್ 2020
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಘೊಷಣೆ ಅಧಿಕೃತವಾದ ಬೆನ್ನಲ್ಲೇ ವಿರೋಧವೂ ವ್ಯಕ್ತವಾಗಿತ್ತು. ಐಪಿಎಲ್ ಚೀನಿ ಕಂಪೆನಿ ವಿವೋ ಅನ್ನು ಪ್ರಮುಖ ಪ್ರಾಯೋಜಕ ಸಂಸ್ಥೆಯನ್ನಾಗಿ ಉಳಿಸಿಕೊಳ್ಳಲು ಬಿಸಿಸಿಐ ಕೈಗೊಂಡ ನಿರ್ಧಾರ ಸರಿಯಲ್ಲ ಎಂದು ಅನೇಕರು ಕಿಡಿಕಾರಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಯಾಗುತ್ತಿದೆ. ಅಲ್ಲದೆ ಈ ಬಾರಿಯ ಐಪಿಎಲ್ ಬೇಡ ಎಂದು ಕೆಲವರು ಹೇಳಿದ್ದರು.

ಇಷ್ಟೇ ಅಲ್ಲದೆ ಇದನ್ನು ವಿರೋಧಿಸಿ ಅಖಿಲ ಭಾರತ ವರ್ತಕರ ಮಹಾಸಂಘಟನೆ- ಕಾನ್ಫಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದರು.

ಸದ್ಯ ಇಷ್ಟೆಲ್ಲ ಚಟುವಟಿಕೆಯಾದ ಬೆನ್ನಲ್ಲೇ ಚೀನಾ ಮೂಲದ ವಿವೋ ಕಂಪೆನಿ ಐಪಿಎಲ್ ಪ್ರಾಯೋಜಿಕತ್ವದಿಂದ ಹೊರಬಂದಿದೆ. ಮುಂದಿನ ಆವೃತ್ತಿಗೆ ಮತ್ತೆ ವಿವೋ ಪ್ರಾಯೋಜಿಕತ್ವ ಇರಲಿದ್ದು, ಈ ಬಾರಿ ಹೊಸ ಸ್ಪಾನ್ಸರ್​ನಡಿಯಲ್ಲಿ ಐಪಿಎಲ್ ನಡೆಯಲಿದೆ.

VIVO IPL 2020: ಈ ಬಾರಿಯ ಆರ್​ಸಿಬಿ ಸೈನ್ಯ ಹೇಗಿದೆ?; ಇಲ್ಲಿದೆ 21 ಆಟಗಾರರ ಸಂಪೂರ್ಣ ಪಟ್ಟಿ

ಕಳೆದ ಕೆಲವು ದಿನಗಳಿಂದ ಟ್ವಿಟರಿಗರು ಐಪಿಎಲ್ ವಿರುದ್ಧ ಅಭಿಯಾನ ಆರಂಭಿಸಿದ್ದು, 'ಚೀನಾಪ್ರೀಮಿಯರ್ ಲೀಗ್' ಎಂದು ಹ್ಯಾಶ್ ಟ್ಯಾಗ್ ಹಾಕಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಆರ್ ಎಸ್‌ಎಸ್ ಸಂಘಟನೆ ಕೂಡಾ ಬಿಸಿಸಿಐಗೆ ಚೀನಾ ಕಂಪನಿಗಳ ಪ್ರಾಯೋಜಕತ್ವ ರದ್ದು ಪಡಿಸುವಂತೆ ಆಗ್ರಹಿಸಿತ್ತು.

ಇತ್ತೀಚೆಗಷ್ಟೆ ಚೀನಾದ ಪ್ರಮುಖ ಮೊಬೈಲ್ ಸಂಸ್ಥೆಯಾದ ವಿವೋ ಈ ಬಾರಿಯ ಐಪಿಎಲ್​ನ ಶೀರ್ಷಿಕೆ ಪ್ರಾಯೋಜಕರಾಗಿಯೇ ಮುಂದುವರಿಯುವು ಖಚಿಪಡಿಸಿತ್ತು. ಬಿಸಿಸಿಐನ ಈ ನಿರ್ಧಾರ ಈಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ನೀವು ನಿಮ್ಮ ಮುಖ್ಯ ಪ್ರಾಯೋಜಕರನ್ನು ಐಪಿಎಲ್​ನಿಂದ ಬಹಿಷ್ಕರಿಸದಿದ್ದರೆ ನಾವು ಇಡೀ ಐಪಿಎಲ್ಅನ್ನು ಬಹಿಷ್ಕರಿಸುತ್ತೇವೆ ಎಂದು ಕೆಲ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಈ ಮೂಲಕ ಟ್ವಿಟ್ಟರ್​ನಲ್ಲಿ #ಬಾಯ್ಕಾಟ್ಐಪಿಎಲ್ ಅಭಿಯಾನವನ್ನು ಟ್ರೆಂಡ್ ಕೂಡ ಆಗಿತ್ತು.Yuvraj Singh: 2019 ವಿಶ್ವಕಪ್​ಗೆ ತಂಡವನ್ನು ಆಯ್ಕೆ ಮಾಡುವ ಮುನ್ನ ಧೋನಿ ಯುವಿಗೆ ಏನು ಹೇಳಿದ್ರಂತೆ ಗೊತ್ತೇ?

ಇಂಡಿಯನ್ ಪ್ರೀಮಿಯರ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಇನ್ನೇನು ಒಂದುವರೆ ತಿಂಗಳಷ್ಟೇ ಬಾಕಿಯಿದೆ. ರಂದು ರಂಗಿನ ಕ್ರಿಕೆಟ್ ಹಬ್ಬಕ್ಕೆ ಅಭಿಮಾನಿಗಳಂತು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆಟಗಾರರು ಕೂಡ ಸಕಲ ಸಿದ್ಧತೆಯಲ್ಲಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರುವ ಐಪಿಎಲ್ 2020ಕ್ಕೆ ದಿನಾಂಕ ಕೂಡ ನಿಗದಿಯಾಗಿದ್ದು, ಸೆಪ್ಟೆಂಬರ್ 19ರಂದು ಆರಂಭವಾಗಿ ನವೆಂಬರ್ 8ರಂದು ಮುಕ್ತಾಯಗೊಳ್ಳಲಿದೆ ಎಂದು ಬಿಸಿಸಿಐ ತಿಳಿಸಿದೆ.

51 ದಿನಗಳ ಕಾಲ ದುಬೈನಲ್ಲಿ ಐಪಿಎಲ್ ಆಯೋಜಿಸಲು ವೇಳಾಪಟ್ಟಿ ಕೂಡ ಸಿದ್ಧಪಡಿಸಲಾಗಿದ್ದು ಇನ್ನಷ್ಟೆ ಪ್ರಕಟವಾಗಬೇಕಿದೆ.
Published by: Vinay Bhat
First published: August 4, 2020, 5:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories