IPL

  • associate partner
HOME » NEWS » Ipl » VIRENDER SEHWAG WANTS RCB SKIPPER VIRAT KOHLI TO SWITCH GEARS A LOT QUICKER ZP

Virender Sehwag: ವೀರೇಂದ್ರ ಸೆಹ್ವಾಗ್ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಹೇಳಿದ್ದೇನು ಗೊತ್ತಾ?

Virat Kohli: 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್​ನಲ್ಲಿ ವಿರಾಟ್ ಕೊಹ್ಲಿ 14 ಪಂದ್ಯಗಳಿಂದ‌ 460 ರನ್‌ಗಳನ್ನು ಗಳಿಸಿದ್ದಾರೆ. ಅದು ಕೂಡ 122 ಸ್ಟ್ರೈಕ್‌ ರೇಟ್ ನಲ್ಲಿ ಎಂಬುದು ವಿಶೇಷ.

news18-kannada
Updated:November 5, 2020, 11:01 PM IST
Virender Sehwag: ವೀರೇಂದ್ರ ಸೆಹ್ವಾಗ್ ವಿರಾಟ್​ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಹೇಳಿದ್ದೇನು ಗೊತ್ತಾ?
Virat-Sehwag
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತಕ್ಕೆ ತಲುಪಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸಿದ್ದು, ಮೊದಲ ಕ್ವಾಲಿಫೈಯರ್ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಯ 4 ಪಂದ್ಯಗಳನ್ನು ಸೋಲುವ ಮೂಲಕ ಈಗ 4ನೇ ಸ್ಥಾನದಲ್ಲಿದೆ. ಅಂದರೆ ಕೊಹ್ಲಿ ಪಡೆ ಮಾಡಿದ ಎಡವಟ್ಟುಗಳೇ ಈಗ ತಂಡವನ್ನು ಎಲಿಮಿನೇಟರ್ ಹಂತಕ್ಕೆ ತಂದು ನಿಲ್ಲಿಸಿದೆ ಎನ್ನಬಹುದು. ಆರ್​ಸಿಬಿ ತಂಡವು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದ್ದು, ಇದರಲ್ಲಿ ಗೆದ್ದರೆ ಮಾತ್ರ ಪ್ರಶಸ್ತಿ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಹೀಗಾಗಿ ಶುಕ್ರವಾರ ಸಕಲ ತಯಾರಿಗಳೊಂದಿಗೆ ಆರ್​ಸಿಬಿ ಕಣಕ್ಕಿಳಿಯುವುದಂತು ದಿಟ.

ಆದರೆ ಆರ್​ಸಿಬಿಗೆ ಸದ್ಯ ಚಿಂತೆ ಪ್ರಮುಖ ಬ್ಯಾಟ್ಸ್​ಮನ್​ಗಳ ಸ್ಪೋಟಕ ಆಟದ ಕೊರತೆ. ಆರಂಭದಲ್ಲಿ ದೇವದತ್ ಪಡಿಕ್ಕಲ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರೂ ತಂಡಕ್ಕೆ ಬಿರುಸಿನ ಆರಂಭ ಸಿಗುತ್ತಿಲ್ಲ. ಹಾಗೆಯೇ ಇನ್ನೊಂದು ಬದಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಆರೋನ್ ಫಿಂಚ್ ಹಾಗೂ ಜೋಶ್ ಫಿಲಿಪೆ ವಿಫಲರಾಗಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದರೂ ಕೊಹ್ಲಿಯ ಸಿಡಿಲಬ್ಬರ ಮಾತ್ರ ಕಾಣಿಸುತ್ತಿಲ್ಲ.

13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್​ನಲ್ಲಿ ಕೊಹ್ಲಿ 14 ಪಂದ್ಯಗಳಿಂದ‌ 460 ರನ್‌ಗಳನ್ನು ಗಳಿಸಿದ್ದಾರೆ. ಆದರೆ ಅದು ಟಿ20 ಕ್ರಿಕೆಟ್​ನ ಸಾಧಾರಣ ಸ್ಟ್ರೈಕ್‌ ರೇಟ್‌ ಎಂದು ಪರಿಗಣಿಸಲಾಗುವ 122 ಸರಾಸರಿಯಲ್ಲಿ ಎಂಬುದು ವಿಶೇಷ. ಹೀಗಾಗಿಯೇ ಕೊಹ್ಲಿ ಸ್ಪೋಟಕ ಇನಿಂಗ್ಸ್ ಆಡದ ಹೊರತು ಆರ್​ಸಿಬಿ ರನ್​ ಗತಿ ವೇಗ ಪಡೆಯುವುದಿಲ್ಲ. ಇದೇ ಕಾರಣದಿಂದ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಕೂಡ ಕೊಹ್ಲಿ ಬ್ಯಾಟಿಂಗ್​ನಲ್ಲಿ ವೇಗ ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸೆಹ್ವಾಗ್, ಕೊಹ್ಲಿ ಉತ್ತಮ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಬೇಕು. ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಬೇಕಾಗುತ್ತದೆ. ಪ್ರಸಕ್ತ ಟೂರ್ನಿಯಲ್ಲಿ ರನ್​ ಗತಿಯನ್ನು ಹೆಚ್ಚಿಸಲು ಕೊಹ್ಲಿ 20 ರಿಂದ 25 ಎಸೆತಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ವೇಳೆ ಅವರು ಔಟ್ ಆಗುತ್ತಿದ್ದಂತೆ ತಂಡವು ಒತ್ತಡಕ್ಕೆ ಸಿಲುಕುತ್ತದೆ. ಹಾಗಾಗಿ ಕೊಹ್ಲಿ ಆರಂಭದಲ್ಲೇ ಗೇರ್ ಬದಲಿಸಬೇಕು ಎಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ ಔಟ್ ಆಗದೇ ಇದ್ದಿದ್ರೆ 40 ಎಸೆತಗಳಲ್ಲಿ 70 ರಿಂದ 80 ರನ್​ಗಳನ್ನು ಬಾರಿಸಬಹುದಿತ್ತು. ಅಲ್ಲದೆ ಆರ್​ಸಿಬಿ ದೊಡ್ಡ ಮೊತ್ತ ಪೇರಿಸಲು ಇದು ನೆರವಾಗುತ್ತಿತ್ತು. ಆದರೆ ಅಂದು ಕೊಹ್ಲಿ ಬಿರುಸಿನ ಬ್ಯಾಟಿಂಗ್ ಮಾಡಿರಲಿಲ್ಲ. ಹೀಗಾಗಿ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಿಲ್ಲ. ಹೀಗಾಗಿ ಕ್ರೀಸ್​ ಬಂದೊಡನೆ ವೇಗವಾಗಿ ಬ್ಯಾಟಿಂಗ್ ಮಾಡಬೇಕು ಎಂದು ಸೆಹ್ವಾಲ್ ಸಲಹೆ ನೀಡಿದರು.

ಕೊಹ್ಲಿ ಕ್ರೀಸ್​ನಲ್ಲಿದ್ದರೂ ಸ್ಪೋಟಕ ಬ್ಯಾಟಿಂಗ್ ಕಂಡು ಬರುತ್ತಿಲ್ಲ. ಅವರು ಔಟ್ ಆಗಿ ಬರುವಾಗ ಅವರ ಸ್ಟ್ರೈಕ್ ರೇಟ್ ಉತ್ತಮವಾಗಿರುವುದಿಲ್ಲ. ಅದು ಕೇವಲ 110 ರಿಂದ 120 ರಷ್ಟಿದ್ದರೆ ತಂಡವು ತೊಂದರೆಗೀಡಾಗುತ್ತದೆ ಎಂದು ಸೆಹ್ವಾಗ್ ವಿವರಿಸಿದರು. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಬೇಕಿದೆ ಎಂದು ಸ್ಪೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರುವ ವೀರು ಅಭಿಪ್ರಾಯಪಟ್ಟರು.
POINTS TABLE: SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: Rohit Sharma: ಗಂಗೂಲಿ ಸಲಹೆಯನ್ನು ಧಿಕ್ಕರಿಸಿದ್ರಾ ರೋಹಿತ್ ಶರ್ಮಾ..!
Published by: zahir
First published: November 5, 2020, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories