ಐಪಿಎಲ್...ಆರ್ಸಿಬಿ...ವಿರಾಟ್ ಕೊಹ್ಲಿ...ಇದು ಸದ್ಯದ ಚರ್ಚಾ ವಿಷಯ. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದಿದೆ. ಇದರೊಂದಿಗೆ ಪ್ರಶಸ್ತಿ ಗೆಲ್ಲುವ 13 ವರ್ಷಗಳ ಕನಸು ಕೂಡ ಕಮರಿದೆ. ಇದರ ಬೆನ್ನಲ್ಲೇ ಆರ್ಸಿಬಿ ನಾಯಕ ಸ್ಥಾನದಿಂದ ಕೊಹ್ಲಿಯನ್ನು ಕೆಳಗಿಸಬೇಕೆಂಬ ಕೂಗುಗಳು ಕೇಳಿ ಬರುತ್ತಿವೆ. ಇತ್ತ ಮಾಜಿ ಕ್ರಿಕೆಟರುಗಳು ಕೂಡ ಕೊಹ್ಲಿಯ ಕಪ್ತಾನಗಿರಿಯ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದಾರೆ. ಆದರೆ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಮಾತ್ರ ಆರ್ಸಿಬಿ ನಾಯಕನ ಬೆಂಬಲಕ್ಕೆ ನಿಂತಿದ್ದಾರೆ.
ಹೌದು, ಕೊಹ್ಲಿ ನಾಯಕತ್ವವನ್ನು ತ್ಯಜಿಸಬೇಕೆಂಬ ಅಭಿಪ್ರಾಯಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಸೆಹ್ವಾಗ್ ಅವರು ಉತ್ತಮ ನಾಯಕ ಎನ್ನುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ತಂಡದಿಂದ ನಾಯಕತ್ವವನ್ನು ಬದಲಿಸುವುದು ಶಾಶ್ವತ ಪರಿಹಾರವಲ್ಲ ಎಂದಿರುವ ವೀರು, ಕೊಹ್ಲಿ ಸಮತೋಲನ ಇಲ್ಲದ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಉತ್ತಮ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡುವತ್ತ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿ, ಏಕದಿನ, ಟಿ20 ಹಾಗೂ ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಆರ್ಸಿಬಿ ತಂಡವನ್ನು ಮುನ್ನಡೆಸುವಲ್ಲಿ ಎಡವುತ್ತಿದ್ದಾರೆ. ಇದಕ್ಕೆ ಕಾರಣ ಒಂದು ತಂಡ. ಉತ್ತಮ ತಂಡ ಹೊಂದಿದ್ದರೆ ಮಾತ್ರ ಗೆಲ್ಲಲು ಸಾಧ್ಯ. ಹೀಗಾಗಿ ನಾಯಕನಿಗೆ ಉತ್ತಮ ತಂಡವನ್ನು ರೂಪಿಸಿಕೊಡುವಲ್ಲಿ ಆರ್ಸಿಬಿ ಫ್ರಾಂಚೈಸಿ ಗಮನಹರಿಸಬೇಕು. ಬದಲಾಗಿ ನಾಯಕತ್ವದ ಬದಲಾವಣೆಯತ್ತ ಚಿಂತನೆ ನಡೆಸಬಾರದು ಎಂದು ತಿಳಿಸಿದ್ದಾರೆ.
ಐಪಿಎಲ್ 2020 ಯನ್ನು ಅದ್ಭುತವಾಗಿ ಆರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತಿಮ 4 ಪಂದ್ಯಗಳಲ್ಲಿ ಸತತ ಸೋಲುಗಳ ಹೊರತಾಗಿಯೂ, ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಪ್ರಶಸ್ತಿ ಸುತ್ತಿನ ಹೋರಾಟದಿಂದ ಹೊರಬಿತ್ತು. ಇದರೊಂದಿಗೆ ಈ ಬಾರಿ ಕೂಡ ಆರ್ಸಿಬಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಯಿತು. ಅಲ್ಲದೆ 8 ವರ್ಷಗಳಿಂದ ಆರ್ಸಿಬಿ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳೆದ್ದಿದ್ದವು.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಇಲ್ಲಿವರೆಗೂ ಈತ ಹೇಳಿದ ಭವಿಷ್ಯ ನಿಜವಾಗಿದೆ: ಈ ಬಾರಿ ಕಪ್ ಗೆಲ್ಲುವ ತಂಡವನ್ನೂ ತಿಳಿಸಿದ್ದಾನೆ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ