Virat Kohli- ಬೆಂಗಳೂರಿಗೆ ಶಾಕ್ ಕೊಟ್ಟ ವಿರಾಟ್; ಆರ್​ಸಿಬಿ ಕ್ಯಾಪ್ಟನ್ಸಿಗೂ ಕೊಹ್ಲಿ ವಿದಾಯ

RCB Captaincy- ಈ ಬಾರಿ ಐಪಿಎಲ್ ಟೂರ್ನಿಯ ಬಳಿಕ ವಿರಾಟ್ ಕೊಹ್ಲಿ ಅವರು ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಯಲಿದ್ಧಾರೆ ಎಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಲಾಗಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Cricketnext
  • Last Updated :
  • Share this:
    ಬೆಂಗಳೂರು, ಸೆ. 19: ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿ ಅಚ್ಚರಿ ಹುಟ್ಟಿಸಿದ್ದ ವಿರಾಟ್ ಕೊಹ್ಲಿ (Virat Kohli) ಇದೀಗ ಐಪಿಎಲ್ ಟೂರ್ನಿಯಲ್ಲೂ ಶಾಕ್ ಕೊಟ್ಟಿದ್ಧಾರೆ. ಐಪಿಎಲ್​ನ ಎರಡನೇ ಲೆಗ್ ಪಂದ್ಯಗಳು ಆರಂಭಗೊಂಡ ದಿನವೇ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಗೆ ವಿದಾಯ (Step Down from RCB Captaincy) ಹೇಳುತ್ತಿರುವುದಾಗಿ ಘೋಷಿಸಿದ್ಧಾರೆ. ಆರ್​ಸಿಬಿ ತಂಡದ ನಾಯಕರಾಗಿ ಇದು ನನ್ನ ಕೊನೆಯ ಐಪಿಎಲ್ ಟೂರ್ನಿ ಎಂದು ವಿರಾಟ್ ಕೊಹ್ಲಿ ಹೇಳಿದ್ಧಾರೆಂದು ಬೆಂಗಳೂರು ರಾಯಲ್ ಚಾಲೆಂಜರ್ಸ್​ನ (RCB) ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಲಾಗಿದೆ. ಆದರೆ, ಆರ್​ಸಿಬಿ ಆಟಗಾರನಾಗಿ ಅವರು ಮುಂದುವರಿಯಲಿದ್ಧಾರೆ. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ಆರ್​ಸಿಬಿ ಜೊತೆ ಇರುತ್ತೇನೆ ಎಂದು ಕೊಹ್ಲಿ ಖಚಿತಪಡಿಸಿದ್ಧಾರೆ.

    “ಐಪಿಎಲ್ 2021 ಟೂರ್ನಿ ಬಳಿಕ ವಿರಾಟ್ ಕೊಹ್ಲಿ ಅವರು ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಯಲಿದ್ಧಾರೆ” ಎಂದು ಆರ್​ಸಿಬಿ ಟ್ವೀಟ್ ಮಾಡಿದೆ. ಹಾಗೆಯೇ, “ಆರ್​ಸಿಬಿ ಕ್ಯಾಪ್ಟನ್ ಆಗಿ ಇದು ನನ್ನ ಕೊನೆಯ ಐಪಿಎಲ್ ಆಗಿರುತ್ತದೆ. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ನಾನು ಆರ್​ಸಿಬಿ ಆಟಗಾರನಾಗಿಯೇ ಮುಂದುವರಿಯುತ್ತೇನೆ. ನನ್ನ ಮೇಲೆ ವಿಶ್ವಾಸ ಇಟ್ಟು ಬೆಂಬಲಿಸುತ್ತಾ ಬಂದ ಎಲ್ಲಾ ಆರ್​ಸಿಬಿ ಫ್ಯಾನ್ಸ್​ಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ” ಎಂದು ಆರ್​ಸಿಬಿಯ ಈ ಟ್ವೀಟ್​ನಲ್ಲಿ ತಿಳಿಸಲಾಗಿದೆ.



    ಆರ್​ಸಿಬಿಯಿಂದ ಆದ ಟ್ವೀಟ್​ನಲ್ಲಿ ವಿಡಿಯೋ ಕೂಡ ಇದೆ. ವಿರಾಟ್ ಕೊಹ್ಲಿ ಅವರು ಈ ವಿಡಿಯೋದಲ್ಲಿ ಮಾತನಾಡಿದ್ದು, “..ಆರ್​ಸಿಬಿ ಮ್ಯಾನೇಜ್ಮೆಂಟ್ ಜೊತೆ ಇಂದು ಸಂಜೆ ಈ ವಿಚಾರವಾಗಿ ಮಾತನಾಡಿದೆ. ಸ್ವಲ್ಪ ಕಾಲದಿಂದ ಈ ವಿಚಾರ ನನ್ನ ಮನಸಿನಲ್ಲಿತ್ತು. ಆರ್​ಸಿಬಿ ಕ್ಯಾಪ್ಟನ್ ಆಗಿ ಇದು ನನ್ನ ಕೊನೆಯ ಐಪಿಎಲ್ ಟೂರ್ನಿಯಾಗಿರುತ್ತದೆ. ನನ್ನ ಕೊನೆಯ ಐಪಿಎಲ್ ಪಂದ್ಯದವರೆಗೂ ನಾನು ಆರ್​ಸಿಬಿ ಆಟಗಾರನಾಗಿರುತ್ತೇನೆ…. ನಾನು ಫ್ರೆಶ್ ಅಗಿರಲು ಸಮಯ ಬೇಕಾಗುತ್ತದೆ. ನಾನು ಹೇಗೆ ಮುಂದುವರಿಯಬೇಕೆಂದು ಸ್ಪಷ್ಟವಾಗಿ ಅರಿಯಲು ಸಮಯ ಬೇಕಾಗುತ್ತದೆ…. ಇದು ಒಂಬತ್ತು ವರ್ಷಗಳ ಒಳ್ಳೆಯ ಪ್ರಯಾಣವಾಗಿದೆ. ಖುಷಿ, ಹತಾಶೆ, ನಿರಾಸೆ ಭಾವನೆಗಳು ಈ ಹಾದಿಯಲ್ಲಿ ನನಗೆ ಸಿಕ್ಕಿವೆ” ಎಂದು ವಿರಾಟ್ ಕೊಹ್ಲಿ ಈ ವಿಡಿಯೋದಲ್ಲಿ ಹೇಳಿದ್ಧಾರೆ.

    ಇದನ್ನೂ ಓದಿ: CSK vs MI- ಗಾಯಕ್ವಡ್, ಬ್ರಾವೋ ಅಮೋಘ ಆಟ; ಮುಂಬೈ ತಂಡವನ್ನು ಬಗ್ಗುಬಡಿದ ಸಿಎಸ್​ಕೆ

    ಐಪಿಎಲ್ ಪ್ರಾರಂಭವಾದ 2008ರಿಂದಲೂ ವಿರಾಟ್ ಕೊಹ್ಲಿ ಅವರು ಆರ್​ಸಿಬಿ ಜೊತೆ ಇದ್ದಾರೆ. ಅನಿಲ್ ಕುಂಬ್ಳೆ ನಿವೃತ್ತಿ ಹೊಂದಿದ ಬಳಿಕ 2011ರಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕರಾದರು. ಆದರೆ, ಅವರು ಒಮ್ಮೆಯೂ ಐಪಿಎಲ್ ಟೂರ್ನಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈಗ ಅವರು ಕ್ಯಾಪ್ಟನ್ ಆಗಿ ಕೊನೆಯ ಐಪಿಎಲ್ ಟೂರ್ನಿ ಇದಾಗಿದ್ದು, ಇದರಲ್ಲಾದರೂ ಆರ್​ಸಿಬಿ ಗೆಲ್ಲುತ್ತಾ ಕಾದುನೋಡಬೇಕು.

    ಇದನ್ನೂ ಓದಿ: Virender Sehwag- ಧೋನಿ ಮೆಂಟರ್ ಆಗಿದ್ದರಿಂದ ಯಾರಿಗೆ ಹೆಚ್ಚು ಲಾಭ? ಸೆಹ್ವಾಗ್ ಉತ್ತರ ಇದು

    ವಿರಾಟ್ ಕೊಹ್ಲಿ ಮೊನ್ನೆಯಷ್ಟೇ ಟಿ20 ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಮುಂದಿನ ತಿಂಗಳು ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ ಬಳಿಕ ಟಿ20 ಟೀಮ್ ಇಂಡಿಯಾದ ನಾಯಕ ಸ್ಥಾನಕ್ಕೆ ವಿದಾಯ ಹೇಳಲು ನಿರ್ಧರಿಸಿದ್ಧೇನೆ ಎಂದು ಅವರು ತಿಳಿಸಿದ್ದರು. ಹಲವು ತಿಂಗಳುಗಳಿಂದಲೂ ಈ ವಿಚಾರ ಬಿಸಿಸಿಐನೊಳಗೆ ಚರ್ಚೆಯಲ್ಲಿತ್ತೆನ್ನಲಾಗಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದಲೂ ಕೆಳಗಿಳಿಯುವ ಸಾಧ್ಯತೆ ಇದೆ. ಅವರು ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಮಾತ್ರ ಮುಂದುವರಿಯಬಹುದು ಎಂಬಂತಹ ಮಾತುಗಳು ಕೇಳಿಬರುತ್ತಿವೆ.
    Published by:Vijayasarthy SN
    First published: