Irfan Pathan: RCB ಪ್ಲೇ ಆಫ್ ಗೆಲ್ಲಬೇಕಿದ್ರೆ​ ತಂಡದಲ್ಲಿ ಈ ಒಂದು ಬದಲಾವಣೆ ಆಗಬೇಕು..!

IPL 2020: ಆರಂಭದಲ್ಲಿ ಭರ್ಜರಿಯಾಗಿ ಪ್ರದರ್ಶನ ನೀಡಿದ್ದ ಆರ್​ಸಿಬಿ ಅಂತಿಮ ನಾಲ್ಕು ಪಂದ್ಯಗಳಲ್ಲಿ ಸೋಲುಂಡಿರುವುದು ಇದೀಗ ನಾಯಕ ವಿರಾಟ್ ಕೊಹ್ಲಿಯ ಚಿಂತೆಯನ್ನು ಹೆಚ್ಚಿಸಿದೆ. ಈ ನಾಲ್ಕು ಪಂದ್ಯಗಳಲ್ಲಿ ಮಾಡಿದ ತಪ್ಪುಗಳನ್ನು ಮರಕಳಿಸದಂತೆ ನೋಡಿಕೊಳ್ಳಬೇಕಾದ ಒತ್ತಡ ಈಗ ತಂಡದ ಮೇಲಿದೆ.

RCB

RCB

  • Share this:
    ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮೂರು ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಪ್ರವೇಶಿಸಿದೆ. ಅದು ಕೂಡ ಅದೃಷ್ಟದ ಬಲದೊಂದಿಗೆ ಎಂಬುದು ವಿಶೇಷ. ಸತತ ನಾಲ್ಕು ಸೋಲುಗಳ ಹೊರತಾಗಿಯೂ ಕೊಹ್ಲಿ ಪಡೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿ ಹೀನಾಯವಾಗಿ ಸೋತಿದ್ದರೆ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇ ಆಫ್ ಆಡುವ ಅವಕಾಶ ಕೆಕೆಆರ್ ಪಾಲಾಗುತ್ತಿತ್ತು.

    ಇದೀಗ ಪ್ಲೇ ಆಫ್ ಎಂಟ್ರಿಯೊಂದಿಗೆ ಆರ್​ಸಿಬಿ ಮೊದಲು ಎಲಿಮಿನೇಟರ್ ಪಂದ್ಯವನ್ನಾಡಬೇಕಿದೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಎಲಿಮಿನೇಟರ್ ಪಂದ್ಯವಿದ್ದು, ಇದರಲ್ಲಿ ಗೆದ್ದರೆ ಮಾತ್ರ ಮಾತ್ರ ಮೊದಲ ಕ್ವಾಲಿಫಯರ್​ನಲ್ಲಿ ಸೋತ ತಂಡದ ವಿರುದ್ಧ ಆಡುವ ಅವಕಾಶ ಪಡೆಯಲಿದೆ. 2ನೇ ಕ್ವಾಲಿಫಯರ್​ನಲ್ಲಿ ಆರ್​ಸಿಬಿ ಗೆದ್ದರೆ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಅಂದರೆ ಫೈನಲ್ ಪ್ರವೇಶಿಸಲು ಇನ್ನು ಆರ್​ಸಿಬಿ ಪಾಲಿಗೆ ಮೊದಲ ಪಂದ್ಯ ಮಾಡು ಇಲ್ಲವೇ ಮಡಿ. ಹೀಗಾಗಿ ಸಕಲ ತಯಾರಿಯೊಂದಿಗೆ ಕೊಹ್ಲಿ ಪಡೆ ಕಣಕ್ಕಿಳಿಯಬೇಕಿದೆ.

    ಆರಂಭದಲ್ಲಿ ಭರ್ಜರಿಯಾಗಿ ಪ್ರದರ್ಶನ ನೀಡಿದ್ದ ಆರ್​ಸಿಬಿ ಅಂತಿಮ ನಾಲ್ಕು ಪಂದ್ಯಗಳಲ್ಲಿ ಸೋಲುಂಡಿರುವುದು ಇದೀಗ ನಾಯಕ ವಿರಾಟ್ ಕೊಹ್ಲಿಯ ಚಿಂತೆಯನ್ನು ಹೆಚ್ಚಿಸಿದೆ. ಈ ನಾಲ್ಕು ಪಂದ್ಯಗಳಲ್ಲಿ ಮಾಡಿದ ತಪ್ಪುಗಳನ್ನು ಮರಕಳಿಸದಂತೆ ನೋಡಿಕೊಳ್ಳಬೇಕಾದ ಒತ್ತಡ ಈಗ ತಂಡದ ಮೇಲಿದೆ. ಅಂತಹ ದೊಡ್ಡ ತಪ್ಪುಗಳಲ್ಲಿ ಆರ್​ಸಿಬಿಯ ಬ್ಯಾಟಿಂಗ್ ಆರಂಭ ಕೂಡ ಒಂದು.

    ಹೌದು, ಆರ್​ಸಿಬಿ ತಂಡ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗುತ್ತಿಲ್ಲ. ಆರಂಭಿಕರ ನಿಧಾನಗತಿಯ ಬ್ಯಾಟಿಂಗ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತಿದೆ. ಒಂದೆಡೆ ದೇವದತ್ ಪಡಿಕ್ಕಲ್ ಮಿಂಚಿದರೂ, ಸ್ಪೋಟಕ ಆರಂಭವಂತು ಸಿಗುತ್ತಿಲ್ಲ. ಮತ್ತೊಂದೆಡೆ ಆರೋನ್ ಫಿಂಚ್ ಹಾಗೂ ಜೋಶ್ ಫಿಲಿಪೆ ಆರಂಭಿಕರಾಗಿ ಸತತ ವಿಫಲರಾಗಿದ್ದಾರೆ. ಹೀಗಾಗಿ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಟೀಮ್ ಇಂಡಿಯಾ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

    ಹೌದು, ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಈಗಾಗಲೇ ಬೆಂಗಳೂರು ತಂಡದ ಬ್ಯಾಟಿಂಗ್ ಆರ್ಡರ್ ಸತ್ಯವನ್ನು ಕಳೆದುಕೊಂಡಂತಿದೆ. ಹೀಗಾಗಿ ಕೊಹ್ಲಿ ಹೆಚ್ಚಿನ ಜವಾಬ್ದಾರಿವಹಿಸಿಕೊಳ್ಳಬೇಕು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದು, ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆಯನ್ನು ತರಬೇಕು ಎಂದು ಪಠಾಣ್ ತಿಳಿಸಿದ್ದಾರೆ.

    ಪ್ರಸ್ತುತ ಫಿಂಚ್ ಫಾರ್ಮ್​ನಲ್ಲಿಲ್ಲ. ಹಾಗಾಗಿ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿಯಬೇಕು. ಇದರಿಂದ ಆರಂಭದಿಂದಲೇ ಉತ್ತಮ ಇನಿಂಗ್ಸ್ ಕಟ್ಟಲು ಸಹಕಾರಿಯಾಗಲಿದೆ. ಯುವ ಆಟಗಾರ ದೇವದತ್‌ ಪಡಿಕಲ್‌ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಮೂಲಕ ಹೆಚ್ಚುವರಿ ಬ್ಯಾಟ್ಸ್​ಮನ್​ಗಳನ್ನು ಬಳಸಬಹುದು ಎಂದು ಪಠಾಣ್ ತಿಳಿಸಿದರು.

    ಮಧ್ಯಮ ಕ್ರಮಾಂಕದಲ್ಲಿ ಇನಿಂಗ್ಸ್ ಕಟ್ಟಲು ಉತ್ತಮ ಬ್ಯಾಟ್ಸ್​ಮನ್​ಗಳು ಬೇಕು. ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುವುದರಿಂದ ಆಲ್​ರೌಂಡರ್​ಗಳು 5 ರಿಂದ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುತ್ತಿದ್ದಾರೆ. ಅಂದರೆ ಅವರ ಬ್ಯಾಟಿಂಗ್ ಅವಕಾಶವನ್ನು ನೀವು ಕಡಿಮೆ ಮಾಡುತ್ತಿದ್ದೀರಿ ಎಂದರ್ಥ. ಹಾಗಾಗಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರೆ ಇನ್ನಷ್ಟು ಬ್ಯಾಟ್ಸ್​ಮನ್​ಗಳಿಗೆ ಬೇಗನೆ ಬ್ಯಾಟಿಂಗ್​ಗೆ ಇಳಿಯುವ ಅವಕಾಶ ದೊರೆತಂತಾಗುತ್ತದೆ ಎಂದು ಇರ್ಫಾನ್ ಪಠಾಣ್ ಸಲಹೆ ನೀಡಿದರು.

    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
    Published by:zahir
    First published: