Virat Kohli- ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ 10,000 ರನ್; ಇಲ್ಲಿದೆ ವಿಶ್ವದ ಐವರು ಸಾಧಕರ ಪಟ್ಟಿ

T20 Cricket Records: ಟಿ20 ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ 10 ಸಾವಿರ ರನ್ ಮೈಲಿಗಲ್ಲು ಮುಟ್ಟಿದ ಮೊದಲ ಭಾರತೀಯನಾಗಿದ್ಧಾರೆ. ಈ ಸಾಧನೆ ಮಾಡಿದ ವಿಶ್ವದ ಐದನೇ ಆಟಗಾರನೂ ಆಗಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Cricketnext
 • Last Updated :
 • Share this:
  ಬೆಂಗಳೂರು, ಸೆ. 26: ಮುಂಬೈ ಇಂಡಿಯನ್ಸ್ (RCB match against Mumbai Indians) ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(Virat Kohli)  ಹೊಸ ಮೈಲಿಗಲ್ಲು ಮುಟ್ಟಿದರು. ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಆಟಗಾರನೆಂಬ ದಾಖಲೆ ಅವರದ್ದಾಗಿದೆ. ವಿಶ್ವದ ಇತರೆ ದೇಶಗಳ ನಾಲ್ವರು ಬ್ಯಾಟರ್ಸ್ ಈಗಾಗಲೇ ಈ ಮೈಲಿಗಲ್ಲು ದಾಟಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ (Chris Gayle) ಮತ್ತು ಕೀರಾನ್ ಪೊಲಾರ್ಡ್ (Kieron Pollard), ಪಾಕಿಸ್ತಾನದ ಶೋಯಬ್ ಮಲಿಕ್ (Shoaib Malik) ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (David Warner) ಅವರು ಕೊಹ್ಲಿಗಿಂತ ಮುಂಚೆ ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್ ಮೈಲಿಗಲ್ಲು ಮುಟ್ಟಿದವರಾಗಿದ್ದಾರೆ. ಆದರೆ, ಅತೀ ಕಡಿಮೆ ಪಂದ್ಯಗಳಲ್ಲಿ 10 ಸಾವಿರ ರನ್ ಗಡಿ ಮುಟ್ಟಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನ ಪಡೆಯುತ್ತಾರೆ. ಕೊಹ್ಲಿ 314ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ಧಾರೆ. ಡೇವಿಡ್ ವಾರ್ನರ್ 304 ಪಂದ್ಯಗಳಲ್ಲಿ ಈ ಮೈಲಿಗಲ್ಲು ಮುಟ್ಟಿದ್ದಾರೆ.

  ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ದಾಖಲೆ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರದ್ದು. 446 ಪಂದ್ಯಗಳನ್ನಾಡಿರುವ ಕ್ರಿಸ್ ಗೇಲ್ 14 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 22 ಶತಕಗಳೂ ಇವರ ಬ್ಯಾಟಿಂದ ಬಂದಿವೆ. ಅತೀ ಹೆಚ್ಚು ಶತಕ ಗಳಿಸಿದ ದಾಖಲೆ ಅವರದ್ದಾಗಿದೆ. ಅರ್ಧಶತಕಗಳ ಸಂಖ್ಯೆಯೂ ಬರೋಬ್ಬರಿ 87 ಇದೆ. ಈ ಎಲ್ಲಾ ಕಾರಣಕ್ಕೆ ಕ್ರಿಸ್ ಗೇಲ್ ಯೂನಿವರ್ಸಲ್ ಬಾಸ್ ಎಂದು ಕರೆಯಲಡ್ಡಿ ಇಲ್ಲ. ಮುಂಬೈ ಇಂಡಿಯನ್ಸ್ ಬ್ಯಾಟುಗಾರ ಕೀರಾನ್ ಪೊಲಾರ್ಡ್ 561 ಟಿ20 ಪಂದ್ಯಗಳಲ್ಲಿ 11 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ಧಾರೆ. ಪಾಕಿಸ್ತಾನದ ಶೋಯಬ್ ಮಲಿಕ್ 436 ಪಂದ್ಯಗಳಲ್ಲಿ 10,808 ರನ್ ಗಳಿಸಿದ್ಧಾರೆ.

  ಇಲ್ಲಿ ಟಿ20 ಕ್ರಿಕೆಟ್ ಎಂದರೆ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲ. ಐಪಿಎಲ್​ನಂಥ ಟಿ20 ಟೂರ್ನಿಗಳಲ್ಲಿ ಆಡಿರುವುದು. ವೆಸ್ಟ್ ಇಂಡೀಸ್ ಕ್ರಿಕೆಟಿಗರು ಐಪಿಎಲ್​ನಲ್ಲಷ್ಟೇ ಅಲ್ಲ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮೊದಲಾದ ದೇಶಗಳ ಟಿ20 ಲೀಗ್​ಗಳಲ್ಲಿ ಆಡುತ್ತಾರೆ. ಹೀಗಾಗಿ, ಕ್ರಿಸ್ ಗೇಲ್, ಪೊಲಾರ್ಡ್ ಮೊದಲಾದವರು ಹೆಚ್ಚಿನ ಪಂದ್ಯಗಳನ್ನ ಆಡಲು ಸಾಧ್ಯವಾಗಿದೆ.

  ಇದನ್ನೂ ಓದಿ: RCB vs MI- ಹರ್ಷಲ್ ಪಟೇಲ್ ಹ್ಯಾಟ್ರಿಕ್; ಮುಂಬೈ ವಿರುದ್ಧ ಆರ್​ಸಿಬಿಗೆ ಭರ್ಜರಿ ಜಯ

  ಟಿ20 ಕ್ರಿಕೆಟ್​ನಲ್ಲಿ 10 ಸಾವಿರ ರನ್ ಗಳಿಸಿದ ಟಾಪ್-5 ಆಟಗಾರರು:   ಸಂ. ಆಟಗಾರ ಪಂದ್ಯ ರನ್ ಶತಕ ಅರ್ಧಶತಕ
  1) ಕ್ರಿಸ್ ಗೇಲ್ 446 14,261 22 87
  2) ಕೀರಾನ್ ಪೊಲಾರ್ಡ್ 562 11,165 1 56
  3) ಶೋಯಬ್ ಮಲಿಕ್ 436 10,808 0 66
  4) ವಿರಾಟ್ ಕೊಹ್ಲಿ 314 10,038 5 74
  5) ಡೇವಿಡ್ ವಾರ್ನರ್ 304 10,017  ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ರನ್ ಮೆಷೀನ್ ಎನಿಸಿದ್ದಾರೆ. ಏಕದಿನ ಕ್ರಿಕೆಟ್, ಟಿ20 ಕ್ರಿಕೆಟ್, ಲಿಸ್ಟ್ ಎ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಹೀಗೆ ನಾಲ್ಕು ವಿಭಾಗದ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಗಡಿ ದಾಟಿದ ಸಾಧನೆಯೂ ಅವರದ್ದಾಗಿದೆ. ಟೆಸ್ಟ್ ಕ್ರಿಕೆಟ್, ಏಕದಿನ ಕ್ರಿಕೆಟ್, ಅಂತರರಾಷ್ಟ್ರೀಯ ಟಿ20, ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ 50 ರನ್​ಗೂ ಹೆಚ್ಚು ಸರಾಸರಿ ಹೊಂದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಇವರ ರನ್ ಸರಾಸರಿ 59 ಇದೆ. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಟೆಸ್ಟ್ ಮತ್ತು ಏಕದಿನ ಸೇರಿ 70 ಶತಕಗಳನ್ನ ಭಾರಿಸಿದ್ದಾರೆ.

  ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ಬಳಿಕ ಆರ್​ಸಿಬಿಯ ನಾಯಕತ್ವದಿಂದ ಕೆಳಗಿಳಿಯುವುದಾಗಿ ಹೇಳಿದ್ಧಾರೆ. ಆದರೆ, ಐಪಿಎಲ್​ನಲ್ಲಿ ತಂಡದ ಆಟಗಾರನಾಗಿ ಅವರ ಆಟ ಮುಂದುವರಿಯುತ್ತದೆ.
  Published by:Vijayasarthy SN
  First published: