• ಹೋಂ
 • »
 • ನ್ಯೂಸ್
 • »
 • IPL
 • »
 • Virat Kohli: ಆರ್​ಸಿಬಿ ಸ್ಪಿನ್ನರ್ ಆ್ಯಡಂ ಝಂಪಾರಿಂದ ವಿರಾಟ್ ಕೊಹ್ಲಿ ಬಗ್ಗೆ ಶಾಕಿಂಗ್ ಹೇಳಿಕೆ: ಏನು ಹೇಳಿದ್ರು?

Virat Kohli: ಆರ್​ಸಿಬಿ ಸ್ಪಿನ್ನರ್ ಆ್ಯಡಂ ಝಂಪಾರಿಂದ ವಿರಾಟ್ ಕೊಹ್ಲಿ ಬಗ್ಗೆ ಶಾಕಿಂಗ್ ಹೇಳಿಕೆ: ಏನು ಹೇಳಿದ್ರು?

ಆ್ಯಡಂ ಝಂಪಾ - ವಿರಾಟ್ ಕೊಹ್ಲಿ

ಆ್ಯಡಂ ಝಂಪಾ - ವಿರಾಟ್ ಕೊಹ್ಲಿ

Adam Zampa: ಆರ್​ಸಿಬಿ ಕ್ಯಾಂಪ್​ಗೆ ಆಸ್ಟ್ರೇಲಿಯಾದಿಂದ ಯುಎಇ ಬಂದಿಳಿದ ತಕ್ಷಣ ವಿರಾಟ್ ಕೊಹ್ಲಿ ತನಗೆ ಮಾಡಿದ ವಾಟ್ಸ್​ಆ್ಯಪ್ ಸಂದೇಶದ ಕುರಿತು ಝಂಪಾ ವಿವರಿಸಿದ್ದಾರೆ.

 • Share this:

  ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿಯ ಐಪಿಎಲ್​ನಲ್ಲೂ ಕಪ್ ಗೆಲ್ಲಲು ವಿಫಲವಾಯಿತು. ಆದರೆ, ಕೊಹ್ಲಿ ಪಡೆ ಹಿಂದಿನ ಸೀಸನ್​ನಂತೆ ಕಳಪೆ ಪ್ರದರ್ಶನ ತೋರದೆ ಎಲಿಮಿನೇಟರ್ ಹಂತದ ವರೆಗೆ ತಲುಪು ಹೋರಾಡಿ ಸೋತಿತು ಎಂಬುದು ಅಭಿಮಾನಿಗಳಿಗೆ ಸಂತಸದ ಸಂಗತಿ. 13ನೇ ಆವೃತ್ತಿಯ ಐಪಿಎಲ್​ಗೆ ಆರ್​ಸಿಬಿ ಫ್ರಾಂಚೈಸಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಝಂಪಾ ಅವರನ್ನು ಕೊಂಡುಕೊಂಡಿತು. ಆಡಿದ್ದು 3 ಪಂದ್ಯವಾದರೂ ಹೆಚ್ಚು ರನ್ ಬಿಟ್ಟುಕೊಡದೆ 2 ವಿಕೆಟ್ ಕಿತ್ತರು.


  ಸದ್ಯ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ನವೆಂಬರ್ 27 ರಿಂದ ಭಾರತ- ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ನಡುವೆ ಆರ್​ಸಿಬಿಯ ಆಸ್ಟ್ರೇಲಿಯನ್ ಬೌಲರ್ ಆ್ಯಡಂ ಝಂಪಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಕುತೂಹಲಕಾರಿ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.


  Kapil Dev: ಭಯವಿಲ್ಲದೆ ಬೌಲಿಂಗ್ ಮಾಡಿ ಎದುರಾಳಿಯ ಮೈಚಳಿ ಬಿಡಿಸಿದ್ದು ಆತ ಮಾತ್ರ ಎಂದ ಕಪಿಲ್ ದೇವ್


  ಆರ್​ಸಿಬಿ ಕ್ಯಾಂಪ್​ಗೆ ಆಸ್ಟ್ರೇಲಿಯಾದಿಂದ ಯುಎಇ ಬಂದಿಳಿದ ತಕ್ಷಣ ವಿರಾಟ್ ಕೊಹ್ಲಿ ತನಗೆ ಮಾಡಿದ ವಾಟ್ಸ್​ಆ್ಯಪ್ ಸಂದೇಶದ ಕುರಿತು ಝಂಪಾ ವಿವರಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಝಂಪಾ, "ನಾನು ಆರ್​ಸಿಬಿ ತಂಡಕ್ಕೆ ಸೇರಲು ಯುಎಇಗೆ ಬಂದಿಳಿದ ತಕ್ಷಣ ವಿರಾಟ್ ಕೊಹ್ಲಿಯಿಂದ ವಾಟ್ಸ್​ಆ್ಯಪ್ ಮೆಸೇಜ್ ಒಂದು ಬಂತು. ನನ್ನ ಬಳಿ ಕೊಹ್ಲಿಯ ನಂಬರ್ ಇರಲಿಲ್ಲ. ಆದರೆ, ಅವರು ಮಾಡಿದ ಮಸೇಜ್ ತುಂಬಾ ಆತ್ಮೀಯತೆಯಿಂದ ಕೂಡಿತ್ತು" ಎಂದಿದ್ದಾರೆ.


  ಝಂಪಾಗೆ ಕೊಹ್ಲಿ ಅವರು, "ಝ್ಯಾಂಪ್ಸ್, ವೇಗನ್ ರೆಸ್ಟೋರೆಂಟ್ ಒಂದರ ಹದಿನೈದು ಡಾಲರ್ ಮೌಲ್ಯದ  ವೋಚರ್ ಇಲ್ಲಿದೆ. ಈ ರೆಸ್ಟೋರೆಂಟ್ ತುಂಬಾ ಚೆನ್ನಾಗಿದೆ" ಎಂದು ವಾಟ್ಸ್​ಆ್ಯಪ್ ಮೆಸೇಜ್ ಮಾಡಿದ್ದರಂತೆ. ಇಷ್ಟೇ ಅಲ್ಲದೆ ಕೊಹ್ಲಿ ಬಗ್ಗೆ ಇನ್ನೂ ಕೆಲವು ವಿಚಾರಗಳಲ್ಲಿ ಝಂಪಾ ಹಂಚಿಕೊಂಡಿದ್ದಾರೆ.


  "ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಇರುವುದಕ್ಕು ಡ್ರೆಸ್ಸಿಂಗ್ ರೂಂನಲ್ಲಿ ನಮ್ಮ ಜೊತೆ ಸಮಯ ಕಳೆಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅವರು ಸೋಲನ್ನು ಹೇಟ್ ಮಾಡ್ತಾರೆ, ಕಾಂಪಿಟೇಶನ್ ಕೊಡುವುದೆಂದರೆ ಅವರಿಗೆ ತುಂಬಾ ಇಷ್ಟ" ಎಂದಿದ್ದಾರೆ ಝಂಪಾ.


  ಆಸ್ಟ್ರೇಲಿಯಾದಲ್ಲಿ ಏಕದಿನ ಹಾಗೂ ಟಿ20 ಪಂದ್ಯಗಳಿಂದ ಹೊರಗುಳಿದಿದ್ದೇಕೆ?; ಅಸಲಿ ಕಾರಣ ಬಿಚ್ಚಿಟ್ಟ ರೋಹಿತ್ ಶರ್ಮಾ


  "ಕ್ರಿಕೆಟ್ ಮೈದಾನದಿಂದ ಕೊಹ್ಲಿ ಹೊರನಡೆದರೆ ಅವರೊಬ್ಬ ಮಗುವಿನಂತ ಮನುಷ್ಯ. ಒಮ್ಮೆ ನಾವು ಬಸ್​ನಲ್ಲಿ ತೆರಳುತ್ತಿದ್ದಾಗ ಅವರು ಒಂದು ಯೂ ಟ್ಯೂಬ್ ಕ್ಲಿಪ್ ನೋಡಿ ಜೋರಾಗಿ ನಕ್ಕರು. ತುಂಬಾ ಸಮಯ ಇಡೀ ಬಸ್​ಗೆ ಕೇಳುವಂತೆ ನಗುತ್ತಲೇ ಇದ್ದರು" ಎಂದು ಝಂಪಾ ಹೇಳಿದ್ದಾರೆ.

  Published by:Vinay Bhat
  First published: