Virat Kohli: ಸೋತರೂ, ಹೊಸ ದಾಖಲೆ ಬರೆದು ಮಿಂಚಿದ ಕಿಂಗ್ ಕೊಹ್ಲಿ..!

IPL 2020: ಐಪಿಎಲ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದ್ದು, ಇದುವರೆಗೆ 5545 ರನ್ ಗಳಿಸಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ 5 ಸಾವಿರ ರನ್ ಪೂರೈಸಿದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಸಹ ಕೊಹ್ಲಿ ಹೆಸರಿನಲ್ಲಿದೆ.

Virat Kohli

Virat Kohli

  • Share this:
    IPL 2020 ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಗೆಲುವು, 2 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಟೂರ್ನಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್​ಸಿಬಿ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್​ಗಳಿಂದ ಪರಾಜಯಗೊಂಡು ನಿರಾಸೆ ಮೂಡಿಸಿತು. ಆದರೆ ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 39 ಎಸೆತಗಳಲ್ಲಿ 43 ರನ್ ಬಾರಿಸುದರೊಂದಿಗೆ ಹೊಸ ದಾಖಲೆಯನ್ನು ಕೂಡ ಬರೆದಿದ್ದರು.

    ಡೆಲ್ಲಿ ವಿರುದ್ಧ 10 ನೇ ರನ್ ಗಳಿಸುವುದರೊಂದಿಗೆ ವಿರಾಟ್ ಕೊಹ್ಲಿ ಟಿ 20 ಕ್ರಿಕೆಟ್‌ನಲ್ಲಿ 9000 ರನ್ ದಾಟಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟೀಮ್ ಇಂಡಿಯಾ ನಾಯಕ ಇದುವರೆಗೆ 286 ಟಿ20 ಪಂದ್ಯಗಳಿಂದ 9033 ರನ್ ಗಳಿಸಿದ್ದು, ಇದರಲ್ಲಿ ಐದು ಶತಕ ಹಾಗೂ 65 ಅರ್ಧಶತಕಗಳು ಮೂಡಿಬಂದಿವೆ. ಟಿ20 ಕ್ರಿಕೆಟ್​ನಲ್ಲಿ ಭಾರತ ಹಾಗೂ ಆರ್​ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ಕೊಹ್ಲಿ 9 ಸಾವಿರ ರನ್ ಸಾಧನೆ ಮಾಡಿದ ವಿಶ್ವದ 7ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

    ಇದಕ್ಕೂ ಮುನ್ನ ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್ - 13296 ರನ್), ಕೀರನ್ ಪೊಲಾರ್ಡ್ ( ವೆಸ್ಟ್ ಇಂಡೀಸ್ - 10370), ಶೋಯೆಬ್ ಮಲಿಕ್ (ಪಾಕಿಸ್ತಾನ - 9926), ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್ - 9922), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ - 9451) ಮತ್ತು ಆರೋನ್ ಫಿಂಚ್ (ಆಸ್ಟ್ರೇಲಿಯಾ - 9148) ಕೊಹ್ಲಿಗಿಂತ ಮುಂದಿನ ಸ್ಥಾನದಲ್ಲಿದ್ದಾರೆ.

    ಇನ್ನು ಐಪಿಎಲ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದ್ದು, ಇದುವರೆಗೆ 5545 ರನ್ ಗಳಿಸಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ 5 ಸಾವಿರ ರನ್ ಪೂರೈಸಿದ ಏಕೈಕ ಕ್ರಿಕೆಟಿಗ ಎಂಬ ದಾಖಲೆ ಸಹ ಕೊಹ್ಲಿ ಹೆಸರಿನಲ್ಲಿದೆ. ಇನ್ನು ಒಟ್ಟಾರೆ ಟಿ20 ಯಲ್ಲಿ ಕೇವಲ 2 ತಂಡಗಳನ್ನು ಪ್ರತಿನಿಧಿಸುತ್ತಿರುವ ಕೊಹ್ಲಿಯು 9 ಸಾವಿರ ಬಾರಿಸುವ ಮೂಲಕ ತನ್ನನ್ನೇಕೆ ರನ್ ಮೆಷಿನ್ ಎಂದು ಕರೆಯಲಾಗುತ್ತದೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    ಇದನ್ನೂ ಓದಿ: IPL 2020: ಐಪಿಎಲ್​ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್
    Published by:zahir
    First published: