news18-kannada Updated:November 5, 2020, 3:44 PM IST
virat kohli
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಫೈನಲ್ ಪ್ರವೇಶಿಸಲು ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2 ಸವಾಲುಗಳನ್ನು ಎದುರಿಸಬೇಕಿದೆ. ಸತತ ಸೋಲುಗಳ ಹೊರತಾಗಿಯೂ ನೆಟ್ ರನ್ ರೇಟ್ ಆಧಾರದಲ್ಲಿ ಆರ್ಸಿಬಿ ಮೂರು ವರ್ಷಗಳ ಬಳಿಕ ಪ್ಲೇ ಆಫ್ ಪ್ರವೇಶಿಸಿದೆ. ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಪಡೆ 2ನೇ ಕ್ವಾಲಿಫೈಯರ್ಗೆ ಅರ್ಹತೆಗಿಟ್ಟಿಸಿಕೊಳ್ಳಬೇಕಾಗಿದೆ. ಶುಕ್ರವಾರ ನಡೆಯಲಿರುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್ಸಿಬಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಇತ್ತ ಆರ್ಸಿಬಿ ಸತತ ನಾಲ್ಕು ಸೋಲುಗಳ ಮೂಲಕ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದ್ರೆ, ಅತ್ತ ಡೇವಿಡ್ ವಾರ್ನರ್ ನಾಯಕತ್ವದ ಹೈದರಾಬಾದ್ ಸತತ ನಾಲ್ಕು ಗೆಲುವುಗಳೊಂದಿಗೆ ಅಂತಿಮ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿರುವುದು ವಿಶೇಷ.
ಈ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಬ್ಯಾಟಿಂಗ್ ನಡೆಸುವ ವಿಶ್ವಾಸದಲ್ಲಿದ್ದರೂ, ತಂಡದ ನಾಯಕನಿಗೆ ಸನ್ರೈಸರ್ಸ್ ಹೈದರಾಬಾದ್ ಬೌಲರ್ನದ್ದೇ ಚಿಂತೆ. ಹೌದು ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ವಿರಾಟ್ ಕೊಹ್ಲಿ ಕೇವಲ 7 ರನ್ ಮಾತ್ರ ಗಳಿಸಿದ್ದರು. ಇದಕ್ಕೆ ಕಾರಣ ಎಸ್ಆರ್ಹೆಚ್ ಬೌಲರ್ ಸಂದೀಪ್ ಶರ್ಮಾ. ಸನ್ರೈಸರ್ಸ್ ತಂಡದ ಪ್ರಮುಖ ಬೌಲರ್ ಎನಿಸಿಕೊಂಡಿರುವ ಸಂದೀಪ್ ಎಸೆತಗಳಲ್ಲಿ ರನ್ಗಳಿಸಲು ಕೊಹ್ಲಿ ಪರದಾಡುತ್ತಿರುವುದು ನಿನ್ನೆ ಮೊನ್ನೆಯಿಂದಲ್ಲ. ಬದಲಾಗಿ ಕಳೆದ 7 ಸೀಸನ್ಗಳಿಂದಲೂ ಸಂದೀಪ್ ಶರ್ಮಾ ಆರ್ಸಿಬಿ ನಾಯಕನನ್ನು ಕಾಡುತ್ತಿದ್ದಾರೆ.
ನಿಧಾನಗತಿ, ನಿಖರ ದಾಳಿ, ನಖಲ್ ಬೌಲ್ ಅನ್ನೇ ಅಸ್ತ್ರವಾಗಿಸಿಕೊಂಡಿರುವ ಸಂದೀಪ್ ಶರ್ಮಾ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ 7 ಬಾರಿ ಔಟ್ ಆಗಿದ್ದಾರೆ. ಅಂದರೆ ಐಪಿಎಲ್ನಲ್ಲಿ ಕೊಹ್ಲಿಇಷ್ಟು ಬಾರಿ ಮತ್ಯಾವುದೇ ಬೌಲರ್ ಔಟ್ ಮಾಡಿಲ್ಲ. ಅಷ್ಟೇ ಅಲ್ಲದೆ ರನ್ ಮೆಷಿನ್ ಖ್ಯಾತಿಯ ಕೊಹ್ಲಿ ಇದುವರೆಗೆ ಶರ್ಮಾರ 50 ಎಸೆತಗಳನ್ನು ಎದುರಿಸಿ ಕಲೆಹಾಕಿರುವುದು ಕೇವಲ 69 ರನ್ ಮಾತ್ರ ಎಂದರೆ ನಂಬಲೇಬೇಕು.
ಅದರಲ್ಲೂ ಕೊಹ್ಲಿ ಸಂದೀಪ್ ಶರ್ಮಾ ಅವರ 50 ಎಸೆತಗಳಲ್ಲಿ 21 ಡಾಟ್ ಬಾಲ್ ಆಡಿದ್ದಾರೆ ಎಂಬುದು ವಿಶೇಷ. ಹಾಗೆಯೇ ಹೊಡಿಬಡಿ ಆಟಗಾರನಾಗಿ ಗುರುತಿಸಿಕೊಂಡಿರುವ ಕೊಹ್ಲಿ ಈತನ ಬೌಲಿಂಗ್ನಲ್ಲಿ ಕೇವಲ 10 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಇದೇ 50 ಎಸೆತಗಳಲ್ಲಿ 7 ಬಾರಿ ವಿಕೆಟ್ ಪಡೆದು ಸಂದೀಪ್ ಶರ್ಮಾ ವಿಶ್ವದ ನಂಬರ್ 1 ಬ್ಯಾಟ್ಸ್ಮನ್ ವಿರುದ್ಧ ಮೇಲುಗೈ ಸಾಧಿಸಿದ್ದಾರೆ.
ಇದೀಗ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪ್ರಶಸ್ತಿ ಸುತ್ತಿಗೆ ಎಂಟ್ರಿ ಕೊಡಬೇಕಿದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲೇಬೇಕು. ಆದರೆ ಎದುರಾಳಿ ತಂಡದ ಪ್ರಮುಖ ಬೌಲರುಗಳಾಗಿರುವುದು ಸಂದೀಪ್ ಶರ್ಮಾ. ಇದುವೇ ಈಗ ವಿರಾಟ್ ಕೊಹ್ಲಿಯ ನಿದ್ದೆಗೆಡಿಸಿದೆ. ಈಗಾಗಲೇ ಕೊಹ್ಲಿ ವಿಕೆಟ್ ಪಡೆಯುವುದು ಒಂಥರಾ ಸ್ಪೆಷಲ್ ಎಂದು ಘೋಷಿಸಿಕೊಂಡಿರುವ ಸಂದೀಪ್ ಎಲಿಮಿನೇಟರ್ ಪಂದ್ಯದಲ್ಲೂ ಆರ್ಸಿಬಿ ನಾಯಕನನ್ನು ಕಾಡಲು ಸಕಲ ತಂತ್ರದೊಂದಿಗೆ ಕಣಕ್ಕಿಳಿಯುವುದು ಪಕ್ಕಾ.
ಇತ್ತ ಸಂದೀಪ್ ಶರ್ಮಾರನ್ನು ಎದುರಿಸಲು ಸಕಲ ಸಿದ್ಧತೆಯೊಂದಿಗೆ ಕೊಹ್ಲಿ ಕೂಡ ಬೆವರಿಳಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಹಾಗೆಯೇ ಎಸ್ಆರ್ಹೆಚ್ ನಾಯಕ ಡೇವಿಡ್ ವಾರ್ನರ್ ಸಹ ಸಂದೀಪ್ ಎಂಬ ಅಸ್ತ್ರ ಪ್ರಯೋಗಿಸಿ ಕೊಹ್ಲಿಯನ್ನು ಕಟ್ಟಿಹಾಕಲು ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಅದರಂತೆ ಈ ಬಾರಿ ಕೊಹ್ಲಿನಾ- ಸಂದೀಪ್ ಶರ್ಮಾನಾ? ಯಾರು ಯಶಸ್ವಿಯಾಗುತ್ತಾರೆ ಕಾದು ನೋಡೋಣ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: Rohit Sharma: ಗಂಗೂಲಿ ಸಲಹೆಯನ್ನು ಧಿಕ್ಕರಿಸಿದ್ರಾ ರೋಹಿತ್ ಶರ್ಮಾ..!
Published by:
zahir
First published:
November 5, 2020, 3:44 PM IST