IPL

  • associate partner
HOME » NEWS » Ipl » VIRAT KOHLI DANCING ON PITCH BEFORE RCB VS KXIP MATCH LEAVES NETIZENS IN SPLITS VIRAL VIDEO ZP

Virat Kohli: ವಿರಾಟ್ ಕೊಹ್ಲಿಯ ಕುಣಿದಾಟ: RCB ನಾಯಕನ ಡ್ಯಾನ್ಸಿಂಗ್ ವಿಡಿಯೋ ವೈರಲ್

Virat Kohli Dance Video: ಸದ್ಯ ವಿರಾಟ್ ಕೊಹ್ಲಿ ಸಖತ್ ಎಂಜಾಯ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ಆರ್​ಸಿಬಿ ನಾಯಕನ ಫನ್​ಟಾಸ್ಟಿಕ್ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

news18-kannada
Updated:October 16, 2020, 10:23 AM IST
Virat Kohli: ವಿರಾಟ್ ಕೊಹ್ಲಿಯ ಕುಣಿದಾಟ: RCB ನಾಯಕನ ಡ್ಯಾನ್ಸಿಂಗ್ ವಿಡಿಯೋ ವೈರಲ್
Virat Kohli Dance
  • Share this:
ಕ್ರಿಕೆಟ್ ಮೈದಾನದ ಆಕ್ರಮಣಕಾರಿ ಆಟಗಾರ...ಸದಾ ಕೋಪದಿಂದ ಕುದಿಯುವ ನಾಯಕ...ಸಣ್ಣ ಸಣ್ಣ ವಿಷಯಕ್ಕೂ ಕೋಪ ನೆತ್ತಿಗೇರಿಸುವ ಕ್ರಿಕೆಟಿಗ...ದಾಖಲೆಗಳ ಹೊರತಾಗಿ ವಿರಾಟ್ ಕೊಹ್ಲಿಯ ಬಗ್ಗೆ ಸಾಮಾನ್ಯವಾಗಿ ಕೇಳಿ ಬರುವ ಮಾತುಗಳಿವು. ಆದರೆ ಅದೇ ಕ್ಯಾಪ್ಟನ್ ಕೂಲ್ ಆಗಿದ್ರೆ ಹೇಗಿರುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಒಂದು ವಿಡಿಯೋ ವೈರಲ್ ಆಗಿದೆ. ಐಪಿಎಲ್​-2020ಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಗೆಲುವುಗಳ ಮೂಲಕ ಅಂಕಪಟ್ಟಿಯಲ್ಲಿ ಟಾಪ್-4 ರಲ್ಲಿ ಸ್ಥಾನ ಪಡೆದಿದೆ. ಇತ್ತ ಆರ್​ಸಿಬಿ ಆಟಗಾರರು ಕೂಡ ನಿರಾಳರಾಗಿದ್ದಾರೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಇದೇ ಆತ್ಮ ವಿಶ್ವಾಸದಲ್ಲಿ ಕೊಹ್ಲಿ ಕೂಡ ಕೂಲ್ ಆಗಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ನಾಯಕ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಪಿಚ್​ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಇದೇ ವೇಳೆ ಡ್ಯಾನ್ಸ್ ಮಾಡುತ್ತಾ, ಕೂತಲ್ಲೇ ಫನ್ನಿಯಾಗಿ ಕುಣಿದಿದ್ದಾರೆ. ಕೊಹ್ಲಿ ಈ ಡ್ಯಾನ್ಸ್ ಇತ್ತ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.ಸದ್ಯ ವಿರಾಟ್ ಕೊಹ್ಲಿ ಸಖತ್ ಎಂಜಾಯ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ಆರ್​ಸಿಬಿ ನಾಯಕನ 'ಫನ್​'ಟಾಸ್ಟಿಕ್ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

POINTS TABLE:

SCHEDULE TIME TABLE:

ORANGE CAP: PURPLE CAP:

RESULT DATA:

MOST SIXES:

ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
Published by: zahir
First published: October 15, 2020, 9:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories