IPL 2020 ವಿರಾಟ್ ಕೊಹ್ಲಿ ಪಾಲಿನ ಹಲವು ದಾಖಲೆಗಳಿಗೆ ಸಾಕ್ಷಿಯಾಗಿವೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ ಆರ್ಸಿಬಿ ಪರ 200 ಪಂದ್ಯಗಳನ್ನಾಡಿದ ದಾಖಲೆ ಬರೆದಿದ್ದರು. ಅಲ್ಲದೆ ಎಬಿ ಡಿವಿಲಿಯರ್ಸ್ ಜೊತೆಗೂಡಿ 10 ಶತಕಗಳ ಜೊತೆಯಾಟದ ದಾಖಲೆ ಕೂಡ ಇದೇ ಸೀಸನ್ನಲ್ಲಿ ಮೂಡಿಬಂದಿತ್ತು. ಇದರೊಂದಿಗೆ 13ನೇ ಐಪಿಎಲ್ ಆವೃತ್ತಿ ಮೂಲಕ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 9 ಸಾವಿರ ರನ್ಗಳ ಸಾಧನೆಯನ್ನು ಮಾಡಿದ್ದರು. ಇದೀಗ ಈ ಪಟ್ಟಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.
ಹೌದು, ಇಂಡಿನ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 200 ಸಿಕ್ಸರ್ಗಳನ್ನು ಬಾರಿಸಿ ಟಾಪ್ ಐದು ಬ್ಯಾಟ್ಸ್ಮನ್ಗಳ ಪಟ್ಟಿಗೆ ವಿರಾಟ್ ಕೊಹ್ಲಿ ಎಂಟ್ರಿ ಕೊಟ್ಟಿದ್ದರು. ಈ ದಾಖಲೆಯನ್ನು ಬರೆದ ಭಾರತದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾನುವಾರ ಸಿಎಸ್ಕೆ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ 43 ಎಸೆತಗಳನ್ನು ಎದುರಿಸಿ 50 ರನ್ ಗಳಿಸಿದರು. ಇದರಲ್ಲಿ ತಲಾ ಒಂದು ಫೋರ್ ಮತ್ತು ಸಿಕ್ಸರ್ ಮೂಡಿಬಂದಿತ್ತು. ಈ ಏಕೈಕ ಸಿಕ್ಸರ್ನೊಂದಿಗೆ ಕೊಹ್ಲಿ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 200 ಸಿಕ್ಸರ್ಗಳ ಗಡಿ ಮುಟ್ಟಿದರು.
ಇನ್ನು ಕೊಹ್ಲಿಗಿಂತ ಮುಂಚಿತವಾಗಿ ಈ ಸಾಧನೆಗೈದ ಭಾರತೀಯ ಕ್ರಿಕೆಟರುಗಳೆಂದರೆ ಮಹೇಂದ್ರ ಸಿಂಗ್ ಧೋನಿ (216) ಹಾಗೂ ರೋಹಿತ್ ಶರ್ಮಾ (209). ಹಾಗೆಯೇ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ದಾಖಲೆ ಸ್ಪೋಟಕ ಆಟಗಾರ ಕ್ರಿಸ್ ಗೇಲ್ (336) ಹೆಸರಲ್ಲಿದೆ. ನಂತರದ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಡಿಬಡಿ ದಾಂಡಿಗ ಎಬಿ ಡಿ'ವಿನಲಿಯರ್ಸ್ (231) ಇದ್ದಾರೆ.
POINTS TABLE: