KKR vs RCB: ತಂಡದ ಆಯ್ಕೆಯಲ್ಲಿ ಎಡವಿದ ವಿರಾಟ್​ ಕೊಹ್ಲಿ; ಸೋಲಿನಿಂದಾದರೂ ಪಾಠ ಕಲಿಯಬೇಕು

RCB loses to KKR - Post Match Review: ಎಬಿಡಿ ಮತ್ತು ಮ್ಯಾಕ್ಸ್​ವೆಲ್​ ಈ ಆವೃತ್ತಿಯ ಐಪಿಎಲ್​ನಲ್ಲಿ ತಂಡದ ಆಧಾರ ಸ್ಥಂಭವಾಗಿದ್ದಾರೆ. ಆದರೆ ಇಂದಿನ ಮ್ಯಾಚ್​ನಲ್ಲಿ ಇಬ್ಬರೂ ಉತ್ತಮ ಪ್ರದರ್ಶನ  ನೀಡಿಲ್ಲ. ಡೆವಿಲಿಯರ್ಸ್​ ಸೊನ್ನೆ ಸುತ್ತಿದರೆ ಮ್ಯಾಕ್ಸ್​ವೆಲ್​ ಒಂದಕ್ಕಿಯನ್ನೂ ದಾಟಲಿಲ್ಲ. ಎಲ್ಲಾ ವಿಕೆಟ್​ಗಳು ಬಿದ್ದಾಗ, ಮ್ಯಾಕ್ಸ್​ ಕೊಂಚ ನಿಧಾನವಾಗಿ ಆಡಬೇಕಿತ್ತು. ಆದರೆ ಬಾಲ್​ ಕನೆಕ್ಟ್​ ಆಗುತ್ತಿಲ್ಲ ಎಂಬ ಕಾರಣಕ್ಕೆ, ಸಿಟ್ಟಿಗೆದ್ದಯ ಹೊಡೆಯಲು ಮುಂದಾಗಿ ವಿಕೆಟ್​ ಒಪ್ಪಿಸಿದರು

KKR V/S RCB

KKR V/S RCB

 • Share this:
  RCB vs KKR Result: ಅಭುದಾಬಿ: ಕೋಲ್ಕತ್ತ ನೈಟ್​ ರೈಡರ್ಸ್ (KKR)​ ತಂಡದ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಹೀನಾಯ ಸೋಲು ಕಂಡಿದೆ. ಟಾಸ್​ ಗೆದ್ದು ಆಯ್ಕೆ ಮಾಡಿಕೊಂಡಿದ್ದ ಆರ್​ಸಿಬಿ ಕೇವಲ 92 ರನ್​ಗಳಿಸಿ ಆಲ್​ಔಟ್​ ಆಯಿತು. ಇದನ್ನು ಬೆನ್ನಟ್ಟಿದ ಕೆಕೆಆರ್​ ಕೇವಲ 1 ವಿಕೆಟ್​ ನಷ್ಟಕ್ಕೆ ಅನಾಯಾಸವಾಗಿ ಗೆಲುವು ಸಾಧಿಸಿದೆ. ಇದರಿಂದ ಬೆಂಗಳೂರು ತಂಡ ಕಲಿಯಬೇಕಾಗಿರುವುದು ಸಾಕಷ್ಟಿದೆ. ತಂಡದ ಆಯ್ಕೆಯಲ್ಲಿ ಮಾಡಿದ ಯಡವಟ್ಟು ಈ ಹೀನಾಯ ಸೋಲಿಗೆ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಐಪಿಎಲ್​ನ ದ್ವಿತೀಯಾರ್ಧದ ಮೊದಲ ಪಂದ್ಯದಲ್ಲೇ ಮಾಡಿದ ಹಲವು ಬದಲಾವಣೆಗಳು ಸೋಲಿಗೆ ಕಾರಣ. 

  Virat Kohli ಈಗಾಗಲೇ RCB ಮತ್ತು ಭಾರತೀಯ ಕ್ರಿಕೆಟ್​ ತಂಡದ ಟಿ-20 ನಾಯಕ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದು ಕೂಡ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿರಬಹುದು. ಆದರೆ ಬಹುಮುಖ್ಯವಾಗಿ, ಆರ್​ಸಿಬಿ ಆಯ್ಕೆದಾರರ ತಂಡ, ಒಂದೇ ಪಂದ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಿರುವುದು ದೊಡ್ಡ ತಪ್ಪಿಗೆ ಕಾರಣವಾಗಿದೆ.

  ಒಂದೇ ಪಂದ್ಯದಲ್ಲಿ ಮೂರು ಬದಲಾವಣೆ:

  ಬೆಂಗಳೂರು ತಂಡದ ಆಧಾರ ಸ್ಥಂಬ AB de Villiers​ ಈ ಹಿಂದೆ ತಂಡಕ್ಕಾಗಿ ಕೀಪಿಂಗ್​ ಮಾಡುತ್ತಿದ್ದರು. ಆದರೆ ಕೀಪಿಂಗ್​ ಎಬಿಡಿ ಬದಲು ಶಿಖರ್​ ಭರತ್​ ಮಾಡಿದರು. ಶಿಖರ್​ ಭರತ್​ಗೆ ಇದು ಮೊದಲ ಪಂದ್ಯ. ಒಂದು ವೇಳೆ, ಎಬಿಡಿ ಕೀಪಿಂಗ್​ ಮಾಡುತ್ತಿದ್ದರೆ, ಇನ್ನೊಂದು ಬ್ಯಾಟ್ಸ್​ಮನ್​ ಅಥವಾ ಬೌಲರ್​ ಇಲ್ಲವಾದರೆ ಸವ್ಯಸಾಚಿಯನ್ನು ಆಡುವ 11 ಜನರಲ್ಲಿ ಸೇರಿಸಬಹುದಿತ್ತು. ಅದು ಬ್ಯಾಟಿಂಗ್​ಗೆ ಇನ್ನಷ್ಟು ಶಕ್ತಿ ನೀಡುತ್ತಿತ್ತು. ಇದಕ್ಕಿಂತ ಮುಖ್ಯವಾಗಿ ಒಂದೇ ಪಂದ್ಯದಲ್ಲಿ, ಹಸರಂಗ, ಶಿಖರ್​ ಭರತ್​ ಮತ್ತು ಸಚಿನ್​ ಬೇಬಿಯನ್ನು ಆಡಿಸಿರುವುದೂ ಕೂಡ ತಪ್ಪು ನಿರ್ಧಾರ. ಅದರ ಬದಲು ಗೆಲುವಿನ ಲಯದಲ್ಲಿದ್ದ, ಹಳೆಯ ತಂಡವನ್ನೇ ಕಣಕ್ಕಿಳಿಸಿದ್ದರೆ ಹೀನಾಯ ಸೋಲು ಅನುಭವಿಸುವ ಅಗತ್ಯವಿರಲಿಲ್ಲ.

  ಇದನ್ನೂ ಓದಿ: RCB vs KKR: RCB ನೀರಸ ಪ್ರದರ್ಶನ, ಕೋಲ್ಕತ್ತಾ ನೈಟ್​ ರೈಡರ್ಸ್​ಗೆ 9 ವಿಕೆಟ್​ಗಳ ಗೆಲುವು

  ಸಚಿನ್​ ಬೇಬಿ ಉತ್ತಮ ದಾಂಡಿಗನಾಗಿದ್ದರೂ, ಐಪಿಎಲ್​ನಲ್ಲಿ ಇದುವರೆಗೂ ಯಶಸ್ಸು ಕಂಡಿಲ್ಲ. ಅದರ ಜತೆ, ಶಿಖರ್​ ಭರತ್​ ಕೂಡ ಉತ್ತಮ ಫಾರ್ಮ್​ನಲ್ಲಿ ಇರದಿದ್ದರೂ ಚೊಚ್ಚಲ ಪಂದ್ಯವನ್ನು ಆಡಿಸಲಾಗಿದೆ. ಇನ್ನೂ, ಹಸರಂಗ ಭಾರತದ ವಿರುದ್ಧ ಶ್ರೀಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ, ಬೆಂಗಳೂರು ತಂಡ ಖರೀದಿಸಿತ್ತು. ಆದರೆ, ಭಾರತ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿದಂತೆ ಏಷಿಯಾ ಖಂಡಗಳ ಮೈದಾನವೇ ಬೇರೆ, ದುಬೈನ ಮೈದಾನಗಳೇ ಬೇರೆ. ಹೀಗಿರುವಾಗ ಹಸರಂಗ ಅವರನ್ನು ಕಣಕ್ಕಿಳಿಸಿದ್ದು ಕೂಡ ಬೆಂಗಳೂರು ತಂಡಕ್ಕೆ ವರದಾನವಾಗಿಲ್ಲ.

  ಕೊಹ್ಲಿಯ ಯಡವಟ್ಟು:

  ವಿರಾಟ್​ ಕೊಹ್ಲಿ ವಿಶ್ವ ಶ್ರೇಷ್ಟ ದಾಂಡಿಗ ಎಂಬುದರ ಮೇಲೆ ಯಾವುದೇ ಅನುಮಾನವಿಲ್ಲ. ಆದರೆ ನಂಬರ್​ 3ರಲ್ಲಿ ವಿರಾಟ್​ ಕೊಹ್ಲಿ ಪ್ರದರ್ಶನ ಅದ್ಭುತವಾಗಿದೆಯೇ ಹೊರತು, ಆರಂಭಿಕ ದಾಂಡಿಗನಾಗಿ ಅಲ್ಲ. ಕೊಹ್ಲಿ ಆರಂಭಿಕನಾಗಿ ಇನ್ನಿಂಗ್ಸ್​ ಆರಂಭಿಸುತ್ತಿರುವುದು ಕೂಡ ಮಧ್ಯಮ ಕ್ರಮಾಂಕದಲ್ಲಿ ಬೆಂಗಳೂರು ತಂಡಕ್ಕೆ ಸಮಸ್ಯೆಯಾಗಿದೆ. ಅದರ ಬದಲು, ಬೇರೆ ಆಟಗಾರನನ್ನು ಆರಂಭಿಕನಾಗಿ ಕಳಿಸಿದರೆ ಬೆಂಗಳೂರು ತಂಡಕ್ಕೆ ಸಹಕಾರಿಯಾಗಲಿದೆ.

  ಇದನ್ನೂ ಓದಿ: ಟಿ20 ಮಾದರಿ ಕ್ರಿಕೆಟ್ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ; ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

  ಎಬಿಡಿ - ಮ್ಯಾಕ್ಸ್​ವೆಲ್​ ಕಳಪೆ ಪ್ರದರ್ಶನ:

  ಎಬಿಡಿ ಮತ್ತು ಮ್ಯಾಕ್ಸ್​ವೆಲ್​ ಈ ಆವೃತ್ತಿಯ ಐಪಿಎಲ್​ನಲ್ಲಿ ತಂಡದ ಆಧಾರ ಸ್ಥಂಭವಾಗಿದ್ದಾರೆ. ಆದರೆ ಇಂದಿನ ಮ್ಯಾಚ್​ನಲ್ಲಿ ಇಬ್ಬರೂ ಉತ್ತಮ ಪ್ರದರ್ಶನ  ನೀಡಿಲ್ಲ. ಡೆವಿಲಿಯರ್ಸ್​ ಸೊನ್ನೆ ಸುತ್ತಿದರೆ ಮ್ಯಾಕ್ಸ್​ವೆಲ್​ ಒಂದಕ್ಕಿಯನ್ನೂ ದಾಟಲಿಲ್ಲ. ಎಲ್ಲಾ ವಿಕೆಟ್​ಗಳು ಬಿದ್ದಾಗ, ಮ್ಯಾಕ್ಸ್​ ಕೊಂಚ ನಿಧಾನವಾಗಿ ಆಡಬೇಕಿತ್ತು. ಆದರೆ ಬಾಲ್​ ಕನೆಕ್ಟ್​ ಆಗುತ್ತಿಲ್ಲ ಎಂಬ ಕಾರಣಕ್ಕೆ, ಸಿಟ್ಟಿಗೆದ್ದಯ ಹೊಡೆಯಲು ಮುಂದಾಗಿ ವಿಕೆಟ್​ ಒಪ್ಪಿಸಿದರು. ಈ ಇಬ್ಬರೂ ಲಯ ಕಂಡುಕೊಂಡರೆ ಮಾತ್ರ, ಆರ್​​ಸಿಬಿ ಮಧ್ಯಮ ಕ್ರಮಾಂಕ ಗಟ್ಟಿಯಾಗಲಿದೆ.
  Published by:Sharath Sharma Kalagaru
  First published: