ಎರಡು ಮೇಡಿನ್, ಮೂರು ವಿಕೆಟ್; ಟ್ರೋಲ್ ಮಾಡುವವರಿಗೆ ಉತ್ತರ ಕೊಟ್ಟ ಸಿರಾಜ್ ಬೆಳೆದು ಬಂದಿದ್ದು ಕೊಳಗೇರಿಯಲ್ಲಿ!
ಎರಡನೇ ಓವರ್ಗೆ ಬೌಲಿಂಗ್ಗೆ ಇಳಿದ ಸಿರಾಜ್ ಯಾವುದೇ ರನ್ ನೀಡದೆ ಎರಡು ವಿಕೆಟ್ ಕಿತ್ತಿದ್ದರು. ನಾಲ್ಕನೇ ಓವರ್ನಲ್ಲಿ ಮತ್ತೆ ಬೌಲಿಂಗ್ಗೆ ಇಳಿದ ಅವರು ಮೇಡಿನ್ ಓವರ್ ಮಾಡಿ ಮತ್ತೊಂದು ವಿಕೆಟ್ ಕಬಳಿಸಿದರು. ಆ ಮೂಲಕ ಹೊಸ ದಾಖಲೆ ಬರೆದರು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ದಾಖಲೆ ಬರೆದು ಬಿಟ್ಟಿದ್ದಾರೆ. ಪವರ್ ಪ್ಲೇನಲ್ಲಿ ಎರಡು ಮೇಡಿನ್ ಅವರ್ ಮಾಡಿ ಮೂರು ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ಇಷ್ಟು ದಿನ ಹಿಗ್ಗಾ-ಮುಗ್ಗಾ ಟ್ರೋಲ್ ಮಾಡುತ್ತಿದ್ದ ಟ್ರೋಲ್ ಪೇಜ್ಗಳು ಇಂದು ಅವರನ್ನು ಹೊಗಳಲು ಆರಂಭಿಸಿವೆ. ಸಿರಾಜ್ ಈ ಹಂತಕ್ಕೆ ಬಂದು ನಿಲ್ಲಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹೈದರಾಬಾದ್ನ ಕೊಳಗೇರಿಯಿಂದ ಬಂದ ಅವರು ಈಗ ಹೊಸ ದಾಖಲೆ ಬರೆದಿದ್ದಾರೆ.
ಆರ್ಸಿಬಿಗೆ ದೊಡ್ಡ ಮೊತ್ತದ ಟಾರ್ಗೆಟ್ ನೀಡಬಹುದು ಎನ್ನುವ ಕನಸು ಹೊತ್ತು ಕೆಕೆಆರ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊಹಮದ್ ಸಿರಾಜ್ ಮೊದಲ ಓವರ್ಗೆ ಇಳಿದಾಗ ಸರಿಯಾಗಿ ರನ್ ಹೊಳೆ ಹರಿಸಬಹುದು ಅಂದುಕೊಂಡಿದ್ದರು ಕೆಕೆಆರ್ ಬ್ಯಾಟ್ಸ್ಮನ್ಗಳು. ಆದರೆ, ಈ ಖುಷಿ ಕೆಲವೇ ನಿಮಿಷಗಳಲ್ಲಿ ಮಾಯವಾಗಿತ್ತು. ಕೆಕೆಆರ್ ಬ್ಯಾಟ್ಸ್ಮನ್ಗಳಿಗೆ ಸಿರಾಜ್ ಅಕ್ಷರಶಃ ದುಸ್ವಪ್ನವಾಗಿ ಕಾಡಿ ಬಿಟ್ಟಿದ್ದರು.
ಎರಡನೇ ಓವರ್ಗೆ ಬೌಲಿಂಗ್ಗೆ ಇಳಿದ ಸಿರಾಜ್ ಯಾವುದೇ ರನ್ ನೀಡದೆ ಎರಡು ವಿಕೆಟ್ ಕಿತ್ತಿದ್ದರು. ನಾಲ್ಕನೇ ಓವರ್ನಲ್ಲಿ ಮತ್ತೆ ಬೌಲಿಂಗ್ಗೆ ಇಳಿದ ಅವರು ಮೇಡಿನ್ ಓವರ್ ಮಾಡಿ ಮತ್ತೊಂದು ವಿಕೆಟ್ ಕಬಳಿಸಿದರು. ಆ ಮೂಲಕ ಹೊಸ ದಾಖಲೆ ಬರೆದರು.
Mohammed Siraj was on fire today
..
.
.
.
.
.
.
..
ಸಿರಾಜ್ ತುಂಬಾನೇ ಕಷ್ಟದ ದಿನವನ್ನು ನೋಡಿ ಬಂದವರು. ಅವರ ತಾಯಿ ಅನಕ್ಷರಸ್ಥೆ. ತಂದೆ ಆಟೋ ಚಾಲಕ. ಬಡತನ ಎಂಬುದು ಸಿರಾಜ್ ಹುಟ್ಟಿದಾಗಿನಿಂದಲೂ ಅವರಿಗೆ ಅಂಟಿಕೊಂಡೇ ಇತ್ತು. ನಂತರ ಅವರ ಬದುಕು ಬದಲಾಗಿದ್ದು, ಆರ್ಸಿಬಿ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ಮೇಲೆಯೇ. ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್ ಆಡಿದ ಮೇಲೆ ಸಿರಾಜ್ ಭಾರತ ತಂಡ ಪ್ರತಿನಿಧಿಸಿದ್ದರು. ಆರ್ಸಿಬಿ ಸೇರಿದ ನಂತರವೇ ಸಿರಾಜ್ ಹೈದರಾಬಾದ್ನಲ್ಲಿ ಹೊಸ ಮನೆ ಖರೀದಿಸಿದ್ದು.
ಒಂದು ಕೊಳಗೇರಿಯಿಂದ ಬಂದು ಸಿರಾಜ್ ಇಂದು ಈ ರೀತಿಯ ದಾಖಲೆ ಬರೆದಿದ್ದಾರೆ. ಅವರನ್ನು ನೋಡಿ ಟ್ರೋಲ್ ಮಾಡುತ್ತಿದ್ದವರು ಹೊಗಳುತ್ತಿದ್ದಾರೆ. ಅವರ ಬೌಲಿಂಗ್ ಹಿಗೆಯೇ ಮುಂದುವರಿಯಲಿ ಅನ್ನೋದು ಎಲ್ಲರ ಆಶಯ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ