Navnita Gautam- ಇಡೀ ಐಪಿಎಲ್​ನ ಸಪೋರ್ಟ್ ಸ್ಟಾಫ್​ನಲ್ಲಿ ಏಕೈಕ ಹುಡುಗಿ; ಈಕೆ ಆರ್​ಸಿಬಿ ಮಸಾಜ್ ಥೆರಪಿಸ್ಟ್

Only female member of staff across IPL- ಕೆನಡಾದ ನವನೀತಾ ಗೌತಮ್ ಅವರು ಎರಡು ವರ್ಷಗಳಿಂದ ಆರ್​ಸಿಬಿಯಲ್ಲಿ ಮಸಾಜ್ ಥೆರಪಿಸ್ಟ್ ಆಗಿದ್ದಾರೆ. ಆರ್​ಸಿಬಿಯ ಇಡೀ ಸ್ಟಾಫ್​ನಲ್ಲಿ ಈಕೆಯೊಬ್ಬಳೇ ಮಹಿಳೆ. ಐಪಿಎಲ್​ನ ಬೇರಾವ ತಂಡದಲ್ಲೂ ಮಹಿಳಾ ಸ್ಟಾಫ್ ಇಲ್ಲ.

ನವನೀತಾ ಗೌತಮ್

ನವನೀತಾ ಗೌತಮ್

 • News18
 • Last Updated :
 • Share this:
  ದುಬೈ: ಮೂರು ದಿನಗಳ ಹಿಂದೆ ಕೆಕೆಆರ್ ವಿರುದ್ಧ ನಡೆದ ಐಪಿಎಲ್ ಪಂದ್ಯದ ವೇಳೆ ಆರ್​ಸಿಬಿಯ ಸ್ಟಾರ್ ಬೌಲರ್ ಕೈಲ್ ಜೇಮೀಸನ್ (Kyle Jamieson) ಅವರ ಫೋಟೋವೊಂದು ವೈರಲ್ ಆಗಿತ್ತು. ಜೇಮಿಸನ್ ಅವರ ಕಾರಣಕ್ಕೆ ವೈರಲ್ ಆದ ಚಿತ್ರವಲ್ಲ. ಜೇಮಿಸನ್ ತನ್ನಿಂದ ಅಗುದಿ ದೂರದಲ್ಲಿ ಕುಳಿತಿದ್ದ ಸುಂದರ ಹುಡುಗಿಯೊಬ್ಬಳನ್ನ ನೋಡಿ ಮುಗುಳ್ನಗುತ್ತಿದ್ದ ದಶ್ಯವದು. ಜೇಮಿಸನ್ ಫ್ಲರ್ಟ್ ಮಾಡುತ್ತಿರುವ ಆ ಹುಡುಗಿ ಯಾರು ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ದಟ್ಟವಾಗಿ ಎದ್ದಿತ್ತು. ಆರ್​ಸಿಬಿ ತಂಡ ಹೀನಾಯ ಸೋಲಿನ ಹಾದಿಯಲ್ಲಿ ಇದ್ದು ತಂಡದ ಎಲ್ಲಾ ಸದಸ್ಯರೂ ಟೆನ್ಷನ್​ನಲ್ಲಿ ಇರುವಾಗ ಕೈಲ್ ಜೇಮಿಸನ್ ಅವರು ಹುಡುಗಿ ಜೊತೆ ಖುಷಿ ಖುಷಿಯಾಗಿ ತಮಾಷೆ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಆ ಹುಡುಗಿ ಆರ್​ಸಿಬಿಯ ಮಸಾಜ್ ಥೆರಪಿಸ್ಟ್ ನವನೀತ್ ಗೌತಮ್ (Navnita Gautam).

  ಆರ್​ಸಿಬಿಯಲ್ಲಿ ಮಾತ್ರವೇ ಮಹಿಳಾ ಸ್ಟಾಫ್: ನಿಮಗೆ ಗೊತ್ತಿರಲಿ, ಇಡೀ ಐಪಿಎಲ್​ನಲ್ಲಿ ಯಾವುದೇ ಫ್ರಾಂಚೈಸಿಯಲ್ಲೂ ಒಬ್ಬೇ ಒಬ್ಬ ಮಹಿಳಾ ಸಪೋರ್ಟ್ ಸ್ಟಾಫ್ ಇಲ್ಲ. ಆರ್​ಸಿಬಿಯ ಸಪೋರ್ಟ್ ಸ್ಟಾಫ್​ನಲ್ಲಿ ಮಾತ್ರವೇ ಮಹಿಳೆ ಇರುವುದು. 29 ವರ್ಷದ ನವನಿತಾ ಗೌತಮ್ ಅವರು ಮೂಲ ಭಾರತೀಯಳಾದರೂ ಕೆನಡಾ ದೇಶದಲ್ಲೇ ಹುಟ್ಟಿ ಬೆಳೆದವರು. ಕೆನಡಾದ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಆಡುವ ಟೊರಾಂಟೋ ನ್ಯಾಷನಲ್ಸ್ ಎಂಬ ತಂಡದೊಂದಿಗೂ ಕೆಲಸ ಮಾಡಿದ್ದಾರೆ. ಭಾರತ ಮಹಿಳಾ ಬ್ಯಾಸ್ಕೆಟ್ ಬಾಲ್ ತಂಡಕ್ಕೆ ಈ ಹಿಂದೆ ಸಪೋರ್ಟ್ ಸ್ಟಾಫ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. 2019, ಅಂದರೆ ಎರಡು ವರ್ಷಗಳ ಹಿಂದೆಯೇ ನವನೀತಾ ಗೌತಮ್ ಅವರು ಆರ್​ಸಿಬಿ ತಂಡಕ್ಕೆ ಮಸಾಜ್ ಥೆರಪಿಸ್ಟ್ ಆಗಿ ಸೇರಿಕೊಂಡಿದ್ದಾರೆ.  ದಂಡಿ ಹುಡುಗರ ಮಧ್ಯೆ ಒಂದೇ ಹುಡುಗಿ?

  ಐಪಿಎಲ್ ತಂಡ ಹಾಗೂ ಅದರ ಸುತ್ತ ಐವತ್ತಕ್ಕೂ ಹೆಚ್ಚು ಮಂದಿ ಸಪೋರ್ಟ್ ಸ್ಟಾಫ್ ಇತ್ಯಾದಿ ಇದ್ದೇ ಇರುತ್ತಾರೆ. ಇವರ ಮಧ್ಯೆ ನವನೀತಾ ಗೌತಮ್ ಒಬ್ಬರೇ ಹುಡುಗಿ ಎಂದರೆ ಹೇಗೆ? ಈಕೆ ತಂಡದ ಆಟಗಾರರಿಗೆ ಮಸಾಜ್ ಥೆರಪಿ ಟ್ರೀಟ್ಮೆಂಟ್ ಕೊಡುತ್ತಾರೆ. ತಂಡದಲ್ಲಿ ಸುಮಾರು 20 ಮಂದಿ ಆಟಗಾರರಿರುತ್ತಾರೆ. ಈ ಹುಮ್ಮಸ್ಸಿನ ಹುಡುಗರ ಜೊತೆ ನಿಕಟವಾಗಿ ಕೆಲಸ ಮಾಡುವಾಗ ಮುಜುಗರವಾಗಲೀ, ಭಯವಾಗಲೀ ಆಗುವುದಿಲ್ಲವಾ ಎಂಬ ಅನುಮಾನ ನಮಗೆ ಮೂಡಬಹುದು. ಆದರೆ, ನವನೀತಾಗೆ ಅಂಥ ಯಾವ ಅಧೈರ್ಯವೂ ಆಗಿಲ್ಲವಂತೆ. ತನಗೆ ಪುರುಷರ ಜೊತೆ ಕೆಲಸ ಮಾಡಲು ಯಾವ ಸಂಕೋಚವೂ ಇಲ್ಲ. ಕೆಲಸಕ್ಕೆ ಶ್ರದ್ಧೆ ತೋರುವ ವ್ಯಕ್ತಿ ಯಾರೇ ಆದರೂ ಆತನ ಲಿಂಗ ಪ್ರಾಮುಖ್ಯತೆಗೆ ಬರುವುದಿಲ್ಲ ಎನ್ನುವ ನವನೀತಾ ಗೌತಮ್, ಆರ್​ಸಿಬಿಯಲ್ಲಿ ಕೆಲಸ ಮಾಡುವಾಗ ತನ್ನ ಸುತ್ತ 20 ಸಹೋದರರು ಇದ್ದಂತೆ ಭಾಸವಾಗುತ್ತದೆ ಎನ್ನುತ್ತಾರೆ.

  ಇದನ್ನೂ ಓದಿ: Watch| ಜೋಗಿಂದರ್ ಶರ್ಮಾ ಕೊನೆಯ ಎಸೆತಕ್ಕೆ ಭಾರತ 2007 T20 ವಿಶ್ವಕಪ್ ಗೆದ್ದು ಇಂದಿಗೆ 14 ವರ್ಷ!

  ಪುರುಷ ಪ್ರಧಾನ ಕ್ಷೇತ್ರದಲ್ಲಿ ಮಹಿಳೆಯರೂ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ನಿಧಾನವಾಗಿಯಾದರೂ ಈ ಬದಲಾವಣೆ ಆಗುತ್ತಿದೆ. ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ ನಿಮ್ಮ ಕೆಲಸದ ಬಗ್ಗೆ ವಿಶ್ವಾಸ ಇಟ್ಟುಕೊಂಡಿದ್ದರೆ ನಮ್ಮಂಥ ಆರೋಗ್ಯಸೇವೆ ವೃತ್ತಿಪರರಿಗೆ ಲಿಂಗ ವಿಚಾರ ಒಂದು ಸಮಸ್ಯೆ ಎನಿಸುವುದಿಲ್ಲ ಎಂದು ಕೆನಡಾ ಸಂಜಾತೆ ನವನೀತಾ ಗೌತಮ್ ಅಭಿಪ್ರಾಯಪಡುತ್ತಾರೆ.

  ಇವತ್ತು ಗೆಲ್ಲುತ್ತಾ ಆರ್​ಸಿಬಿ?

  ನವನೀತಾ ಗೌತಮ್ ಮತ್ತು ಕೈಲ್ ಜೀಮಿಸನ್ ಅವರ ಫೋಟೋ ವೈರಲ್ ಆದ ದಿನ ಆರ್​ಸಿಬಿ ತಂಡ ಕೆಕೆಆರ್ ವಿರುದ್ಧ ಹೀನಾಯ ಸೋಲು ಕಂಡಿತು. ಇವತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್​ಸಿಬಿ ಸೆಣಸುತ್ತಿದೆ. ಶಾರ್ಜಾದಲ್ಲಿ ಇಂದು ಸಂಜೆ 7:30ರಿಂದ ನಡೆಯಲಿರುವ ಪಂದ್ಯದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. ಟೂರ್ನಿಯಲ್ಲಿ ಎರಡು ಪಂದ್ಯಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಫಲವಾಗಿ ಆರ್​ಸಿಬಿಯ ನೆಟ್​ ರನ್ ರೇಟ್ ಪಾತಾಳದಲ್ಲಿದೆ. ಹೀಗಾಗಿ, ಆರ್​ಸಿಬಿ ತಂಡ ತನಗೆ ಉಳಿದಿರುವ ಪಂದ್ಯಗಳಲ್ಲಿ ಹೆಚ್ಚಿನವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
  Published by:Vijayasarthy SN
  First published: