Chris Gayle Pulls Out Of IPL 2021| ಐಪಿಎಲ್​ ಟೂರ್ನಿಯಿಂದ ದಿಢೀರ್ ಹೊರ ನಡೆದ ಸ್ಟಾರ್ ಬ್ಯಾಟ್ಸ್​ಮನ್ ಕ್ರಿಸ್​ ಗೇಲ್!

ಕೆರಿಬಿಯನ್ ಪ್ರೀಮಿಯರ್​ ಲೀಗ್​ನಿಂದ ನೇರವಾಗಿ ದುಬೈಗೆ ಆಗಮಿಸಿದ್ದ ಕ್ರಿಸ್​ ಗೇಲ್ ಐಪಿಎಲ್ 2021 ಟೂರ್ನಿಯ ದ್ವಿತಿಯಾರ್ಧದಲ್ಲಿ ಪಂಜಾಬ್ ಕಿಂಗ್ಸ್ ಪರ ಕೇವಲ 2 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದರು. ಆದರೆ, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಕ್ರಿಸ್ ಗೇಲ್.

ಕ್ರಿಸ್ ಗೇಲ್.

  • Share this:
    ಪಂಜಾಬ್ ಕಿಂಗ್ಸ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್ ಯೂನಿವರ್ಸಲ್ ಬಾಸ್ ಕ್ರಿಸ್​ ಗೇಲ್ (Chris Gayle) ಐಪಿಎಲ್​ 2021 (IPL 2021) ಟೂರ್ನಿಯಿಂದ ಹೊರಗುಳಿ ಯಲು ನಿರ್ಧರಿಸಿದ್ದಾರೆ ಎಂದು ಪಂಜಾಬ್ (Punjab Kings) ತಂಡದ ಆಡಳಿತ ಮಂಡಳಿ ಗುರುವಾರ ತಿಳಿಸಿದೆ. "ಕೊರೋನಾ (CoronaVirus) ಕಾರಣಕ್ಕೆ ಬಯೋ ಬಬಲ್​ನಲ್ಲಿ ಹೆಚ್ಚಿನ ಸಮಯ ಕಳೆಯುವುದು ಆಯಾಸವಾಗಿದೆ ಮತ್ತು ಇದೇ ತಿಂಗಳು ಯುಎಇ ಯಲ್ಲಿ ನಡೆಯಲಿರುವ ವಿಶ್ವಕಪ್ ಟಿ20 (T20 World Cup) ಟೂರ್ನಿಗೆ ಹೊಸ ಉಲ್ಲಾಸದಿಂದ ತಯಾರಾಗುವ ಕಾರಣಕ್ಕೆ ತಾನು ಐಪಿಎಲ್​ನಿಂದ ಹಿಂದೆ ಸರಿಯುತ್ತಿದ್ದೇನೆ" ಎಂದು ಕ್ರಿಸ್​ ಗೇಲ್ ತಿಳಿಸಿದ್ದಾರೆ. ಕ್ರಿಸ್​ ಗೇಲ್ ಈ ಹಿಂದೆ ಕೆರಿಬಿಯನ್ ಪ್ರೀಮಿಯರ್​ ಲೀಗ್​ನಲ್ಲಿ (Caribbean Premier League 2021) ಆಡುತ್ತಿದ್ದ ವೇಳೆ ಸಾಕಷ್ಟು ಸಮಯವನ್ನು ಬಯೋ ಬಬಲ್​ನಲ್ಲಿ ಕಳೆದಿದ್ದರು. ಅಲ್ಲಿಂದ ನೇರವಾಗು ದುಬೈಗೆ (Dubai) ಆಗಮಿಸಿದ್ದ ಅವರು ಇಲ್ಲೂ ಬಯೋ ಬಬಲ್​ನಲ್ಲೇ (Bio Bubble) ಇದ್ದಾರೆ. ಇದೇ ಕಾರಣಕ್ಕೆ ಅವರು ಆಯಾಸಗೊಂಡಿದ್ದಾರೆ ಎನ್ನಲಾಗಿದೆ.

    "ಕಳೆದ ಕೆಲವು ತಿಂಗಳುಗಳಿಂದ ನಾನು ಸಿಡಬ್ಲ್ಯೂಐ ಬಬಲ್, ಸಿಪಿಎಲ್ ಬಬಲ್ ನಂತರ ಐಪಿಎಲ್ ಬಬಲ್‌ನ ಭಾಗವಾಗಿದ್ದೇನೆ. ಹೀಗಾಗಿ ನಾನು ಮಾನಸಿಕವಾಗಿ ರೀಚಾರ್ಜ್ ಆಗಲು ಮತ್ತು ರಿಫ್ರೆಶ್ ಮಾಡಲು ಬಯಸುತ್ತೇನೆ. ಇದೇ ಕಾರಣಕ್ಕೆ ಐಪಿಎಲ್​ ನಿಂದ ಹಿಂದೆ ಸರಿಯಲು ಬಯಸಿದ್ದೇನೆ" ಎಂದು ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಪಂಜಾಬ್ ಕಿಂಗ್ಸ್ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಅಲ್ಲದೆ, "ನಾನು ಟಿ 20 ವಿಶ್ವಕಪ್‌ ಟೂರ್ನಿಯಲ್ಲಿ ನಾನು ವೆಸ್ಟ್ ಇಂಡೀಸ್‌ ತಂಡದ ಪರ ಉತ್ತಮ ಆಟವಾಡುವತ್ತ ಗಮನ ಹರಿಸಲು ಬಯಸುತ್ತೇನೆ. ಹೀಗಾಗಿ ದುಬೈನಲ್ಲಿ ವಿರಾಮ ತೆಗೆದುಕೊಳ್ಳಲು ಇಚ್ಛಿಸಿದ್ದೇನೆ. ನನ್ನನ್ನು ಇಷ್ಟು ವರ್ಷ ತಂಡದ ಭಾಗವಾಗಿಸಿಕೊಂಡಿದ್ದ ಪಂಜಾಬ್ ಕಿಂಗ್ಸ್‌ ತಂಡಕ್ಕೆ ನನ್ನ ಧನ್ಯವಾದಗಳು ಮತ್ತು ಶುಭಾಶಯಗಳು. ಕೆ.ಎಲ್. ರಾಹುಲ್ ನೇತೃತ್ವದಲ್ಲಿ ತಂಡ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಉತ್ತಮ ಪ್ರದರ್ಶ ನೀಡಲಿದೆ, ಪಂದ್ಯಗಳಲ್ಲಿ ಗೆಲುವು ಸಾಧಿಸಲಿದೆ" ಎಂದು ಕ್ರಿಸ್​ ಗೇಲ್ ಅಭಿಪ್ರಾಯಪಟ್ಟಿದ್ದಾರೆ.

    ಇನ್ನೂ ಕ್ರಿಸ್​ ಗೇಲ್ ಅವರ ನಿರ್ಧಾರವನ್ನು ತಂಡ ಗೌರವಿಸುತ್ತದೆ ಎಂದು ಮುಖ್ಯ ಕೋಚ್ ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅನಿಲ್ ಕುಂಬ್ಳೆ, "ನಾನು ಕ್ರಿಸ್ ಗೇಲ್ ವಿರುದ್ಧ ಆಡಿದ್ದೇನೆ ಮತ್ತು ಪಂಜಾಬ್ ಕಿಂಗ್ಸ್‌ನಲ್ಲಿ ಅವರಿಗೆ ತರಬೇತಿಯನ್ನೂ ನೀಡಿದ್ದೇನೆ. ನಾನು ತಿಳಿದಿರುವಂತೆ ಆತ ಸಂಪೂರ್ಣ ವೃತ್ತಿಪರ ಆಟಗಾರ. ಒಂದು ತಂಡವಾಗಿ ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಮತ್ತು ಟಿ 20 ವಿಶ್ವಕಪ್‌ಗೆ ತನ್ನನ್ನು ಸಿದ್ಧಪಡಿಸುವ ಆಸೆಯನ್ನು ಬೆಂಬಲಿಸುತ್ತೇನೆ "ಎಂದು ತಿಳಿಸಿದ್ದಾರೆ.

    ಸಿಇಒ ಸತೀಶ್ ಮೆನನ್ ಮಾತನಾಡಿ, "ಕ್ರಿಸ್ ಗೇಲ್ ಟಿ 20 ಕ್ರಿಕೆಟ್ ಆಟವನ್ನು ಬದಲಿಸಿದ ಒಬ್ಬ ದಂತಕಥೆ. ನಾವು ಅವರ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಅವರು ಪಂಜಾಬ್ ಕಿಂಗ್ಸ್ ಕುಟುಂಬದ ಭಾಗವಾಗಿದ್ದಾರೆ ಮತ್ತು ಅವರ ಉಪಸ್ಥಿತಿಯನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ನಾವು ಅವರಿಗೆ ಎಲ್ಲಾ ಬೆಂಬಲವನ್ನು ನೀಡುತ್ತೇವೆ ಮತ್ತು ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ" ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: IPL 2021 Playoffs- ಐಪಿಎಲ್ ಪ್ಲೇ ಆಫ್​ಗೆ ಯಾವೆಲ್ಲಾ ತಂಡಗಳು ಪ್ರವೇಶಿಸುತ್ತವೆ? ಇಲ್ಲಿದೆ ಲೆಕ್ಕಾಚಾರ

    ಕೆರಿಬಿಯನ್ ಪ್ರೀಮಿಯರ್​ ಲೀಗ್​ನಿಂದ ನೇರವಾಗಿ ದುಬೈಗೆ ಆಗಮಿಸಿದ್ದ ಕ್ರಿಸ್​ ಗೇಲ್ ಐಪಿಎಲ್ 2021 ಟೂರ್ನಿಯ ದ್ವಿತಿಯಾರ್ಧದಲ್ಲಿ ಪಂಜಾಬ್ ಕಿಂಗ್ಸ್ ಪರ ಕೇವಲ 2 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದರು. ಆದರೆ, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇದೀಗ ಟಿ 20 ವಿಶ್ವಕಪ್‌ಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಸೇರುವ ಮೊದಲು ಗೇಲ್ ದುಬೈನಲ್ಲಿ ಉಳಿಯುವ ಸಾಧ್ಯತೆಯಿದೆ.
    Published by:MAshok Kumar
    First published: