ಈ ಐಪಿಎಲ್​ನ ಅತಿ ವೇಗದ ಬೌಲಿಂಗ್ ದಾಖಲೆ; ಚೊಚ್ಚಲ ಪಂದ್ಯದಲ್ಲೇ ಉಮ್ರಾನ್ ಮಿಂಚು

151.03 KMH Ball by Umran Malik- ಜಮ್ಮು ಕಾಶ್ಮೀರದ 21 ವರ್ಷದ ಉಮ್ರಾನ್ ಮಲಿಕ್ ಅವರು ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ 151.03 ವೇಗದಲ್ಲಿ ಚೆಂಡೆಸೆದು ಈ ಐಪಿಎಲ್​ನ ಅತಿ ವೇಗದ ಭಾರತೀಯ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.

ಉಮ್ರಾನ್ ಮಲಿಕ್

ಉಮ್ರಾನ್ ಮಲಿಕ್

 • Share this:
  ಐಪಿಎಲ್ 2021 ಕ್ರಿಕೆಟ್ ಟೂರ್ನಿಯ ಪಂದ್ಯಗಳು ನಡೆಯುತ್ತಿರುವ ಯುಎಇಯ ಪಿಚ್​ಗಳು ನಿಧಾನಗತಿಯಿಂದ ಕೂಡಿವೆ. ವೇಗದ ಬೌಲರ್ಸ್​ಗೆ ಹೇಳಿ ಮಾಡಿಸಿದ ಪಿಚ್​ಗಳಲ್ಲ. ಆದರೂ ಕೆಲ ಬೌಲರ್​ಗಳು ತಮ್ಮ ಅಸಾಧಾರಣ ಬೌಲಿಂಗ್ ಸ್ಪೀಡ್​ನಿಂದ ಗಮನ ಸೆಳೆದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಉದಯೋನ್ಮುಖ ವೇಗದ ಪ್ರತಿಭೆ ಉಮ್ರಾನ್ ಮಲಿಕ್ ಅವರು ಈ ಐಪಿಎಲ್​ನಲ್ಲಿ ಅತಿ ವೇಗದ ಎಸೆತ ಹಾಕಿದ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ನಿನ್ನೆ ದುಬೈನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ ಮಲಿಕ್ ತಮ್ಮ ವೇಗದ ಬೌಲಿಂಗ್​ನಿಂದ ಗಮನ ಸೆಳೆದರು. ಆ ಪಂದ್ಯದಲ್ಲಿ ಅವರು ಎಸೆದ ಒಂದು ಚೆಂಡು ಗಂಟೆಗೆ 151.03 ಕಿಮೀ ವೇಗದಲ್ಲಿ ಚಿಮ್ಮಿತ್ತು. ಇದು ಭಾರತೀಯ ಬೌಲರ್​ವೊಬ್ಬ ಈ ಐಪಿಎಲ್​ನಲ್ಲಿ ಎಸೆದ ಫಾಸ್ಟೆಸ್ಟ್ ಬಾಲ್ ಎನಿಸಿದೆ.

  ನ್ಯೂಜಿಲೆಂಡ್​ನ ವೇಗದ ಬೌಲರ್ ಲಾಕೀ ಫರ್ಗ್ಯೂಸನ್ ಅವರು ಒಂದು ಪಂದ್ಯದಲ್ಲಿ 152.75 ಕಿಮೀ ವೇಗದಲ್ಲಿ ಬಾಲ್ ಎಸೆದಿದ್ದರು. ಅದು ಈ ಐಪಿಎಲ್​ನಲ್ಲಿ ಫಾಸ್ಟೆಸ್ಟ್ ಬಾಲ್ ಎನಿಸಿದೆ. ಅದು ಬಿಟ್ಟರೆ ಉಮ್ರಾನ್ ಮಲಿಕ್ ಅವರದ್ದು ಎರಡನೇ ಅತೀ ವೇಗದ ಎಸೆತ ಎನಿಸಿದೆ. ಆರ್​ಸಿಬಿ ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಈ ಹಿಂದಿನ ಪಂದ್ಯವೊಂದರಲ್ಲಿ 145.97 ವೇಗದಲ್ಲಿ ಚೆಂಡು ಎಸೆದು ಅತಿ ವೇಗದ ಭಾರತೀಯ ಬೌಲರ್ ಎನಿಸಿದ್ದರು. ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಮ್ಮು ಕಾಶ್ಮೀರದ 21 ವರ್ಷದ ಉಮ್ರಾನ್ ಮಲಿಕ್ ಅವರು ಆ ದಾಖಲೆಯನ್ನ ತಮ್ಮ ಹೆಸರಿಗೆ ಬರೆದಿದ್ದಾರೆ.


  ಟಿ ನಟರಾಜನ್ ಅವರಿಗೆ ಕೋವಿಡ್ ಪಾಸಿಟಿವ್ ಬಂದು ಕ್ವಾರಂಟೈನ್​ನಲ್ಲಿ ಇರುವುದರಿಂದ ಅವರಿಗೆ ಬದಲಿಯಾಗಿ ಉಮ್ರಾನ್ ಮಲಿಕ್ ಅವರನ್ನ ತಂಡಕ್ಕೆ ತಾತ್ಕಾಲಿಕವಾಗಿ ಸೇರಿಸಿಕೊಳ್ಳಲಾಗಿದೆ. ತಮ್ಮ ಚೊಚ್ಚಲ ಪಂದ್ಯದಲ್ಲೇ ಉಮ್ರಾನ್ ಮಲಿಕ್ ತಮ್ಮ ಪ್ರತಿಭೆಯನ್ನ ಜಗಜ್ಜಾಹೀರುಗೊಳಿಸಿದ್ದಾರೆ. ಯುಎಇಯ ನಿಧಾನಗತಿಯ ಪಿಚ್​ನಲ್ಲೂ ಇವರು ಅಷ್ಟರ ಮಟ್ಟಕ್ಕೆ ವೇಗವಾಗಿ ಚೆಂಡನ್ನ ಎಸೆದಿರುವುದು ಗಮನಾರ್ಹವೆನಿಸಿದೆ.
  PURPLE CAP:
  ಭಾರತದ ಅತ್ಯಂತ ವೇಗದ ಬೌಲರ್ಸ್: ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಎಂಬ ದಾಖಲೆ ನಮ್ಮ ಕರ್ನಾಟಕದ ಜಾವಗಲ್ ಶ್ರೀನಾಥ್ ಅವರದ್ದು. ಅವರು 90ರ ದಶಕದಲ್ಲಿ ಒಮ್ಮೆ ಗಂಟೆಗೆ 157 ಕಿಮೀ ವೇಗದಲ್ಲಿ ಬಾಲ್ ಬೌಲ್ ಮಾಡಿದ್ದರು. ಅದು ಭಾರತೀಯನೊಬ್ಬನ ಫಾಸ್ಟೆಸ್ಟ್ ಬೌಲಿಂಗ್ ಎನಿಸಿದೆ. ಇರ್ಫಾನ್ ಪಠಾಣ್, ನವದೀಪ್ ಸೈನಿ, ವರುಣ್ ಆರೋನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಸೇರಿದಂತೆ ಹಲವು ಭಾರತೀಯ ಬೌಲರ್​ಗಳು 150ಕ್ಕಿಂತ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡಬಲ್ಲವರಾಗಿದ್ದರು.

  ವಿಶ್ವದ ವೇಗದ ಬೌಲರ್ಸ್ಗ: ಶೋಯಬ್ ಅಖ್ತರ್ ಮತ್ತು ಬ್ರೆಟ್ ಲೀ ಇಬ್ಬರೂ 161 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಅಖ್ತರ್, ಬ್ರೆಟ್ ಲೀ ಮತ್ತು ಶೌನ್ ಟೇಟ್ ಅವರು 100 ಮೈಲಿ ವೇಗದಲ್ಲಿ ಬೌಲಿಂಗ್ ಮಾಡಿದ ವಿಶ್ವದ ಮೂವರು ಬೌಲರ್ಸ್ ಆಗಿದ್ಧಾರೆ. ಅವರನ್ನ ಬಿಟ್ಟರೆ ಯಾರೂ ಕೂಡ 100 ಮೈಲಿ (161 ಕಿಮೀ) ವೇಗದಲ್ಲಿ ಬೌಲಿಂಗ್ ಮಾಡಿದ್ದಿಲ್ಲ.

  ಇದನ್ನೂ ಓದಿ: IPL 2021 Playoffs- ಐಪಿಎಲ್ ಪ್ಲೇ ಆಫ್: ಯಾವ್ಯಾವ ತಂಡಗಳಿಗೆ ಎಷ್ಟು ಚಾನ್ಸ್? ಇಲ್ಲಿದೆ ಲೆಕ್ಕಾಚಾರ

  ಈ ಐಪಿಎಲ್​ನಲ್ಲಿ ಅತಿ ವೇಗದ ಬೌಲರ್ ಎನಿಸಿರುವ ಉಮ್ರಾನ್ ಮಲಿಕ್ ಅವರಿಗೆ ಕ್ರಿಕೆಟ್ ಅನುಭವ ಇನ್ನೂ ಕಡಿಮೆ. ಇನ್ನೂ ಅವರು ಮಾಗಬೇಕಿದೆ. ಆದರೆ, ಅವರ ಪ್ರತಿಭೆ ಈಗಾಗಲೇ ಬಹಳ ಮಂದಿಯ ಗಮನ ಸೆಳೆದಿದೆ. ಸನ್​ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಮಲಿಕ್ ಪ್ರತಿಭೆಯನ್ನ ಶ್ಲಾಘಿಸಿದ್ಧಾರೆ. ಈತನಿಗೆ ಉಜ್ವಲ ಭವಿಷ್ಯ ಇದೆ ಎಂದು ಶುಭಹಾರೈಸಿದ್ಧಾರೆ.
  Published by:Vijayasarthy SN
  First published: