IPL

  • associate partner
HOME » NEWS » Ipl » UMPIRE CHANGES MIND ON WIDE AFTER SEEING MS DHONI ANGRY FACE RMD

MS Dhoni: ಧೋನಿ ಸಿಟ್ಟನ್ನು ನೋಡಿ ನಿರ್ಧಾರವನ್ನೇ ಬದಲಿಸಿದ ಅಂಪೈರ್​!; ಅಸಮಾಧಾನ ಹೊರಹಾಕಿದ ವಾರ್ನರ್​

SRH vs CSK: ಅಂಪೈರ್​ ನಿರ್ಧಾರಕ್ಕೆ ಸನ್​ ರೈಸರ್ಸ್​ ಹೈದರಾಬಾದ್ ನಾಯಕ ಡೇವಿಡ್​ ವಾರ್ನರ್​ ಸಿಟ್ಟಾಗಿದ್ದಾರೆ. ಧೋನಿ ಕೂಗಿದಾಕ್ಷಣ ನಿರ್ಧಾರ ಬದಲಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

news18-kannada
Updated:October 14, 2020, 10:21 AM IST
MS Dhoni: ಧೋನಿ ಸಿಟ್ಟನ್ನು ನೋಡಿ ನಿರ್ಧಾರವನ್ನೇ ಬದಲಿಸಿದ ಅಂಪೈರ್​!; ಅಸಮಾಧಾನ ಹೊರಹಾಕಿದ ವಾರ್ನರ್​
ಅಂಪೈರ್-ಧೋನಿ
  • Share this:
ಮಂಗಳವಾರ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 29ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ತಂಡ 20 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಮೂರನೇ ಜಯ ದಾಖಲಿಸಿತು. ಈ ಮಧ್ಯೆ ಪಂದ್ಯ ನಡೆಯುವ ವೇಳೆ ಅಂಪೈರ್​ ತೆಗೆದುಕೊಂಡ ನಿರ್ಧಾರ ಸಾಕಷ್ಟು ಟೀಕೆಗಳಿಗೆ ಕಾರಣವಾಗಿದೆ. ಧೋನಿ ಸಿಟ್ಟಾದರು ಎನ್ನುವ ಕಾರಣಕ್ಕೆ ಅಂಪೈರ್​ ತಮ್ಮ ನಿರ್ಧಾರವನ್ನೇ ಬದಲಿಸಿ ಬಿಟ್ಟಿದ್ದಾರೆ. ಈ ವಿಚಾರಕ್ಕೆ ಹೈದರಾಬಾದ್ ತಂಡ ಅಂಪೈರ್​ ವಿರುದ್ಧ ಸಾಕಷ್ಟು ಆಕ್ರೋಶ ಹೊರ ಹಾಕಿದೆ.

ಚೆನ್ನೈ ನೀಡಿದ್ದ 168 ರನ್​ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಉತ್ತಮ ಆರಂಭ ಕಾಣಲಿಲ್ಲ. ಕೇನ್ ವಿಲಿಯಮ್ಸ್​ ಪಂದ್ಯ ಕಟ್ಟೋಕೆ ಮುಂದಾದರಾದರೂ ಅವರಿಗೆ ಯಾರೂ ಉತ್ತಮ ಸಾತ್​ ನೀಡಲಿಲ್ಲ. ಕೊನೆಗೆ ಹೈದರಾಬಾದ್​ಗೆ 11 ಬಾಲ್​ಗಳಿಗೆ 25 ರನ್​ಗಳ ಅವಶ್ಯಕತೆ ಇತ್ತು. ಶಾರ್ದೂಲ್​ ಠಾಕೂರ್​ ಬೌಲಿಂಗ್​ನಲ್ಲಿದ್ದರೆ, ರಶೀದ್​ ಖಾನ್​ ಬ್ಯಾಟಿಂಗ್​ಗೆ ನಿಂತಿದ್ದರು. ಠಾಕೂರ್​ ನಿರಂತರವಾಗಿ ಬಾಲನ್ನು ಔಟ್​ಸೈಡ್​​ ಎಸೆಯುತ್ತಿದ್ದರು.

ಮೊದಲ ಬಾಲ್​ ತುಂಬಾನೇ ಹೊರ ಹೋಗಿದ್ದರಿಂದ ಅದನ್ನು ಅಂಪೈರ್​ ವೈಡ್​ ಎಂದು ಘೋಷಣೆ ಮಾಡಿದರು. ನಂತರದ ಬಾಲ್​ ಕೂಡ ಠಾಕೂರ್ ಅದೇ ರೀತಿ  ಎಸೆದರು. ಈ ವೇಳೆ ಅಂಪೈರ್​ ವೈಡ್​ ಕೊಡಲು ಕೈ ಎತ್ತುವುದರಲ್ಲಿದ್ದರು. ಆಗ ಕೀಪಿಂಗ್​ ನಿಂತಿದ್ದ ಧೋನಿ ಸಿಟ್ಟಿನಲ್ಲೇ, ಇದನ್ನು ನೀವು ಹೇಗೆ ವೈಡ್ ನೀಡುತ್ತಿರಿ ಎಂದು ಕೈ ಸನ್ನೆಯ ಮೂಲಕವೇ ಪ್ರಶ್ನೆ ಮಾಡಿದರು. ಈ ವೇಳೆ ವೈಡ್​ ಕೊಡಲು ಮುಂದಾದ ಅಂಪೈರ್​ ಕೈ ಕೆಳಗಿಳಿಸಿ ಬಿಟ್ಟರು.








ಅಂಪೈರ್​ ನಿರ್ಧಾರಕ್ಕೆ ಸನ್​ ರೈಸರ್ಸ್​ ಹೈದರಾಬಾದ್ ನಾಯಕ ಡೇವಿಡ್​ ವಾರ್ನರ್​ ಸಿಟ್ಟಾಗಿದ್ದಾರೆ. ಧೋನಿ ಕೂಗಿದಾಕ್ಷಣ ನಿರ್ಧಾರ ಬದಲಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಅಲ್ಲದೆ, ಅಂಪೈರ್​ ಈ ರೀತಿ ಮಾಡಬಾರದಿತ್ತು ಎಂದು ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.
Published by: Rajesh Duggumane
First published: October 14, 2020, 10:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories