IPL

  • associate partner
HOME » NEWS » Ipl » UMESH YADAVS OVERS ARE MORE EXPENSIVE THAN GOLD THESE DAYS AAKASH CHOPRA RMD

Umesh Yadav: ಇತ್ತೀಚೆಗೆ ಚಿನ್ನಕ್ಕಿಂತಲೂ ತುಟ್ಟಿಯಾಗುತ್ತಿದ್ದಾರೆ ಉಮೇಶ್​ ಯಾದವ್​!

ಮೊದಲ ಪಂದ್ಯದಲ್ಲಿ 48 ರನ್​ ನೀಡಿದ್ದರು ಉಮೇಶ್​. ಆದಾಗ್ಯೂ ನಿನ್ನೆಯ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಕೇವಲ ಮೂರು ಓವರ್​ನಲ್ಲಿ 35 ರನ್​ ನೀಡಿ ತಂಡಕ್ಕೆ ಹೊರೆಯಾದರು.

news18-kannada
Updated:September 25, 2020, 11:49 AM IST
Umesh Yadav: ಇತ್ತೀಚೆಗೆ ಚಿನ್ನಕ್ಕಿಂತಲೂ ತುಟ್ಟಿಯಾಗುತ್ತಿದ್ದಾರೆ ಉಮೇಶ್​ ಯಾದವ್​!
ಉಮೇಶ್​ ಯಾದವ್
  • Share this:
ಕೊರೋನಾ ವೈರಸ್​ ಕಾಣಿಸಿಕೊಂಡ ನಂತರದಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿದೆ. ಬಂಗಾರದ ಬೆಲೆ 50 ಸಾವಿರದ ಗಡಿ ದಾಟಿದ್ದು, ಈಗ ನಿಧಾನವಾಗಿ ಇಳಿಕೆ ಕಾಣುತ್ತಿದೆ. ಆದರೆ, ಇತ್ತೀಚೆಗೆ ಚಿನ್ನದ ಬೆಲೆಗಿಂತ ಆರ್​ಸಿಬಿ ವೇಗಿ ಉಮೇಶ್​ ಯಾದವ್​ ಅವರ ಬೌಲಿಂಗ್​ ತುಟ್ಟಿ ಆಗುತ್ತಿದೆ ಎಂದು ಟೀಂ ಇಂಡಿಯಾದ ಮಾಜಿ ಓಪನರ್​ ಆಕಾಶ್​ ಚೋಪ್ರಾ ಹೇಳಿದ್ದಾರೆ. ನಿನ್ನೆ ನಡೆದ ಪಂದ್ಯದ ವಿಮರ್ಷೆ ಬಗ್ಗೆ ಅವರು ಈ ಮಾತನ್ನು ಹೇಳಿದ್ದಾರೆ.

ಉಮೇಶ್​ ಯಾದವ್ ಆರ್​ಸಿಬಿಯ ಪ್ರಮುಖ ಬೌಲರ್ ಎಂದು ಪರಿಗಣಿಸಲಾಗಿದೆ. ಆದರೆ, ಪ್ರತಿ ಬಾರಿಯೂ ಅವರು ತಂಡಕ್ಕೆ ತುಟ್ಟಿ ಆಗುತ್ತಲೇ ಇದ್ದಾರೆ. ಡೆತ್​ ಓವರ್​ಗಳಲ್ಲಿ ಹೆಚ್ಚು ರನ್​ ನೀಡುವ ಮೂಲಕ ಆರ್​​ಸಿಬಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 48 ರನ್​ ನೀಡಿದ್ದರು ಉಮೇಶ್​. ಆದಾಗ್ಯೂ ನಿನ್ನೆಯ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಕೇವಲ ಮೂರು ಓವರ್​ನಲ್ಲಿ 35 ರನ್​ ನೀಡಿ ತಂಡಕ್ಕೆ ಹೊರೆಯಾದರು. ಹೀಗಾಗಿ ಅವರಿಗೆ ನಾಲ್ಕನೇ ಓವರ್​ ಬೌಲ್​ ಹಾಕಲು ನೀಡಿಲ್ಲ. ಪ್ರತಿ ಬಾರಿಯೂ ಉಮೇಶ್​ ಯಾದವ್​ ಇಷ್ಟು ರನ್​ ನೀಡುತ್ತಿರುವುದಕ್ಕೆ ಸಾಕಷ್ಟು ಟ್ರೋಲ್​ ಆಗುತ್ತಿದ್ದಾರೆ.

"ಓರ್ವ ಇಂಡಿಯನ್​ ಬೌಲರ್​ ಆಗಿ ನಾವು ಉಮೇಶ್​ ಯಾದವ್​ ಅವರಿಂದ ನಾವು ಮತ್ತಷ್ಟನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಇತ್ತೀಚೆಗೆ ಚಿನ್ನದ ದರಕ್ಕಿಂತ ಉಮೇಶ್​ ಯಾದವ್​ ಓವರ್​ಗಳು ತುಟ್ಟಿ ಆಗುತ್ತಿವೆ. ಅವರು ಬದಲಾಗದಿದ್ದರೆ ಕಷ್ಟವಿದೆ," ಎಂದಿದ್ದಾರೆ.

Youtube Video
ಇನ್ನು, ಆಕಾಶ್​ ಚೋಪ್ರಾ, ಕೆಎಲ್​ ರಾಹುಲ್​ ಬ್ಯಾಟಿಂಗ್ ಅನ್ನು ಕೊಂಡಾಡಿದ್ದಾರೆ.
Published by: Rajesh Duggumane
First published: September 25, 2020, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories