Viral Photo: ಐಪಿಎಲ್​ ಆಡ್ತಿರೋ ಹಾರ್ದಿಕ್​ ಪಾಂಡ್ಯ ಇಲ್ಲಿ ಹೆಂಗ್​ ಬಂದ್ರು? ಇದಕ್ಕೆನಾ ಅವರನ್ನು ಆಲ್​ರೌಂಡರ್​ ಅನ್ನೋದು!

ಕ್ರಿಕೆಟ್ (Cricket) ಕ್ಷೇತ್ರದ ಸ್ಟಾರ್ ಆಟಗಾರರು (Star Players) ಸಹ ಸೆಲಿಬ್ರಿಟಿಗಳೇ ಆಗಿದ್ದಾರೆ ಹಾಗೂ ಇವರ ಪೋಸ್ಟ್‌ಗಳೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ವೈರಲ್ ಆಗುತ್ತಿರುತ್ತವೆ.

ಇದು ಹಾರ್ದಿಕ್​ ಪಾಂಡ್ಯನಾ?

ಇದು ಹಾರ್ದಿಕ್​ ಪಾಂಡ್ಯನಾ?

  • Share this:
ಇಂದು ಸಾಮಾಜಿಕ ಮಾಧ್ಯಮ (Social Media) ಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ನಾವು ಕಲ್ಪಿಸಿಕೊಳ್ಳಲೂ ಆಗದಂತಹ ಹಲವು ಪ್ರಸಂಗಗಳು, ನೈಜ ಘಟನೆ(Real Incidents) ಗಳು ಜಗತ್ತಿನ ಯಾವುದೇ ಮೂಲೆಯಲ್ಲಾಗಲಿ ಘಟಿಸಿರಲಿ ನಮ್ಮ ಕಣ್ಣುಗಳಿಗೆ ಬೀಳದೇ ಇರಲಾರದು. ಇನ್ನು, ಸೆಲೆಬ್ರಿಟಿಗಳು (Celebrities) ಅಂದಾಗ ಕೇಳಬೇಕೆ..? ಅವರ ಪ್ರತಿಯೊಂದು ಚಟುವಟಿಕೆಗಳು, ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವಿಕೆ ಚಿತ್ರಗಳ ರೂಪದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇರುತ್ತವೆ. ಭಾರತ (India) ದಲ್ಲಿ ಸೆಲಿಬ್ರಿಟಿಗಳೆಂದರೆ ಚಿತ್ರತಾರೆಗಳೇ ಆಗಿರಬೇಕೆಂದೇನಿಲ್ಲ. ಕ್ರಿಕೆಟ್ (Cricket) ಕ್ಷೇತ್ರದ ಸ್ಟಾರ್ ಆಟಗಾರರು (Star Players) ಸಹ ಸೆಲಿಬ್ರಿಟಿಗಳೇ ಆಗಿದ್ದಾರೆ ಹಾಗೂ ಇವರ ಪೋಸ್ಟ್‌ಗಳೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ವೈರಲ್ ಆಗುತ್ತಿರುತ್ತವೆ.

ಈ ಫೋಟೋದಲ್ಲಿರೋದು ಹಾರ್ದಿಕ್​ ಪಾಂಡ್ಯಾನಾ?

ಆಗಾಗ ಕ್ರಿಕೆಟ್ ಆಟಗಾರರ ಯಾವುದಾದರೊಂದು ವಿಶೇಷ ದೃಶ್ಯಗಳನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ನೋಡುತ್ತಿರುತ್ತೇವೆ. ಈಗ ಅಂತಹುದ್ದೇ ಒಂದು ಪೋಸ್ಟ್ ವೈರಲ್ ಆಗಿದೆ. ಈ ಬಾರಿ ಲೇಟೆಸ್ಟ್ ಆಗಿ ಟ್ವಿಟ್ಟರ್‌ನಲ್ಲಿ ಒಂದು ಚಿತ್ರ ವೈರಲ್ ಆಗಿದ್ದು, ಅದರಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಸಿದ್ಧ ಆಟಗಾರ ಹಾರ್ದಿಕ್ ಪಾಂಡ್ಯ ಯಾವುದೋ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿದ್ದಾರೆಯೇ ಎಂಬ ಗುಮಾನಿ ಎಲ್ಲರಲ್ಲೂ ಮೂಡಿಸಿದೆ.

ಹಾರ್ದಿಕ್​ ಥರನೇ ಕಾಣಿಸುವ ಡಾನ್ಸರ್​!

ಇತ್ತೀಚೆಗೆ ಟ್ವಿಟ್ಟರ್ ಬಳಕೆದಾರರೊಬ್ಬರು ಕೋಚೆಲ್ಲಾದಲ್ಲಿ ನಡೆದ ದೋಜಾ ಕ್ಯಾಟ್ ಅವರ ಸಂಗೀತೋತ್ಸವದ ಪಿಕ್ ಒಂದನ್ನು ಶೇರ್ ಮಾಡಿಕೊಂಡಿದ್ದು ಅದರಲ್ಲಿ ನೃತ್ಯಮಾಡುತ್ತಿರುವ ಹಲವರ ಪೈಕಿ ಒಬ್ಬರು ನೋಡಲು ಹಾರ್ದಿಕ್ ಪಾಂಡ್ಯನಂತೆಯೇ ಇರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ ಎನ್ನಬಹುದು. ಹಾರ್ದಿಕ್ ಪಾಂಡ್ಯ ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರನಾಗಿದ್ದು ಪ್ರಸ್ತುತ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ.


ರ್‍ಯಾಪರ್ ದೋಜಾ ಕ್ಯಾಟ್ ಕಾರ್ಯಕ್ರಮದ ಫೋಟೋ ವೈರಲ್​​!

ಬಳಕೆದಾರರು ಶೇರ್ ಮಾಡಿಕೊಂಡಿರುವ ಟ್ವೀಟ್‌ನಲ್ಲಿ ರ್‍ಯಾಪರ್ ದೋಜಾ ಕ್ಯಾಟ್ ಅವರು ಪ್ರದರ್ಶನ ನೀಡುತ್ತಿದ್ದು ಅವರ ಜೊತೆ ಹಲವು ಕಲಾವಿದರು ನೃತ್ಯ ಮಾಡುತ್ತಿದ್ದಾರೆ. ಅವರ ಜೊತೆಯಲ್ಲೇ ಹಿನ್ನೆಲೆಯಲ್ಲಿ ಮತ್ತೊಬ್ಬ ಕಲಾವಿದ ನೃತ್ಯ ಮಾಡುತ್ತಿದ್ದು ಆ ಕಲಾವಿದ ಹಾರ್ದಿಕ್ ಪಾಂಡ್ಯನಂತೆಯೇ ಇದ್ದಾನೆಂದು ತಿಳಿದುಬಂದಿದೆ. ತದನಂತರ ಈ ಪೋಸ್ಟ್ ವೈರಲ್ ಆಗಿದ್ದು ಹಲವು ಬಳಕೆದಾರರು ಇದು ನಿಜವಾಗಿಯೂ ಕ್ರಿಕೆಟ್ ಆಟಗಾರನೆಯೇ ಎಂಬ ಗೊಂದಲದಲ್ಲಿದ್ದರು. ಆದರೆ, ಅದು ನಿಜವಾಗಿಯೂ ಹಾರ್ದಿಕ್ ಪಾಂಡ್ಯ ಅಲ್ಲ, ಬದಲಾಗಿ ನೋಡಲು ಅವರೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿರುವ ಒಬ್ಬ ಕಲಾವಿದನೆಂದು ತಿಳಿದುಬಂದಿದೆ.

ಇದನ್ನೂ ಓದಿ: ಅಂಪೈರ್​ ತೀರ್ಪು ಪ್ರಶ್ನಿಸಿದ್ದಕ್ಕೆ ರಿಷಭ್​ಗೆ ಭಾರೀ ದಂಡ! ಗ್ರೌಂಡ್​ಗೆ ನುಗ್ಗಿದ ಕೋಚ್​ಗೂ ತಲೆದಂಡ

ಅಸಲಿಗೆ ಕೊಚೆಲ್ಲಾ ಸಂಗೀತೋತ್ಸವದಲ್ಲಿ ದೋಜಾ ಅವರು ತಮ್ಮ ಜನಪ್ರಿಯ ಗೀತೆಗಳ ಪ್ರದರ್ಶನ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಅವರ ಪ್ರಸಿದ್ಧ ಗೀತೆಯಾದ ಗೆಟ್ ಇಂಟು ಇಟ್ ಎಂಬ ಪ್ರದರ್ಶನ ನಡೆಯುವಾಗ ಟೈಮ್ ಸ್ಟ್ಯಾಂಪ್‌ನಲ್ಲಿ 1:11 ಆಗಿದ್ದಾಗ ಅವರ ನೃತ್ಯ ಭಂಗಿಯಲ್ಲಿ ಅವರ ಕಾಲುಗಳನ್ನು ಎತ್ತಿ ಹಿಡಿದಿರುವ ಕಲಾವಿದನೊಬ್ಬ ನೋಡಲು ನಮ್ಮ ಭಾರತೀಯ ಕ್ರಿಕೆಟ್ ರಂಗದ ಹಾರ್ದಿಕ್ ಪಾಂಡ್ಯನಂತೆಯೇ ಇರುವುದನ್ನು ಕಾಣಬಹುದಾಗಿದೆ. ಈ ಪಿಕ್ ಅನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾಗ ಕೆಲ ಸಮಯದವರೆಗೆ ಕ್ರಿಕೆಟ್ ಅಭಿಮಾನಿಗಳಿಗೆ ಪುಳಕ ಉಂಟಾಗುವುದರ ಜೊತೆಗೆ ಗೊಂದಲವೂ ಆಗಿತ್ತೆನ್ನಬಹುದಷ್ಟೇ.

ಇದನ್ನೂ ಓದಿ: ಬಟ್ಲರ್ ಅಬ್ಬರಕ್ಕೆ ದಾಖಲೆಗಳೆಲ್ಲಾ ಪುಡಿ ಪುಡಿ, ಕೊಹ್ಲಿ ಸಾಧನೆಯನ್ನೂ ಹಿಂದಿಕ್ತಾರಾ ಜೋಸ್ ಬಟ್ಲರ್?

ಅನ್ಶು ಎಂಬ ಇನ್ನೊಬ್ಬ ಬಳಕೆದಾರರು ಪಾಂಡ್ಯ ಅವರ ಪ್ರತಿಭೆಯನ್ನು ಹೊಗಳುತ್ತ, "ಅವರೊಬ್ಬ ಬಹು ಪ್ರತಿಭೆಯ ವ್ಯಕ್ತಿ, ಮೊದಲಿಗೆ ಕ್ರಿಕೆಟರ್, ನಂತರ ಕುಸ್ತಿಪಟು ಹಾಗೂ ಈಗ ನೃತ್ಯಗಾರ" ಎಂದು ಬರೆದುಕೊಂಡಿದ್ದರು. ಇನ್ನೊಬ್ಬ ಬಳಕೆದಾರರು ಪಾಂಡ್ಯ ಅವರು ಯಾಕೆ ಹಿಂದಿನ ಜಿಟಿ ಪಂದ್ಯವನ್ನು ಮಿಸ್ ಮಾಡಿದರು ಎಂಬುದು ಈಗ ಗೊತ್ತಾಗುತ್ತಿದೆ ಎಂದು ಹೇಳಿದರೆ ಮಗದೊಬ್ಬ ಬಳಕೆದಾರರು ಪಾಂಡ್ಯ ಅವರು ಐಪಿಎಲ್ ಮುಕ್ತಾಯ ಸಮಾರಂಭಕ್ಕಾಗಿ ಅಭ್ಯಾಸ ಮಾಡುತ್ತಿದ್ದಾರೆ ಎಂದು ಕಾಲೆಳೆದಿದ್ದನ್ನು ಗಮನಿಸಬಹುದು.
Published by:Vasudeva M
First published: