IPL

  • associate partner
HOME » NEWS » Ipl » TO GIFT TRENT BOULT TO ONE OF THE STRONGEST TEAMS IN IPL IS EXTRAORDINARY TOM MOODY SLAMS DELHI CAPITALS ZP

IPL 2020: ಮುಂಬೈ ತಂಡಕ್ಕೆ ಡೆಲ್ಲಿ ಈ ಬೌಲರ್​ನ್ನು ನೀಡಿದ್ದೇ ದೊಡ್ಡ ತಪ್ಪು..!

ಡೆಲ್ಲಿ ಕ್ಯಾಪಿಟಲ್ಸ್​ ಜೊತೆಗಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಟ್ರೆಂಟ್ ಬೌಲ್ಟ್ ಮೊದಲ ಓವರ್​ನಲ್ಲೇ ಪೃಥ್ವಿ ಶಾ ಹಾಗೂ ಅಜಿಂಕ್ಯ ರಹಾನೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಆರಂಭಿಕ ಆಘಾತ ನೀಡಿದ್ದರು.

news18-kannada
Updated:November 10, 2020, 3:49 PM IST
IPL 2020: ಮುಂಬೈ ತಂಡಕ್ಕೆ ಡೆಲ್ಲಿ ಈ ಬೌಲರ್​ನ್ನು ನೀಡಿದ್ದೇ ದೊಡ್ಡ ತಪ್ಪು..!
MI vs DC
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ. ಈ ಪಂದ್ಯದಲ್ಲಿ ಮುಂಬೈ ಗೆದ್ದರೆ 5ನೇ ಬಾರೀ ಕಿರೀಟ ಮುಡಿಗೇರಿಸಿಕೊಂಡ ದಾಖಲೆ ನಿರ್ಮಿಸಲಿದೆ. ಹಾಗೆಯೇ ಚೊಚ್ಚಲ ಬಾರಿ ಟ್ರೋಫಿಗೆ ಮುತ್ತಿಕ್ಕುವ ತವಕದಲ್ಲಿ ಡೆಲ್ಲಿ ಬಾಯ್ಸ್. ಇನ್ನು ಎರಡು ತಂಡಗಳು ಸಮಬಲದಿಂದ ಕೂಡಿದ್ದು, ಉಭಯ ತಂಡಗಳಲ್ಲಿಯೂ ಅತ್ಯುತ್ತಮ ವೇಗಿಗಳಿರುವುದು ವಿಶೇಷ.

ಅದರಲ್ಲೂ ಪರ್ಪಲ್ ಕ್ಯಾಪ್ ಹೋರಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಕಗಿಸೋ ರಬಾಡ (29 ವಿಕೆಟ್) ಮುಂಚೂಣಿಯಲ್ಲಿದ್ದರೆ, 27 ವಿಕೆಟ್​ ಪಡೆದಿರುವ ಜಸ್​ಪ್ರೀತ್ ಬುಮ್ರಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ 22 ವಿಕೆಟ್ ಉರುಳಿಸಿರುವ ಮುಂಬೈ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಇರುವುದು ವಿಶೇಷ. ಇದೇ ಬೌಲ್ಟ್ ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಅದೇ ತಂಡದ ವಿರುದ್ಧ ಫೈನಲ್ ಪಂದ್ಯವಾಡುವ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ.

ಇದೇ ಕಾರಣದಿಂದ ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಕೋಚ್, ಆಸ್ಟ್ರೇಲಿಯಾ ಕ್ರಿಕೆಟಿಗ ಟಾಮ್ ಮೂಡಿ, ಡೆಲ್ಲಿ ಕ್ಯಾಪಿಟಲ್ಸ್​ ತಂಡ ಈ ಬಾರಿಯ ಹರಾಜಿನಲ್ಲಿ ವಿಶ್ವ ದರ್ಜೆಯ ಬೌಲರ್​ನ್ನು ಕೈಬಿಟ್ಟು ದೊಡ್ಡ ಪ್ರಮಾದ ಮಾಡಿದೆ ಎಂದಿದ್ದಾರೆ.

2018 ಮತ್ತು 2019 ರ ಸೀಸನ್​ಗಳಲ್ಲಿ ಡೆಲ್ಲಿ ಪರ ಕಣಕ್ಕಿಳಿದಿದ್ದ ಬೌಲ್ಟ್ ಅವರನ್ನು 2020 ರ ಸೀಸನ್​ ಹರಾಜಿಗೆ ಮುಂಚಿತವಾಗಿ ಮುಂಬೈ ತಂಡಕ್ಕೆ ವರ್ಗಾವಣೆ ಮಾಡಲಾಗಿತ್ತು. ಇತ್ತ ಲಸಿತ್ ಮಾಲಿಂಗ ಅವರ ಅಲಭ್ಯತೆ ನಡುವೆ, ಪ್ರಮುಖ ಬೌಲರ್ ಹುಡುಕಾಟದಲ್ಲಿದ್ದ ಮುಂಬೈಗೆ ಬೌಲ್ಟ್ ವರದಾನವಾಗಿ ಸಿಕ್ಕಿತು. ಅಲ್ಲದೆ ಅದ್ಭುತವಾಗಿ ಬೌಲಿಂಗ್ ಮಾಡಿದ ನ್ಯೂಜಿಲೆಂಡ್ ವೇಗಿ ಸೀಸನ್​ನ ಮೂರನೇ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ.

ಟ್ರೆಂಟ್ ಬೌಲ್ಟ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೈ ಬಿಟ್ಟಿದ್ದು ಅತ್ಯಂತ ಕೆಟ್ಟ ನಿರ್ಧಾರವಾಗಿತ್ತು. ಕೋವಿಡ್-19 ಬರಲಿದೆ, ಐಪಿಎಲ್ ಯುಎಇನಲ್ಲಿ ನಡೆಯಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ಬೌಲ್ಟ್ ಸ್ವಿಂಗ್​ಗೆ ಹೊಂದಿಕೊಳ್ಳುವ ಪಿಚ್​ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದರು. ಇದು ಗೊತ್ತಿದ್ದರೂ ಡೆಲ್ಲಿ ಫ್ರಾಂಚೈಸಿ ಕೈಬಿಟ್ಟಿತು. ಬೌಲ್ಟ್ ಐಪಿಎಲ್​ ಪವರ್​ಪ್ಲೇನ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ. ಇಂತಹ ವೇಗಿಯನ್ನು ಮುಂಬೈಗೆ ಉಡುಗೊರೆಯಾಗಿ ನೀಡಿರುವುದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೂರ್ಖತನ ಎಂದು ಟಾಮ್ ಮೂಡಿ ಅಭಿಪ್ರಾಯಪಟ್ಟಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ಜೊತೆಗಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಟ್ರೆಂಟ್ ಬೌಲ್ಟ್ ಮೊದಲ ಓವರ್​ನಲ್ಲೇ ಪೃಥ್ವಿ ಶಾ ಹಾಗೂ ಅಜಿಂಕ್ಯ ರಹಾನೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಆರಂಭಿಕ ಆಘಾತ ನೀಡಿದ್ದರು. ಇದೀಗ ಮತ್ತೆ ಫೈನಲ್​ನಲ್ಲೂ ಮಾರಕವಾಗಿ ಪರಿಣಮಿಸುವ ನಿರೀಕ್ಷೆಯಿದೆ.
POINTS TABLE: SCHEDULE TIME TABLE:

ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!
Published by: zahir
First published: November 10, 2020, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories