news18-kannada Updated:November 11, 2020, 11:04 AM IST
Hardik Pandya
ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮನೆಗೆ ಹೊಸ ಅತಿಥಿ ಆಗಮನವಾಗಿತ್ತು. ಪ್ರೇಯಸಿ ನತಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಖುಷಿಯನ್ನು ಪಾಂಡ್ಯ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪಾಂಡ್ಯ ಐಪಿಎಲ್ಗಾಗಿ ದುಬೈಗೆ ಬರಬೇಕಾಗಿ ಬಂದಿತ್ತು. ಕುಟುಂಬವನ್ನು ತುಂಬಾನೇ ಮಿಸ್ ಮಾಡಿಕೊಂಡ ಹಾರ್ದಿಕ್, ಈಗ ಮಗನಿಗೆ ತಂಡ ಗೆದ್ದ ಕಪ್ಅನ್ನು ಗಿಫ್ಟ್ ಆಗಿ ನೀಡೋಕೆ ರೆಡಿ ಆಗಿದ್ದಾರೆ!
ಹಾರ್ದಿಕ್ ಪಾಂಡ್ಯ ಗೆಳೆತಿ ಬಾಲಿವುಡ್ನ ಬೆಡಗಿ ನತಾಶಾ ಸ್ಟ್ಯಾನ್ಕೊವಿಚ್ ಅವರೊಂದಿಗೆ ಜನವರಿ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಿಶೇಷ ಬೋಟ್ನಲ್ಲಿ ಸಮುದ್ರ ಮಧ್ಯಕ್ಕೆ ತೆರಳಿದ ಪಾಂಡ್ಯ, ನತಶಾಗೆ ಪ್ರಪೋಸ್ ಮಾಡಿದ್ದರು. ಇದರೊಂದಿಗೆ ಪಾಂಡ್ಯ ಎಂಗೇಜ್ ಆಗಿರುವ ವಿಷಯ ಬಹಿರಂಗವಾಗಿತ್ತು.ಇದರ ಬೆನ್ನಲ್ಲೇ ನಾವಿಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ಅಲ್ಲದೆ ಈ ಸೆಲೆಬ್ರಿಟಿ ಜೋಡಿಯ ವಿವಾಹದ ಫೋಟೋ ಕೂಡ ಲಾಕ್ಡೌನ್ ಸಮಯದಲ್ಲಿ ವೈರಲ್ ಆಗಿತ್ತು.
ಮಗು ಹುಟ್ಟಿದ ಬೆನ್ನಲ್ಲೇ ಮುಂಬೈ ತಂಡದಲ್ಲಿ ಆಡಲು ಪಾಂಡ್ಯ ಯುಎಇಗೆ ತೆರಳಿದ್ದರು. ಅಲ್ಲಿ, ತೆರಳುವುದಕ್ಕೂ ಮೊದಲು ಮಾತನಾಡಿದ್ದ ಅವರು, ನಾನು ಒಂದುವರೆ ತಿಂಗಳು ಕುಟುಂಬವನ್ನು ಬಿಟ್ಟಿರುತ್ತಿದ್ದೇನೆ. ನತಾಶಾ ಹಾಗೂ ಮಗ ಅಗಸ್ತ್ಯನನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ, ಇಷ್ಟು ದಿನ ಕುಟುಂಬವನ್ನು ಬಿಟ್ಟಿದ್ದಕ್ಕೆ ಇಂದು ಅರ್ಥ ಸಿಗಲಿದೆ ಎಂದು ಅವರು ಹೇಳಿದ್ದರು. ಈ ಮೂಲಕ ಕಪ್ ಎತ್ತುವ ಸೂಚನೆ ನೀಡಿದ್ದರು.
ಈಗ ಅಂದುಕೊಂಡಂತೆಯೇ ಮುಬೈ ಇಂಡಿಯನ್ಸ್ ಕಪ್ ಗೆದ್ದಿದೆ. ಕಪ್ ಗೆದ್ದ ನಂತರದಲ್ಲಿ ಪೋಸ್ಟ್ ಮಾಡಿರುವ ಅವರು, ಇದು ಅಗಸ್ತ್ಯನಿಗೆ ಎಂದು ಹೇಳಿದ್ದಾರೆ. ಈ ಮೂಲಕ ಗೆಲುವನ್ನು ಮಗನಿಗೆ ಅರ್ಪಣೆ ಮಾಡಿದ್ದಾರೆ.
Published by:
Rajesh Duggumane
First published:
November 11, 2020, 11:04 AM IST