ಮುಂಬೈ: ಜಸ್ಪ್ರೀತ್ ಬುಮ್ರಾ ಸದ್ಯ ವಿಶ್ವದ ಅತ್ಯಂತ ಮಾರಕ ಬೌಲರ್ಗಳಲ್ಲಿ ಒಬ್ಬರೆನಿಸಿದ್ದಾರೆ. ಕ್ರಿಕೆಟ್ನ ಎಲ್ಲಾ ಮಾದರಿ ಆಟಕ್ಕೂ ಹೇಳಿ ಮಾಡಿಸಿದ ಬೌಲರ್ ಅವರು. ಆಟದ ಯಾವುದೇ ಹಂತದಲ್ಲೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲ ಕೌಶಲ್ಯ, ಸಾಮರ್ಥ್ಯ ಇರುವ ಬೌಲರ್ ಅವರು. ಹೊಸ ಚೆಂಡಿರಲಿ, ಹಳೆಯ ಚೆಂಡಿರಲಿ ಇವರು ಬ್ಯಾಟ್ಸ್ಮನ್ ಪಾಲಿಗೆ ಯಾವಾಗಲೂ ಮಾರಕವೇ. ಹೀಗಾಗಿ, ಮೂರು ಮಾದರಿಯ ಕ್ರಿಕೆಟ್ನಲ್ಲೂ ಇವರು ಪರಿಣಾಮಕಾರಿ ಬೌಲರ್ ಆಗಿದ್ಧಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೂ ಇಂಥದ್ದೊಬ್ಬ ಬೌಲರ್ ಇದ್ದಾರೆ ಎಂದು ಆಶೀಶ್ ನೆಹ್ರಾ ಹೇಳುತ್ತಾರೆ. ಬುಮ್ರಾರಂಥ ಆ ಬೌಲರ್ ಭಾರತೀಯನೇ ಎಂಬುದು ಇಲ್ಲಿ ವಿಶೇಷ. ಆರ್ಸಿಬಿಯಲ್ಲಿರುವ ಭಾರತದ ಇಬ್ಬರು ಪರಿಣಾಮಕಾರಿ ವೇಗಿಗಳೆಂದರೆ ಅದು ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್. ನೆಹರಾ ಪ್ರಕಾರ ಈ ಇಬ್ಬರಲ್ಲಿ ಯಾರು ಬುಮ್ರಾ ಮೀರಿಸುವ ಟ್ಯಾಲೆಂಟ್ ಹೊಂದಿದ್ಧಾರೆ?
ಬಹಳ ಆಕ್ರಮಣಕಾರಿ ಬೌಲರ್ ಎನಿಸಿರುವ ಮೊಹಮ್ಮದ್ ಸಿರಾಜ್ ಅವರೇ ಅತ್ಯುತ್ತಮ ಬೌಲಿಂಗ್ ಕೌಶಲ್ಯ ಹೊಂದಿರುವ ಬೌಲರ್ ಎನ್ನುತ್ತಾರೆ ನೆಹ್ರಾ. ಬುಮ್ರಾ ಅವರು ಬೌಲಿಂಗ್ ಕೌಶಲ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನ ಮೀರಿಸುತ್ತಾರೆ ಎಂದು ಮಾಜಿ ವೇಗದ ಬೌಲರ್ ಆಶೀಶ್ ನೆಹ್ರಾ ಹೇಳುತ್ತಾರೆ.
“ನೀವು ಬೌಲಿಂಗ್ ಸ್ಕಿಲ್ ಬಗ್ಗೆ ಹೇಳಿದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಇಂಥದ್ದೊಂದು ಅನಿಸಿಕೆ ನನಗಿದೆ. ಬೌಲರ್ಗಳ ವಿಷಯಕ್ಕೆ ಬಂದರೆ ಎಲ್ಲರೂ ಜಸ್ಪ್ರೀತ್ ಬುಮ್ರಾ ಬಗ್ಗೆ ಮಾತನಾಡುತ್ತಾರೆ. ಆದರೆ, ಬೌಲಿಂಗ್ ಕೌಶಲ್ಯ ನೋಡಿದರೆ ಯಾವುದೇ ಮಾದರಿ ಕ್ರಿಕೆಟ್ನಲ್ಲೂ ಬುಮ್ರಾಗಿಂತ ಸಿರಾಜ್ ಕಡಿಮೆ ಏನಿಲ್ಲ” ಎಂದು ಕ್ರಿಕ್ ಬಜ್ ವೆಬ್ಸೈಟ್ನಲ್ಲಿ ಆಶೀಶ್ ನೆಹರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಒಂದೆರಡು ವರ್ಷಗಳ ಹಿಂದೆ ಮೊಹಮ್ಮದ್ ಸಿರಾಜ್ ಇಂಡಿಯಾ ಎ ತಂಡಕ್ಕೆ ಆಡುವಾಗ ಪ್ರತಿ ಪಂದ್ಯದಲ್ಲೂ ಐದಾರು ವಿಕೆಟ್ ಪಡೆಯುತ್ತಿದ್ದುದು ಕ್ರಿಕೆಟ್ ವಲಯದಲ್ಲಿ ಚರ್ಚೆಯ ವಿಷಯವಾಗಿತ್ತು. ಒಳ್ಳೆಯ ರೆಡ್ ಬಾಲ್ (ಟೆಸ್ಟ್ ಕ್ರಿಕೆಟ್) ಬೌಲರ್ ಆದವ ವೈಟ್ ಬಾಲ್ (ಸೀಮಿತ ಓವರ್ಗಳ ಕ್ರಿಕೆಟ್) ಬೌಲರ್ ಆಗಿಯೂ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ” ಎಂದು ನೆಹ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: R Ashwin - ಕೋವಿಡ್ ಸಂಕಷ್ಟದಲ್ಲಿ ಕುಟುಂಬದವರಿಗೆ ನೆರವು – ಐಪಿಎಲ್ ತೊರೆದ ಆರ್ ಅಶ್ವಿನ್
ಜಮ್ಮು-ಕಾಶ್ಮೀರ ರಾಜ್ಯದ 27 ವರ್ಷದ ಮೊಹಮ್ಮದ್ ಸಿರಾಜ್ ಅವರು ಫಿಟ್ನೆಸ್ ಮತ್ತು ಆಟ ಸಂಬಂಧಿತ ಬುದ್ಧಿವಂತಿಕೆಯ ಮಟ್ಟವನ್ನು ಹೆಚ್ಚಿಸಬೇಕಿದೆ. ಇವೆರಡು ಅಂಶವನ್ನ ಸರಿಪಡಿಸಿಕೊಂಡರೆ ಮೊಹಮ್ಮದ್ ಸಿರಾಜ್ ಅವರಿಗೆ ಯಶಸ್ಸಿನ ನಾಗಾಲೋಗಟಕ್ಕೆ ತಡೆ ಇರುವುದಿಲ್ಲ ಎಂಬುದು ನೆಹ್ರಾ ಸಲಹೆ.
ಕೆಲ ಬೌಲರ್ಗಳನ್ನ ಟಿ20ಗೆ ಮಾತ್ರ ಒಳಗೊಳ್ಳಲು ಸಾಧ್ಯವಿರುತ್ತದೆ. ಆದರೆ, ಸಿರಾಜ್ ಎಲ್ಲಾ ಮಾದರಿಯ ಕ್ರಿಕೆಟ್ಗೂ ಒಳ್ಳೆಯ ಬೌಲರ್. ಅವರ ಬೌಲಿಂಗ್ ಕೌಶಲ್ಯದಲ್ಲಿ ಕೊರತೆ ಇಲ್ಲ. ಎಲ್ಲಾ ರೀತಿಯ ಬೌಲಿಂಗ್ ವೇರಿಯೇಷನ್ ಅವರಿಗೆ ಇದೆ. ವೇಗವೂ ಬಹಳ ಇದೆ. ಸ್ಲೋ ಬಾಲ್ ಎಸೆಯುವುದರಲ್ಲೂ ಪರಿಣಿತಿ ಇದೆ. ಹೊಸ ಚೆಂಡಿಗ ಗತಿ ಹೆಚ್ಚಿಸಬಲ್ಲರು. ಅವರು ಫಿಟ್ನಸ್ ಮೇಂಟೈನ್ ಮಾಡಬೇಕು. ಹಾಗೂ ಆಟದ ಚಾಕಚಕ್ಯತೆ ಹೆಚ್ಚಿಸಿಕೊಳ್ಳಬೇಕು. ಇವೆರಡು ಕೊರತೆಯನ್ನ ಅವರು ನೀಗಿಸಿಕೊಳ್ಳಬೇಕು ಅಷ್ಟೇ ಎಂದು ಮಾಜಿ ಕ್ರಿಕೆಟಿಗರ ತಿಳಿಸುತ್ತಾರೆ.
ಪ್ರತಿಭಾನ್ವಿತ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ ಭಾರತವನ್ನೂ ಮೂರು ಮಾದರಿಯ ಕ್ರಿಕೆಟ್ನಲ್ಲೂ ಪ್ರತಿನಿಧಿಸಿದ್ಧಾರೆ. ಐದು ಟೆಸ್ಟ್ ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದಾರೆ. ಮೂರು ಟಿ20 ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 168 ರನ್ ಗಳಿಸಿದ್ಧಾರೆ. ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಅವರು ಐದು ಪಂದ್ಯಗಳಿಂದ ಐದು ವಿಕೆಟ್ ಗಳಿಸಿದ್ದಾರೆ. 15 ವಿಕೆಟ್ ಗಳಿಸಿರುವ ಹರ್ಷಲ್ ಪಟೇಲ್ ಅವರ ಸಾಧನೆಗೆ ಹೋಲಿಸಿದರೆ ಸಿರಾಜ್ ಗಳಿಸಿರುವ ಐದು ವಿಕೆಟ್ ಕಡಿಮೆ ಸಂಖ್ಯೆಯೇ. ಆದರೆ, ಸಿರಾಜ್ ಶಕ್ತಿ ಇರುವುದು ಅವರು ಬ್ಯಾಟುಗಾರರನ್ನು ರನ್ ಗಳಿಸದಂತೆ ಸಮರ್ಥವಾಗಿ ಕಟ್ಟಿಹಾಕಬಲ್ಲುರು. ಐದು ಪಂದ್ಯಗಳಿಂದ 19 ಓವರ್ ಬೌಲ್ ಮಾಡಿ ಅವರು ನೀಡಿದ ರನ್ 123 ಮಾತ್ರ. ಹೀಗಾಗಿ, ಆರ್ಸಿಬಿಯ ಸಕ್ಸಸ್ ಸ್ಟೋರಿಯಲ್ಲಿ ಸಿರಾಜ್ ಪಾತ್ರವೂ ಮಹತ್ವವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ