KL Rahul: ಧೋನಿ ಬಿರುದು ರಾಹುಲ್​ಗೆ ನೀಡಿದಾಗ ಹೀಗಿತ್ತು ಪ್ರತಿಕ್ರಿಯೆ..!

ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಸೂಪರ್ ಓವರ್​ನಲ್ಲಿ ಕ್ವಿಂಟನ್ ಡಿಕಾಕ್ ಅವರನ್ನು ಅದ್ಭುತವಾಗಿ ರನೌಟ್ ಮಾಡಿದ್ದ ರಾಹುಲ್ ಅವರನ್ನು ಕೆಲವರು ಧೋನಿಗೆ ಹೋಲಿಸಿದ್ದರು.

Dhoni-Rahul

Dhoni-Rahul

 • Share this:
  8 ಬಾರಿ ಐಪಿಎಲ್ ಫೈನಲ್ ಆಡಿದ ತಂಡ, ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಎಂದರೆ ಥಟ್ಟನೆ ನೆನಪಾಗುವುದು ಚೆನ್ನೈ ಸೂಪರ್ ಕಿಂಗ್ಸ್. ಈ ಯೆಲ್ಲೋ ಆರ್ಮಿಯನ್ನು ಆರಂಭದಿಂದಲೂ ಮುನ್ನಡೆಸುತ್ತಿರುವುದು ಮಹೇಂದ್ರ ಸಿಂಗ್ ಧೋನಿ ಎಂಬ ಯಶಸ್ವಿ ನಾಯಕ. ಇಂತಹದೊಂದು ನಾಯಕತ್ವದ ಗುಣಗಳಿರುವುದರಿಂದಲೇ ಧೋನಿಗೆ ಅಭಿಮಾನಿಗಳು ಪ್ರೀತಿಯಿಂದ ಥಲಾ (ನಾಯಕ) ಎಂಬ ಬಿರುದು ನೀಡಿದ್ದರು. ಇದೇ ಬಿರುದು ಇದೀಗ ಕೆಎಲ್ ರಾಹುಲ್​ಗೆ ಸಿಕ್ಕರೆ..!

  ಹೌದು, ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಸೂಪರ್ ಓವರ್​ನಲ್ಲಿ ಕ್ವಿಂಟನ್ ಡಿಕಾಕ್ ಅವರನ್ನು ಅದ್ಭುತವಾಗಿ ರನೌಟ್ ಮಾಡಿದ್ದ ರಾಹುಲ್ ಅವರನ್ನು ಕೆಲವರು ಧೋನಿಗೆ ಹೋಲಿಸಿದ್ದರು. ಮಿಂಚಿನ ವೇಗದಲ್ಲಿ ಕೀಪಿಂಗ್ ಮಾಡುವ ಎಂಎಸ್​ಡಿಯ ಉತ್ತರಾಧಿಕಾರಿ ಎಂಬಂತೆ ಕೆಎಲ್​ಆರ್​ ಅನ್ನು ಸೋಷಿಯಲ್ ಮೀಡಿಯಾದಲ್ಲಿ ವರ್ಣಿಸಲಾಗಿತ್ತು. ಅದರಲ್ಲೂ ಅಭಿಮಾನಿಯೊಬ್ಬ ನನ್ನ ನೆಚ್ಚಿನ ಥಲಾ ಎಂದು ರಾಹುಲ್ ಅವರ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿದ್ದರು.  ಇದನ್ನು ಗಮಿಸಿದ ಕೆಎಲ್ಆರ್ ಅಭಿಮಾನಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರೇ ಥಲಾ ಇರುವುದು. ಅವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎನ್ನುವ ಮೂಲಕ ಥಲಾ ಎಂದು ನೀಡಿರುವ ಬಿರುದನ್ನು ರಾಹುಲ್ ನಯವಾಗಿ ತಿರಸ್ಕರಿಸಿದ್ದಾರೆ.  ಈ ಮೂಲಕ ಕ್ರಿಕೆಟ್ ಅಂಗಳದಲ್ಲಿ ಒಬ್ಬರೇ ಥಲಾ ಇರುವುದು ಅದು ಯಾವತ್ತೂ ಮಹೇಂದ್ರ ಸಿಂಗ್ ಧೋನಿ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!
  Published by:zahir
  First published: