Kieron Pollard| ವಿಶ್ವಕಪ್​ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ, ಐಪಿಎಲ್ ಪ್ರದರ್ಶನ ಬಗ್ಗೆ ಮಾತ್ರ ಗಮನ; ಪೊಲಾರ್ಡ್

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2021 ರಲ್ಲಿ ನನ್ನ ಫ್ರಾಂಚೈಸಿಗಾಗಿ ಉತ್ತಮ ಪ್ರದರ್ಶನ ನೀಡುವುದೇ ಪ್ರಸ್ತುತ ನನ್ನ ಮುಂದಿರುವ ಪ್ರಮುಖ ಆದ್ಯತೆಯಾಗಿರುವ ಕಾರಣ ಟಿ 20 ವಿಶ್ವಕಪ್ ಬಗ್ಗೆ ಈಗಲೇ ಮಾತನಾಡುವುದು ಸದ್ಯಕ್ಕೆ ಅಪ್ರಸ್ತುತವಾಗಿದೆ ಎಂದು ಕೀರನ್ ಪೊಲಾರ್ಡ್ ತಿಳಿಸಿದ್ದಾರೆ.

ಕೀರನ್ ಪೊಲಾರ್ಡ್

ಕೀರನ್ ಪೊಲಾರ್ಡ್

  • Share this:
    ಅಬುಧಾಬಿ: "ಟಿ20 ವಿಶ್ವಕಪ್ ಬಗ್ಗೆ (T20 World Cup) ಮಾತನಾಡಲು ಇದು ಸೂಕ್ತ ಸಮಯವಲ್ಲ. ಈಗ ಏನಿದ್ದರೂ ಐಪಿಎಲ್​ 2021 ಬಗ್ಗೆ ಮಾತ್ರ ನಾನು ಗಮನ ಹರಿಸುತ್ತಿದ್ದು, ಕಪ್ ಗೆಲ್ಲುವುದೇ ನಮ್ಮ ಗುರಿ" ಎಂದು ಮುಂಬೈ ಇಂಡಿಯನ್ಸ್ (Mumbai Indians) ತಂಡದ ಆಲ್​ರೌಂಡರ್ ಕೀರನ್ ಪೊಲಾರ್ಡ್ (Kieron Pollard) ತಿಳಿಸಿದ್ದಾರೆ. ಮಂಗಳವಾರ ಅಬುಧಾಬಿಯಲ್ಲಿ (Abudhabi) ಪಂಜಾಬ್ ಕಿಂಗ್ಸ್​ (Punjab Kings) ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ರೋಚಕ ಗೆಲುವು ಸಾಧಿಸಿದೆ. 136 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ಮುಂಬೈ ಒಂದು ಹಂತದಲ್ಲಿ ಸೋಲಿನ ಬೀತಿಗೆ ಸಿಲುಕಿತ್ತು. ಆದರೆ, ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಕೀರನ್ ಪೊಲಾರ್ಡ್​ ಜೋಡಿ ಕೊನೆಯ ಓವರ್​ಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಮುಂಬೈ ರೋಚಕ ಗೆಲುವು ಸಾಧಿಸಲು ಕಾರಣರಾಗಿದ್ದರು.

    ಕೊನೆಯ ಮೂರು ಓವರ್​ಗಳಿಗೆ 39 ರನ್ ಬಾರಿಸಿದ ಈ ಜೋಡಿ 19ನೇ ಓವರ್​ನಲ್ಲೇ ಮುಂಬೈಗೆ ಗೆಲುವನ್ನು ತಂದುಕೊಟ್ಟಿತ್ತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 30 ಚೆಂಡಿನಲ್ಲಿ 6 ಬೌಂಡರಿ 2 ಸಿಕ್ಸರ್ ಸಹಿತ 40 ರನ್ ಬಾರಿಸಿದ್ದರೆ, ಕೀರನ್ ಪೊಲಾರ್ಡ್ ಕೇವಲ 7 ಎಸೆತಗಳಲ್ಲಿ ತಲಾ 1 ಬೌಂಡರಿ-ಸಿಕ್ಸರ್​ ಸಹಿತ 15 ರನ್ ಬಾರಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಟಿ20 ವಿಶ್ವಕಪ್ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪೊಲಾರ್ಡ್, "ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರಲ್ಲಿ ನನ್ನ ಫ್ರಾಂಚೈಸಿಗಾಗಿ ಉತ್ತಮ ಪ್ರದರ್ಶನ ನೀಡುವುದೇ ಪ್ರಸ್ತುತ ನನ್ನ ಮುಂದಿರುವ ಪ್ರಮುಖ ಆದ್ಯತೆಯಾಗಿರುವ ಕಾರಣ ಟಿ 20 ವಿಶ್ವಕಪ್ ಬಗ್ಗೆ ಈಗಲೇ ಮಾತನಾಡುವುದು ಸದ್ಯಕ್ಕೆ ಅಪ್ರಸ್ತುತವಾಗಿದೆ" ಎಂದು ತಿಳಿಸಿದ್ದಾರೆ.

    "ಐಪಿಎಲ್​ನಲ್ಲಿ ತಂಡದ ಗೆಲುವಿಗೆ ನನ್ನ ವ್ಯಯಕ್ತಿಕ ಪ್ರದರ್ಶನವೂ ಅಗತ್ಯವಾಗಿದೆ. ಹೀಗಾಗಿ ಸಂದಿಗ್ಧ ಸಂದರ್ಭದಲ್ಲಿ ನನ್ನ ಫ್ರಾಂಚೈಸಿಗೆ ನನ್ನಿಂದ ಹೇಗೆ ಸಹಕಾರ ನೀಡಬಹುದು, ಗೆಲುವಿಗೆ ಹೇಗೆ ನನ್ನ ಪ್ರದರ್ಶನ ನೆರವಾಗಬಲ್ಲದು ಎಂಬುದರ ಬಗ್ಗೆ ಮಾತ್ರ ನನ್ನ ಗಮನವಿರಲಿದೆ. ಹೀಗಾಗಿ ವಿಶ್ವಕಪ್​ ಬಗ್ಗೆ ಈಗಲೇ  ಮಾತನಾಡುವುದು ಸರಿಯಲ್ಲ. ಇನ್ನೂಈ ಟೂರ್ನಿಯಲ್ಲಿ ತಂಡದ ಯುವ ಪಡೆ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಐಪಿಎಲ್ ಟ್ರೋಫಿ ಗೆಲ್ಲುವ ವಿಶ್ವಾಸ ಇದೆ" ಎಂದು ಪೊಲಾರ್ಡ್ ತಿಳಿಸಿದ್ದಾರೆ.

    ಇದನ್ನೂ ಓದಿ: MI Skipper Spotted in Pakistan| ಸಸ್ತಾ ರೋಹಿತ್ ಶರ್ಮಾ; ಪಾಕಿಸ್ತಾನದಲ್ಲಿ ಕಾಣಿಸಿಕೊಂಡರಾ ಮುಂಬೈ ಇಂಡಿಯನ್ಸ್​ ನಾಯಕ?

    ಇದೇ ಸಂದರ್ಭದಲ್ಲಿ ಯುಎಇ ವಾತಾವರಣಕ್ಕೆ ಹೊಂದಿಕೊಳ್ಳುವ ಬಗ್ಗೆಯೂ ಮಾತನಾಡಿರುವ ಪೊಲಾರ್ಡ್, "ಆಟಗಾರರಿಗೆ ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ. ಆದರೆ, ಐಪಿಎಲ್​ಗಾಗಿ ಈಗಾಗಲೇ ಯುಎಇ ಅಂಗಳದಲ್ಲಿ ಆಟವಾಡಿರುವುದು ನಮಗೆ ಮತ್ತಷ್ಟು ಅನುಕೂಲಕರವಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
    Published by:MAshok Kumar
    First published: