IPL

  • associate partner

T20 World Cup: ಐಸಿಸಿ ಟಿ-20 ವಿಶ್ವಕಪ್ ರದ್ದು: ವಿಶ್ವಶ್ರೇಷ್ಠ ಕ್ರಿಕೆಟಿಗರ ಭವಿಷ್ಯ ಈಗ ಅತಂತ್ರ!

ಟಿ-20 ವಿಶ್ವಕಪ್​​ನಲ್ಲಿ ದೇಶವನ್ನು ಪ್ರತಿನಿಧಿಸಿ, ಆ ಮೂಲಕ ನಿವೃತ್ತಿ ಹೇಳುವ ಆಲೋಚನೆಯಲ್ಲಿದ್ದ ಹಿರಿಯ ಕ್ರಿಕೆಟಿಗರು ಸದ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ. ಆ ಪಟ್ಟಿಯಲ್ಲಿರುವ ಖ್ಯಾತನಾಮರು ಯಾರೆಲ್ಲಾ ಅನ್ನುವ ವಿಸೃತ ವರದಿ ಇಲ್ಲಿದೆ.

news18-kannada
Updated:July 24, 2020, 3:46 PM IST
T20 World Cup: ಐಸಿಸಿ ಟಿ-20 ವಿಶ್ವಕಪ್ ರದ್ದು: ವಿಶ್ವಶ್ರೇಷ್ಠ ಕ್ರಿಕೆಟಿಗರ ಭವಿಷ್ಯ ಈಗ ಅತಂತ್ರ!
ಟಿ-20 ವಿಶ್ವಕಪ್
  • Share this:
ಅಳೆದು-ತೂಗಿ, ತಿಂಗಳುಗಳ ದೀರ್ಘ ಸಮಯ ತೆಗೆದುಕೊಂಡು ಐಸಿಸಿ ಈ ವರ್ಷದ ಟಿ-20 ವಿಶ್ವಕಪ್ ಟೂರ್ನಿಯನ್ನು ಮುಂದೂಡಿದೆ. ಈ ನಿರ್ಧಾರ ಹೊರಬಿದ್ದು ಎರಡು ಮೂರು ಕಳೆದಿದ್ದು, ಐಪಿಎಲ್ ಆಯೋಜನೆಯ ಸುದ್ದಿ ಎಲ್ಲೆಡೆ ಕಳೆಗಟ್ಟಿದೆ‌. ಆದರೆ, ಐಸಿಸಿಯ ಇದೇ ನಿರ್ಧಾರ ಸದ್ಯ ಹಲವು ಖ್ಯಾತನಾಮ ಕ್ರಿಕೆಟಿಗರ ಭವಿಷ್ಯಕ್ಕೆ ಮುಳ್ಳಾಗಿದೆ.

ಟಿ-20 ವಿಶ್ವಕಪ್​​ನಲ್ಲಿ ದೇಶವನ್ನು ಪ್ರತಿನಿಧಿಸಿ, ಆ ಮೂಲಕ ನಿವೃತ್ತಿ ಹೇಳುವ ಆಲೋಚನೆಯಲ್ಲಿದ್ದ ಹಿರಿಯ ಕ್ರಿಕೆಟಿಗರು ಸದ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ. ಆ ಪಟ್ಟಿಯಲ್ಲಿರುವ ಖ್ಯಾತನಾಮರು ಯಾರೆಲ್ಲಾ ಅನ್ನುವ ವಿಸೃತ ವರದಿ ಇಲ್ಲಿದೆ.

ಎಂ.ಎಸ್.ಧೋನಿ

ವಿಶ್ವಶ್ರೇಷ್ಠ ನಾಯಕ ಹಾಗೂ ಟೀಂ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.ಧೋನಿ ಭಾರತ ತಂಡ ಪ್ರತಿನಿಧಿಸಿ ಒಂದು ವರ್ಷವೇ ಕಳೆದಿದೆ. ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಅಭಿಮಾನಿಗಳು ಮಾಹಿಯನ್ನು ಮೈದಾನದಲ್ಲಿ ನೋಡಿಲ್ಲ. ಜುಲೈ ಏಳರಂದು 39 ವಸಂತಕ್ಕೆ ಕಾಲಿಟ್ಟಿರುವ ಧೋನಿ ಟಿ-20 ವಿಶ್ವಕಪ್‌ ಮೂಲಕ‌ ನಿವೃತ್ತಿ ಹೇಳಲಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಆದರೆ ಸದ್ಯದ ಬೆಳವಣಿಗೆ ಎಲ್ಲವನ್ನೂ ಅತಂತ್ರವಾಗಿಸಿದೆ.

IPL 2020: ಯುಎಇಗೆ ಐಪಿಎಲ್ ಸ್ಥಳಾಂತರಿಸಿದ್ದಕ್ಕೆ ಭಾರತೀಯರಿಂದಲೇ ವಿರೋಧ; ಕಾರಣವೇನು ಗೊತ್ತೇ?

ಕ್ರಿಸ್ ಗೇಲ್

ಟಿ-20 ಲೀಗ್ ಮೂಲಕವೇ ಕ್ರಿಕೆಟ್ ಪ್ರಿಯರ‌ ಮನಗೆದ್ದಿರುವ ಕ್ರಿಸ್ ಗೇಲ್ ಸಹ ನಿವೃತ್ತಿಗಾಗಿ ಒಂದೊಳ್ಳೆ ಸಮಯಕ್ಕಾಗಿ ಕಾಯುತ್ತಿದ್ದರು. ಕಳೆದ ಮಾರ್ಚ್​​ನಲ್ಲಿ ರಾಷ್ಟ್ರೀಯ ತಂಡದ ಪರ ಕೊನೆಯ ಟಿ-20 ಆಡಿದ್ದ ಗೇಲ್, ಟಿ-20 ವಿಶ್ವಕಪ್ ನಂತರ ವಿದಾಯ ಹೇಳುವ ಇಚ್ಛೆ ಹೊಂದಿದ್ದರು. ಸದ್ಯ 41 ವರ್ಷ ವಯಸ್ಸಿನ ಗೇಲ್ ಕರಿಯರ್ ತೂಗುಯ್ಯಾಲೆಯಲ್ಲಿದೆ.ಡ್ವೇಯ್ನ್ ಬ್ರಾವೋ

ಐಸಿಸಿಯ ನಿರ್ಧಾರ ವಿಂಡೀಸ್ ತಂಡದ ಆಲ್​ರೌಂಡರ್ ಡ್ವೇಯ್ನ್ ಬ್ರಾವೋರ ಕರಿಯರ್ ಮೇಲೆ‌ ಪರಿಣಾಮ‌ ಬೀರಿದೆ. ನಿವೃತ್ತಿ ನೀಡಿ ಆ ಬಳಿಕ ಟಿ-20 ವಿಶ್ವಕಪ್​ನಲ್ಲಿ ಭಾಗವಹಿಸಲು ನಿವೃತ್ತಿ ಹಿಂಪಡೆದಿದ್ದ 37 ವರ್ಷದ ಬ್ರಾವೋ‌ ಪರಿಸ್ಥಿತಿ ಸಹ ಭಿನ್ನವಾಗೇನೂ ಇಲ್ಲ.

ಎಬಿ ಡಿವಿಲಿಯರ್ಸ್

ದಕ್ಷಿಣ ಆಫ್ರಿಕಾ ತಂಡದ ಮಿ.360 ವಿಲಿಯರ್ಸ್ ಸಹ ಟಿ-20 ವಿಶ್ವಕಪ್ ಟೂರ್ನಿಗಾಗಿ ಕಾಯುತ್ತಿದ್ದ ಮತ್ತೋರ್ವ ಕ್ವಾಲಿಟಿ ಪ್ಲೇಯರ್. ವಿಶ್ವಕಪ್​ಗಾಗಿ ನಿವೃತ್ತಿ ಹಿಂಪಡೆದಿದ್ದ  37 ವರ್ಷದ ವಿಲಿಯರ್ಸ್ ಕರಿಯರ್ ಮೇಲೂ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ.

ಇನ್ನು ವಿಲಿಯರ್ಸ್ ಜೊತೆಗೆ ದ.ಆಫ್ರಿಕಾ ತಂಡದ 37 ವರ್ಷದ ಡೇಲ್ ಸ್ಟೇನ್ ಹಾಗೂ 41ರ ಹರೆಯದ ಇಮ್ರಾನ್ ತಾಹೀರ್ ನಿವೃತ್ತಿಯೂ ತೂಗುಯ್ಯಾಲೆಯಲ್ಲಿದೆ.

ಲಸಿತ್ ಮಲಿಂಗಾ

" ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು ನಾಕೌಟ್ ಹಂತಕ್ಕೆ ಕೊಂಡೊಯ್ಯಬೇಕು ಎನ್ನುವುದು ನನ್ನ ಕರಿಯರ್ ಟಾರ್ಗೆಟ್. ಇದು ಸಾಧ್ಯವಾದ ಮರುಕ್ಷಣವೇ ನಾನು ನಿವೃತ್ತಿ ಘೋಷಿಸಬಲ್ಲೆ" ಎಂದು ಮಲಿಂಗಾ ಹೇಳಿದ್ದರು. ವಿಭಿನ್ನ ಕೇಶವಿನ್ಯಾಸ, ಸದಾ ನಗುಮುಖದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವ ದ್ವೀಪರಾಷ್ಟ್ರದ ವೇಗಿ ಲಸಿತ್ ಮಲಿಂಗಾ ತಮ್ಮ ಮಾತನ್ನು ಕಾರ್ಯರೂಪಕ್ಕೆ ತರಲು ಇನ್ನೊಂದು ವರ್ಷ ಕಾಯಲೇಬೇಕು. ಇದಕ್ಕಾಗಿ 37 ವರ್ಷದ ಮಲಿಂಗಾ ಇನ್ನೊಂದು ವರ್ಷ ಫಾರ್ಮ್​​ನಲ್ಲಿರಬೇಕಾದ ಸವಾಲೂ ಇದೆ.

IPL 2020: ತುರ್ತು ಪರತಿಸ್ಥಿತಿಯಲ್ಲೂ ಐಪಿಎಲ್ ನಡೆಸೋಕೆ ಬಿಸಿಸಿಐ ಆಸಕ್ತಿ ತೋರ್ತಿರೋದೇಕೆ ಗೊತ್ತಾ?; ಇಲ್ಲಿದೆ ವಿವರಣೆ

ಶೋಯೆಬ್ ಮಲಿಕ್ ಮತ್ತು‌ ಮೊಹಮ್ಮದ್ ಹಫೀಜ್

ಚುಟುಕು ಮಾದರಿಯ ಬಲಿಷ್ಠ ತಂಡಗಳಲ್ಲಿ ಒಂದಾದ ಪಾಕಿಸ್ತಾನದ ಇಬ್ಬರು ಆಟಗಾರರು ನಿವೃತ್ತಿಯ ಸನಿಹಕ್ಕೆ ಬಂದಿದ್ದಾರೆ. 38 ವರ್ಷದ ಶೋಯೆಬ್ ಮಲಿಕ್ ಹಾಗೂ 39 ವರ್ಷದ ಮೊಹಮ್ಮದ್ ಹಫೀಜ್ ಹಲವು ಸಮಯ ಟಿ-20 ತಂಡದಿಂದ ಕಡೆಗಣಿಸಲ್ಪಟ್ಟಿದ್ದರು. ಟಿ-20 ವಿಶ್ವಕಪ್ ಯಾವಾಗ ಆಯೋಜನೆಯಾದರೂ ತಾನು ಲಭ್ಯವಿರುತ್ತೇನೆ ಎಂದು ಹಫೀಜ್ ಹೇಳಿದ್ದಾರೆ. ಮಲಿಕ್ ಈ ಬಗ್ಗೆ ಏನೂ ಬಹಿರಂಗ ಹೇಳಿಕೆ ನೀಡಿಲ್ಲ.

ವರದಿ: ಕೌಶಿಕ್ ಕೆ.ಎಸ್
Published by: Vinay Bhat
First published: July 24, 2020, 3:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading