CSK vs KKR: ಹರ್ಭಜನ್ ಸಿಂಗ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡ ಸುರೇಶ್‌ ರೈನಾ..!

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ  ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಿಂದ 400 ಕ್ಕೂ ಹೆಚ್ಚು ರನ್ ಬಾರಿಸಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 220 ರನ್‌ ಗಳಿಸಿತ್ತು. ಅದೃಷ್ಟವಶಾತ್, ಧೋನಿ ಪಡೆ ಆ್ಯಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್ ಮತ್ತು ದಿನೇಶ್ ಕಾರ್ತಿಕ್ ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ ಪಂದ್ಯ ಗೆದ್ದುಕೊಂಡಿತು.

ಸುರೇಶ್ ರೈನಾ-ಹರ್ಭಜನ್‌ ಸಿಂಗ್

ಸುರೇಶ್ ರೈನಾ-ಹರ್ಭಜನ್‌ ಸಿಂಗ್

  • Share this:
ದೇಶದಲ್ಲಿ ಕೊರೊನಾ ಎರಡನೇ ಅಲೆಯ ನಡುವೆಯೂ ಐಪಿಎಲ್‌ 2021 ಪಂದ್ಯಾವಳಿ ನಡೆಯುತ್ತಿದೆ. ಸ್ಟೇಡಿಯಂಗಳಿಗೆ ಹೋಗಿ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಸಾಧ್ಯವಿಲ್ಲದಿದ್ದರೂ ತಮ್ಮ ಮನೆಯ ಟಿವಿಗಳಲ್ಲಿ ಅಥವಾ ಮೊಬೈಲ್‌ಗಳಲ್ಲಿ ತಮ್ಮ ನೆಚ್ಚಿನ ತಂಡ ಹಾಗೂ ನೆಚ್ಚಿನ ಆಟಗಾರರನ್ನು ಬೆಂಬಲಿಸಲು, ಅವರ ಆಟ ನೋಡಲು ಕ್ರಿಕೆಟ್‌ ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ತಮ್ಮ ನೆಚ್ಚಿನ ಪಂದ್ಯ ಗೆಲ್ಲುವುದರ ಜತೆಗೆ ಆಟಗಾರರ ಹಾವಭಾವ, ವರ್ತನೆಗಳ ಬಗ್ಗೆಯೂ ಅವರು ಕುತೂಹಲದಿಂದ ನೋಡುತ್ತಿರುತ್ತಾರೆ. ಇದೇ ರೀತಿ, ಬುಧವಾರದ ಐಪಿಎಲ್ 2021 ಸ್ಪರ್ಧೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಕುತೂಹಲಕಾರಿ ಪಂದ್ಯವನ್ನು ಹೆಚ್ಚಿನ ಜನ ವೀಕ್ಷಿಸಿದ್ದರು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ  ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಿಂದ 400 ಕ್ಕೂ ಹೆಚ್ಚು ರನ್ ಬಾರಿಸಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 220 ರನ್‌ ಗಳಿಸಿತ್ತು. ಅದೃಷ್ಟವಶಾತ್, ಧೋನಿ ಪಡೆ
ಆ್ಯಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್ ಮತ್ತು ದಿನೇಶ್ ಕಾರ್ತಿಕ್ ಅವರ ಉತ್ತಮ ಬ್ಯಾಟಿಂಗ್ ಹೊರತಾಗಿಯೂ ಪಂದ್ಯ ಗೆದ್ದುಕೊಂಡಿತು. ಕೆಕೆಆರ್ 200 ಗಡಿ ದಾಟಿದರೂ, ಕೋಲ್ಕತಾ ನೈಟ್ ರೈಡರ್ಸ್ ಅನ್ನು 18 ರನ್‌ಗಳಿಂದ ಸಿಎಸ್‌ಕೆ ಸೋಲಿಸಿದರು.

ಸಿಎಸ್‌ಕೆ 3 ವಿಕೆಟ್‌ ನಷ್ಟಕ್ಕೆ 220 ರನ್ ಗಳಿಸಿತ್ತು ಮತ್ತು ಇದಕ್ಕೆ ಉತ್ತರವಾಗಿ ಕೋಲ್ಕತಾ ತಂಡದ ಬ್ಯಾಟಿಂಗ್ ವೇಳೆ ಆರಂಭದಲ್ಲಿ ದೀಪಕ್ ಚಹರ್ ಅವರ 29 ರನ್‌ಗೆ 4 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಮಾಡಿದಾಗ ಕೆಕೆಆರ್‌ 5 ವಿಕೆಟ್‌ ನಷ್ಟಕ್ಕೆ ಕೇವಲ 31 ರನ್ ಗಳಿಸಿದರು. ಆದರೆ, ರಸ್ಸೆಲ್ (22 ಬಾಲ್‌ಗೆ 54), ಕಮ್ಮಿನ್ಸ್ (34 ಬಾಲ್‌ಗೆ 66) ಮತ್ತು ಕಾರ್ತಿಕ್ (24 ಬಾಲ್‌ಗೆ 40) ರನ್‌ಗಳನ್ನು ಹೊಡೆದು ಪಂದ್ಯವನ್ನು ಗೆಲುವಿನ ಹಳಿಗೆ ಹತ್ತಿರ ತಂದಿದ್ದರು.

ಆದರೆ, ಇಷ್ಟು ಕುತೂಹಲಕಾರಿ ಹಾಗೂ ಉಗುರು ಕಚ್ಚುವ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಬುಧವಾರದ ಪಂದ್ಯದಲ್ಲೂ ಪ್ರಶಂಸಿಸಲು ಒಂದು ಹಗುರವಾದ ಕ್ಷಣವಿತ್ತು.

ಅದೇನೆಂದರೆ, ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಬಳಕೆದಾರರು ಹಂಚಿಕೊಂಡ ವಿಡಿಯೋದಲ್ಲಿ, ಸಿಎಸ್‌ಕೆಯ ಸುರೇಶ್ ರೈನಾ ಅವರು ಕೆಕೆಆರ್ ಆಟಗಾರ ಮತ್ತು ಅನುಭವಿ ಸ್ಪಿನ್ನರ್ ಹರ್ಭಜನ್‌ ಸಿಂಗ್ ಅವರನ್ನು ಸಮೀಪಿಸುತ್ತಿರುವುದನ್ನು ಮತ್ತು ನಂತರ ಅವರ ಪಾದಗಳನ್ನು ಗೌರವದಿಂದ ಸ್ಪರ್ಶಿಸುವುದನ್ನು ಕಾಣಬಹುದು.

ರೈನಾ ಅವರ ಈ ನಡೆಯಿಂದ ಹರ್ಭಜನ್ ಸ್ಪಷ್ಟವಾಗಿ ಆಶ್ಚರ್ಯಗೊಂಡರು. ಆದರೂ ಸಹ 2011 ರ ವಿಶ್ವಕಪ್ ತಂಡದ ಸಹ ಆಟಗಾರನನ್ನು ತಬ್ಬಿಕೊಂಡರು. ಈ ಬಗ್ಗೆ ಪೂರ್ವ-ಪಂದ್ಯದ ಕಾರ್ಯಕ್ರಮದ ನಿರೂಪಕರು, “ಇದು ಅವರ ನಡುವಿನ ಪ್ರೀತಿ, ಅವರು ಅನೇಕ ವರ್ಷಗಳಿಂದ ಒಟ್ಟಿಗೆ ಆಡಿದ್ದಾರೆ, ವಿಶ್ವಕಪ್ ಗೆದ್ದಿದ್ದಾರೆ, ಇದು ಪರಸ್ಪರ ಗೌರವ ಮತ್ತು ಹಲವಾರು ವರ್ಷಗಳ ಸಂಬಂಧವಾಗಿದೆ" ಎಂದು ಹೇಳಿದರು.

ಈ ಮಧ್ಯೆ, ಉಗುರು ಕಚ್ಚುವ ಗೆಲುವಿನೊಂದಿಗೆ, ಸಿಎಸ್‌ಕೆ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದ ನಂತರ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಇದಕ್ಕೂ ಮೊದಲು, ಫಾಫ್ ಡು ಪ್ಲೆಸಿಸ್ ಅವರ ಅಜೇಯ 95 (60 ಎಸೆತಗಳಲ್ಲಿ) ಮತ್ತು ರುತುರಾಜ್ ಗಾಯಕ್ವಾಡ್‌ (42 ಎಸೆತಗಳಲ್ಲಿ 64) ಅವರ 115 ರನ್‌ಗಳ ಸಹಭಾಗಿತ್ವದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) 220/3 ಕ್ಕೆ ಗಳಿಸಿತ್ತು.

ಬೌಲರ್ ಮತ್ತು ಬ್ಯಾಟ್ಸ್‌ಮನ್ ನಡುವೆ ಸ್ಪರ್ಧೆ ಇದ್ದುದರಿಂದ ಉದ್ವಿಗ್ನ ಕ್ಷಣಗಳಲ್ಲಿ ಶಾಂತವಾಗಿರುವುದು ಸುಲಭ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಪಂದ್ಯದ ಬಳಿಕ ಹಾಸ್ಯವಾಡಿದ್ದರು.

“ಈ ರೀತಿಯ ಆಟದಲ್ಲಿ ಶಾಂತವಾಗಿರಲು ತುಂಬಾ ಸುಲಭ. 15 - 16 ನೇ ಓವರ್‌ನಿಂದ ವೇಗದ ಬೌಲರ್ ಮತ್ತು ಬ್ಯಾಟ್ಸ್‌ಮನ್ ನಡುವೆ ಸ್ಪರ್ಧೆ ನಡೆಯುತ್ತಿತ್ತು. ನೀವು ಹೆಚ್ಚು ಮಾಡಲು ಸಾಧ್ಯವಿಲ್ಲ. ಇದು ಬ್ಯಾಟ್ಸ್‌ಮನ್ Vs ಬೌಲರ್ ವಿರುದ್ಧದ ಪಂದ್ಯ”. "ಗೆದ್ದ ತಂಡವು ಬಹುಶಃ ಸ್ವಲ್ಪ ಉತ್ತಮವಾಗಿ ಕಾರ್ಯಗತಗೊಳಿಸಿದ ಒಂದು ಭಾಗವಾಗಿದೆ. ಆದರೆ ಅವರು ಹೆಚ್ಚು ವಿಕೆಟ್‌ಗಳನ್ನು ಹೊಂದಿದ್ದರೆ, ಫಲಿತಾಂಶ ವಿಭಿನ್ನವಾಗಿರಬಹುದಾಗಿತ್ತು'' ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಧೋನಿ ಹೇಳಿದರು.
First published: