ಐಪಿಎಲ್ 13ನೇ ಆವೃತ್ತಿಯ ದಿನಾಂಕ ಹೊರಬಿದ್ದಿದೆ. ಅರಬ್ ರಾಷ್ಟ್ರದಲ್ಲಿ ಈ ಬಾರಿ ಪಂದ್ಯ ನಡೆಯಲಿದೆ. ಕೊರೋನಾ ಕಾಲಘಟ್ಟದಲ್ಲೂ ಎಲ್ಲಾ ತಂಡಗಳು ಭರದಿಂದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಕೆಲವರು ಮೈದಾನದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದರೆ. ಇನ್ನು ಕೆಲವರು ಐಪಿಎಲ್ಗಾಗಿ ಶಾಪಿಂಗ್ ಮಾಡುತ್ತಿದ್ದಾರೆ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಸುರೇಶ್ ರೈನಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಭ್ ಪಂತ್ ಬ್ಯಾಟ್ ಶಾಪಿಂಗ್ ಮಾಡುತ್ತಿದ್ದಾರೆ.
ಸುರೇಶ್ ರೈನಾ ಮತ್ತು ರಿಷಭ್ ಪಂತ್ ದೆಹಲಿಯಲ್ಲಿ ಜತೆಯಾಗಿ ಅಭ್ಯಾಸ ಮಾಡುತ್ತಿದ್ದಾರೆ. ಇದೀಗ ಜತೆಯಾಗಿ ಮೀರತ್ನಲ್ಲಿರುವ ಎಸ್ಜಿ ಕ್ರಿಕೆಟ್ ಫ್ಯಾಕ್ಟರಿಗೆ ತೆರಳಿ ಹೊಸ ಬ್ಯಾಟ್ ಖರೀದಿಸಿದ್ದಾರೆ.
ಈ ಬಗ್ಗೆ ವಿಡಿಯೋದ ಜೊತೆಗೆ ಟ್ವೀಟ್ ಮಾಡಿರುವ ಸುರೇಶ್ ರೈನಾ, ‘ನನ್ನ ಬ್ಯಾಟ್ ಅಂತಿಮಗೊಳಿಸುವ ಮೊದಲ ಹೆಜ್ಜೆಯೊಂದಿಗೆ, ಬಹುನಿರೀಕ್ಷಿತ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದೇನೆ. ಮತ್ತೆ ಮೈದಾನದತ್ತ ಹೋಗಲು ಕಾತುರನಾಗಿದ್ದೇನೆ. ಒಮ್ಮೆಗೆ ಒಂದೇ ಹೆಜ್ಜೆ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ರಿಷಭ್ ಪಂತ್ಗೆ ಟ್ಯಾಗ್ ಮಾಡಿದ್ದಾರೆ.
ಇನ್ನು ವಿಡಿಯೋದಲ್ಲಿ ಸುರೇಶ್ ರೈನಾ ಮತ್ತು ರಿಷಭ್ ಪಂತ್ ಮಾಸ್ಕ್ ಧರಿಸಿಕೊಂಡು ಬ್ಯಾಟ್ ಶಾಪಿಂಗ್ ಮಾಡಿದ್ದಾರೆ. ಬ್ಯಾಟ್ ಮುಟ್ಟಿದ ಬಳಿಕ ಸ್ಯಾನಿಟೈಸರ್ ಬಳಸಿ ಕೈಯನ್ನು ಸ್ವಚ್ಛ ಮಾಡಿಕೊಂಡಿದ್ದಾರೆ.
ಐಪಿಎಲ್ ಪಂದ್ಯಾಟಕ್ಕೆ ಸುಮಾರು 1 ತಿಂಗಳು ಮಾತ್ರ ಬಾಕಿ ಇದೆ. ಸೆಪ್ಟೆಂಬರ್ 19 ರಂದು ಪಂದ್ಯ ಪ್ರಾರಂಭವಾಗಲಿದೆ. ನವೆಂಬರ್ 8ಕ್ಕೆ ಅಂತಿಮ ಪಂದ್ಯ ನಡೆಯಲಿದೆ. ಕ್ರಿಕೆಟ್ ಪ್ರೇಮಿಗಳಂತೂ ತಮ್ಮ ತಂಡದ ನೆಚ್ಚಿನ ಪ್ರದರ್ಶನವನ್ನು ಕಾಣಲು ಕಾತುರರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ