Suresh Raina’s Wife- ಟ್ಯೂಷನ್​ಗೆ ಬರುತ್ತಿದ್ದ ಹುಡುಗಿ ಸುರೇಶ್ ರೈನಾಗೆ ಹೆಂಡತಿಯಾಗಿದ್ದು...

CSK Super Couple- ಅಣ್ಣನ ಬಳಿ ಟ್ಯೂಷನ್​ಗೆ ಬರುತ್ತಿದ್ದ ಹುಡುಗಿಯನ್ನೇ ಸುರೇಶ್ ರೈನಾ ಕೊನೆಗೆ ವರಿಸುತ್ತಾರೆ. ಬಾಲ್ಯದಲ್ಲೇ ಪರಿಚಯವಾದರೂ ಲವ್ ಹುಟ್ಟಿದ್ದು ಹಲವು ವರ್ಷಗಳ ಬಳಿಕ ಆಕಸ್ಮಿಕ ಭೇಟಿ ವೇಳೆ.

ಸುರೇಶ್ ರೈನಾ ಮತ್ತವರ ಪತ್ನಿ ಪ್ರಿಯಾಂಕಾ

ಸುರೇಶ್ ರೈನಾ ಮತ್ತವರ ಪತ್ನಿ ಪ್ರಿಯಾಂಕಾ

 • Cricketnext
 • Last Updated :
 • Share this:
  ಟೀಮ್ ಇಂಡಿಯಾ ಕ್ರಿಕೆಟಿಗರೆಂದರೆ ಸಿನಿಮಾ ಸ್ಟಾರ್ ನಟರಿಗಿಂತಲೂ ಜನಪ್ರಿಯತೆಯಲ್ಲಿ ಕಡಿಮೆ ಅಲ್ಲ. ಇವರ ವೈಯಕ್ತಿಕ ಬದುಕಿನ ಮೇಲೆ ಅಭಿಮಾನಿಗಳ ಕಣ್ಣಿದ್ದೇ ಇರುತ್ತದೆ. ಇವರು ಹೆಚ್ಚೆಚ್ಚು ರನ್ ಗಳಿಸಿದಷ್ಟೇ, ಹೆಚ್ಚೆಚ್ಚು ವಿಕೆಟ್ ಪಡೆದಷ್ಟೂ ಇವರ ವೈಯಕ್ತಿಕ ಬದುಕಿನ ವಿಚಾರಗಳು ಜನರಿಗೆ ಹೆಚ್ಚು ಕುತೂಹಲ ಮೂಡಿಸುತ್ತವೆ. ಇದು ಕೆಲ ಊಹಾಪೋಹಗಳಿಗೂ ಎಡೆ ಮಾಡಿಕೊಡುತ್ತವೆ.  ಇದೇನೇ ಇರಲಿ ಟೀಮ್ ಇಂಡಿಯಾದ ಅನೇಕ ಸೀನಿಯರ್ ಕ್ರಿಕೆಟರ್ಸ್ ಈಗಾಗಲೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಾಗಿದೆ. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಮೊದಲಾದವರು ಚೊಕ್ಕ ಸಂಸಾರ ಕಟ್ಟಿಕೊಂಡಿದ್ಧಾರೆ. ಮದುವೆಯಾದ ಕ್ರಿಕೆಟಿಗರಿಗೆ ತಮ್ಮ ಹೆಂಡತಿಯರ ಜೊತೆ ಇದ್ದ ಲವ್ ಸ್ಟೋರಿಗಳೂ ಸ್ವಾರಸ್ಯಕರವಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೂಪರ್ ಕಪಲ್ (Super Couple) ಎಂಬ ಕಾರ್ಯಕ್ರಮ ಸರಣಿ ನಡೆಸಿ ತನ್ನ ತಂಡದ ವಿವಾಹಿತ ಕ್ರಿಕೆಟಿಗರು ಹಾಗೂ ಅವರ ಹೆಂಡತಿಯರನ್ನ ಸಂದರ್ಶನ ಪ್ರಕಟಿಸುತ್ತಿದೆ. ಈ ಸರಣಿಯಲ್ಲಿ ಮೊದಲು ಬಂದಿದ್ದು ಸುರೇಶ್ ರೈನಾ (Suresh Raina) ಮತ್ತವರ ಪತ್ನಿ ಪ್ರಿಯಾಂಕಾ ಚೌಧರಿ (Priyanka Chaudhary Raina).

  ಆರು ವರ್ಷಗಳ ಇವರ ಸಂಸಾರ ಯಾನದ ಬಗ್ಗೆ ಪ್ರಿಯಾಂಕಾ ಮತ್ತು ಸುರೇಶ್ ರೈನಾ ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಮದುವೆಗೆ ಮುಂಚೆ ಇದ್ದ ಲವ್ ಸ್ಟೋರಿಯನ್ನೂ ಅವರು ಬಹಿರಂಗಗೊಳಿಸಿದ್ದಾರೆ. ಆಗ ಇನ್ನೂ ಶಾಲಾ ದಿನಗಳು. ಸುರೇಶ್ ರೈನಾ ಅವರ ಅಣ್ಣನ ಬಳಿ ಆಗ ಪ್ರಿಯಾಂಕಾ ಚೌಧರಿ ಪಾಠ ಕಲಿಯುತ್ತಿದ್ದರಂತೆ. ಹೀಗಾಗಿ, ಅವರ ಮನೆಗೆ ಅವರು ಸಾಕಷ್ಟು ಬಾರಿ ಬಂದು ಹೋಗುತ್ತಿದ್ದಂತೆ. ಆಗ ಪ್ರಿಯಾಂಕಾ ಅವರ ಪರಿಚಯ ಸುರೇಶ್ ರೈನಾ ಅವರಿಗಾಗಿದ್ದು. ಅದಾದ ಬಳಿಕ ಸುರೇಶ್ ರೈನಾ ಅವರನ್ನ ಪೋಷಕರು ಬೋರ್ಡಿಂಗ್ ಸ್ಕೂಲ್​ಗೆ ಸೇರಿಸುತ್ತಾರೆ. ಅಲ್ಲಿಂದ ಅವರಿಬ್ಬರ ಸಂಪರ್ಕ ಇರುವುದಿಲ್ಲ.

  ಮುಂದಿನ ದಿನಗಳಲ್ಲಿ ಸುರೇಶ್ ರೈನಾ ಕ್ರಿಕೆಟಿಗರಾಗಿ ಬೆಳೆದು ನಿಲ್ಲುತ್ತಾರೆ. 2008ರಲ್ಲಿ ಅವರು ಆಸ್ಟ್ರೇಲಿಯಾದಿಂದ ದೆಹಲಿಗೆ ಮರಳುವಾಗ ವಿಮಾನ ನಿಲ್ದಾಣದಲ್ಲಿ ಪ್ರಿಯಾಂಕಾ ಅವರನ್ನ ಆಕಸ್ಮಿಕವಾಗಿ ಸಂಧಿಸುತ್ತಾರೆ. ಆಗ ಅವರಿಬ್ಬರ ಮಧ್ಯೆ ನಿಕಟ ಭಾವನೆಗಳು ಕುಡಿಯೊಡೆಯುತ್ತವೆ. ಕ್ರಮೇಣ ಪ್ರೀತಿ ಗಾಢವಾಗಿ ಕೊನೆಗೆ ವಿವಾಹದಲ್ಲಿ ಅಂತ್ಯವಾಗುತ್ತದೆ. ಇವರಿಬ್ಬರ ದಾಂಪತ್ಯಕ್ಕೆ ರಯೋ ಮ ತ್ತು ಗ್ರೇಷಿಯಾ ಎಂಬಿಬ್ಬರು ಮಕ್ಕಳಿದ್ಧಾರೆ. ಕಳೆದ ವರ್ಷವಷ್ಟೇ ಸುರೇಶ್ ರೈನಾ ಮತ್ತು ಪ್ರಿಯಾಂಕಾಗೆ ಎರಡನೇ ಮಗು ಜನಿಸಿತ್ತು.

  ಸಿಎಸ್​ಕೆ ತಂಡದ ಈ ಸರಣಿ ಕಾರ್ಯಕ್ರಮದ ಮೊದಲ ಎಪಿಸೋಡ್​ನಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. ಇದರಲ್ಲಿ ಸುರೇಶ್ ರೈನಾ ಮಾತನಾಡುವಾಗ ಆತನ ಹೆಂಡತಿ ಪ್ರಿಯಾಂಕಾ ಮಂತ್ರಮುಗ್ಧಳಾದಂತೆ ಆಲಿಸುವ ದೃಶ್ಯ ಬಹಳ ಕ್ಯೂಟ್ ಆಗಿದೆ. ರೈನಾ ಕುಟುಂಬವನ್ನು ಸೇರುವ ಭಾಗ್ಯ ತನ್ನದಾಯಿತು ಎಂದು ಆಕೆ ಸಂತಸ ವ್ಯಕ್ತಪಡಿಸುತ್ತಾರೆ. ಆರು ವರ್ಷಗಳ ದಾಂಪತ್ಯ ಜೀವನ ಬಹಳ ಸುಮಧುರವಾಗಿದೆ ಎಂದು ಹೇಳುವ ಆಕೆ, ತಾವಿಬ್ಬರೂ ವಿಭಿನ್ನ ಹಿನ್ನೆಲೆಯವರಾದ್ದರಿಂದ ಹೊಂದಿಕೊಳ್ಳಲು ಆರಂಭದಲ್ಲಿ ಕಷ್ಟವಾಯಿತು ಎನ್ನುತ್ತಾರೆ.

  ಇದನ್ನೂ ಓದಿ: IPL 2021| ಸೆ.19 ರಿಂದ ಮತ್ತೆ ಐಪಿಎಲ್ ಹಬ್ಬ; ಕಳೆದ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾವ್ಯಾವ ತಂಡ ಯಾವ ಸ್ಥಾನದಲ್ಲಿತ್ತು?

  ಸುರೇಶ್ ರೈನಾ ಎಂದರೆ ಕ್ರಿಕೆಟ್ ಲೋಕಕ್ಕೆ ಸ್ಫೋಟಕ ಬ್ಯಾಟ್ಸ್​ಮನ್ ಎಂದು ನೆನಪಾಗಬಹುದು. ಆದರೆ, ಪತ್ನಿ ಪ್ರಿಯಾಂಕಾ ಪಾಲಿಗೆ ಸುರೇಶ್ ರೈನಾ ಒಳ್ಳೆಯ ಪತಿ ಹಾಗೂ ಒಳ್ಳೆಯ ತಂದೆಯಾಗಿದ್ದಾರೆ.

  ಸದ್ಯ ಸಿಎಸ್​ಕೆ ತಂಡದಲ್ಲಿರುವ ಸುರೇಶ್ ರೈನಾ ಮೊದಲ ಲೆಗ್​ನಲ್ಲಿ ಹೆಚ್ಚು ರನ್ ಗಳಿಸಿಲ್ಲ. ಕೆಲ ವರ್ಷಗಳಿಂದ ಅವರು ಫಾರ್ಮ್ ಕಳೆದುಕೊಂಡಿದ್ಧಾರೆ. ಹೀಗಾಗಿ, ಟೀಮ್ ಇಂಡಿಯಾದಲ್ಲಿ ಅವರು ಕಾಣಿಸುತ್ತಿಲ್ಲ. ಈಗ ಐಪಿಎಲ್ ಎರಡನೇ ಲೆಗ್​ನಲ್ಲಿ ಅವರು ಫಾರ್ಮ್​ಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಅಂಕಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರೆನಿಸಿರುವ ರೈನಾ ಯಾವಾಗ ಬೇಕಾದರೂ ಸಿಡಿಯಬಲ್ಲ ಛಾತಿ ಇರುವವರು. ಸೆ. 19ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆರ್ಭಟಿಸಿದರೆ ಅಚ್ಚರಿ ಇಲ್ಲ.
  Published by:Vijayasarthy SN
  First published: